
ಬೆಂಗಳೂರು(ಡಿ. 21) ಇವರು ಚಾಲಾಕಿ ಚತುರರು. ಕೊನೆಗೂ ಪೊಲೀಸರ (Bengaluru Police) ಬಲೆಗೆ ಬಿದ್ದಿದ್ದಾರೆ. ಗೋಧಿ ಹಿಟ್ಟಿನಲ್ಲಿ (Wheat flour) ಡ್ರಗ್ಸ್ (Drugs) ಸಪ್ಲೈ ಮಾಡ್ತಿದ್ದ ಗ್ಯಾಂಗ್ ಖಾಕಿ ಖೆಡ್ಡಾಕ್ಕೆ ಬಿದ್ದಿದೆ. ಮಯನ್ಮಾರ್(Myanmar) ಗಡಿ ಭಾಗದಿಂದ ರೈಲಿನಲ್ಲಿ (Indian Railways) ಬೆಂಗಳೂರಿಗೆ (Bengaluru) ಡ್ರಗ್ಸ್ ಸಪ್ಲೈ ಮಾಡುತಿದ್ದರು. ಗೋಧಿ ಹಿಟ್ಟಿನ ಬಾಕ್ಸ್ ನಲ್ಲಿ ಡ್ರಗ್ಸ್ ತಂದು ಸಣ್ಣ ಸಣ್ಣ ಡಬ್ಬಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು.
ಒಂದು ಗ್ರಾಂ ಹೆರಾಯಿನ್ ನನ್ನು 12 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಣಿಪುರ ಮೂಲದ ಸಮೀರ್ ಮತ್ತು ಖಾನ್ ಎಂಬುವರನ್ನು ಬಂಧಿಸಲಾಗಿದೆ. ಕೆಜಿ ಹಳ್ಳಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರೈಲಿನಲ್ಲಿ ಮಣಿಪುರದಿಂದ ನಗರಕ್ಕೆ ಬಂದು ಹೆರಾಯಿನ್ ಮಾರಾಟ ಮಾಡಿ ಊರಿಗೆ ಹೋಗುತ್ತಿದ್ದರು. ವಾರಕ್ಕೊಮ್ಮೆ ಬರುವುದು ಇವರ ವಾಡಿಕೆಯಾಗಿತ್ತು.
ಅಷ್ಟಕ್ಕೂ ಈ ಬಿಟ್ ಕಾಯಿನ್ ಗೂ ಡ್ರಗ್ಸ್ ಜಾಲಕ್ಕೂ ಏನ್ ಸಂಬಂಧ?
ಪ್ರತಿ ಬಾರಿಯೂ ಸ್ಥಳ ಬದಲಿಸಿ ಸಬ್ ಫೆಡ್ಲರ್ಸ್ ಹಾಗೂ ಹಳೇ ಕನ್ಸುಮರ್ಸ್ ಗೆ ಮಾರಾಟ ಮಾಡುತ್ತಿದ್ದರು. ಈ ಬಾರಿ ನಗರಕ್ಕೆ ಬಂದಿದ್ದಾಗ ಕೆಜಿ ಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೆರಾಯಿನ್ ಮಾರಾಟ ಮಾಡಿ ಊರಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಕಿರಾತಕರ ಬಂಧನವಾಗಿದೆ. ಇವರ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವ ಅನುಮಾನ ಇದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗಾಂಜಾ ಅಮಲಿನಲ್ಲಿದ ದೇವಾಲಯಕ್ಕೆ ಬೆತ್ತಲೆ ನುಗ್ಗಿದ್ದ: ಧಾರ್ಮಿಕ ಕ್ಷೇತ್ರ ಮೇಲುಕೋಟೆ (Melukote) ಶ್ರೀಚೆಲುವನಾರಾಯಣಸ್ವಾಮಿ ( Cheluvanarayana Swamy Temple)ದೇಗುಲದ ಗರ್ಭಗುಡಿ ಬಾಗಿಲು ಮುಂದೆ ಯುವಕ ಬೆತ್ತಲಾಗಿ (Naked) ನಿಂತು ಹುಚ್ಚಾಟ ಮೆರೆದಿದ್ದ ಪ್ರಕರಣ ವರದಿಯಾಗಿತ್ತು. ದೇವಾಲಯದ ಮುಂದೆ ಚುರುಮುರಿ ಮಾರಿ ಜೀವನ ನಿರ್ವಹಿಸುತ್ತಿದ್ದ ರಾಮ್‌ಕುಮಾರ್ ಹುಚ್ಚಾಟ ನಡೆಸಿದ್ದು ಗಾಂಜಾ (Ganja) ಸೇವೆನೆಯೇ ಈತನ ಹುಚ್ಚಾಟಕ್ಕೆ ಕಾರಣ ಎಂದು ಹೇಳಲಾಗಿತ್ತು.
ಹೊಸ ವರ್ಷಕ್ಕೂ ಮುನ್ನ ಕಾರ್ಯಾಚರಣೆ: ಅಂತಾರಾಜ್ಯ ಪೆಡ್ಲರ್‌ವೊಬ್ಬನನ್ನು(Interstate Peddler) ಸೆರೆ ಹಿಡಿದು ಸುಮಾರು 11 ಕೋಟಿ ಮೌಲ್ಯದ ಡ್ರಗ್ಸ್(Drugs) ಅನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಜಪ್ತಿ ಮಾಡಿದ್ದರು. ಕೆ.ಆರ್.ಪುರ ಸಮೀಪದ ಆವಲಹಳ್ಳಿ ನಿವಾಸಿ ಅನೂಪ್ ಮ್ಯಾಥ್ಯುವ್ಸ್ ಬಂಧಿಸಿ 11 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್ ಹಾಗೂ 250 ಗ್ರಾಂ ಗಾಂಜಾ(Marijuana) ಜಪ್ತಿ ಮಾಡಲಾಗಿತ್ತು.
ಗೋವಿಂದಪುರ ಡ್ರಗ್ಸ್ ಪ್ರಕರಣ: ಮಾದಕ ವಸ್ತು (Drugs) ಮಾರಾಟ ಜಾಲದ ಜತೆ ನಂಟು ಆರೋಪದ ಎದುರಿಸುತ್ತಿದ್ದ ಪ್ರತಿಷ್ಠಿತ ರಿಯಲ್ ಎಸ್ಟೇಟ್ (Real Estate) ಕಂಪನಿ ಪ್ರೆಸ್ಟೀಜ್ ಗ್ರೂಪ್‌ನ (Prestige Group) ಕಾರ್ಯನಿರ್ವಾಹಕ ನಿರ್ದೇಶಕಿ ಅಂಜುಂ ಜಂಗ್ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ (Medical Test) ಒಳಪಡಿಸಿದ್ದರು.
ಇನ್ನೊಂದು ಕಡೆ ವಿಚಾರಣೆಗೆ ಹಾಜರಾಗಲು ಸಿನಿಮಾಟೋಗ್ರಾಫರ್ ಸಂಜಯ್ ಹ್ಯಾರಿಸ್ ಗೆ ನೋಟಿಸ್ ನೀಡಲಾಗಿತ್ತು.. ಈ ಹಿಂದೆ ಕೂಡ ಸಂಜಯ್ ಹ್ಯಾರಿಸ್ ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಅನಾರೋಗ್ಯ ಕಾರಣ ನೀಡಿ ಗೈರಾಗಿದ್ದರು. ಪಾರ್ಟಿ ಆಯೋಜಕಿ ಆರ್ಜೂ ಸೇಟ್ ಗೂ ನೋಟಿಸ್ ನೀಡಲಾಗಿದ್ದು ಆಕೆ ಮುಂಬೈಗೆ ಹಾರಿದ್ದಾರೆ ಎನ್ನಲಾಗಿದೆ. ಪೆಡ್ಲರ್ ಥಾಮಸ್ ಕಾಲು ಜೊತೆಗೆ ಲಿಂಕ್ ಹೊಂದಿದಿರುವ ಆರೋಪ ಆರ್ಜೂ ಸೇಟ್ ಮೇಲಿದೆ.
ಎಲ್ಲಿಂದ ಶುರು: ಮುಂಬೈನಲ್ಲಿ ಬಾಲಿವುಡ್ ನಾಯಕ ಸುಶಾಂತ್ ಸಿಂಗ್ ನಿಗೂಢ ಸಾವಿನ ನಂತರ ಡ್ರಗ್ಸ್ ಸುಳಿ ತಲೆ ಎತ್ತಿತ್ತು. ಬಾಲಿವುಟ್ ನಟಿ ರಿಯಾ ಚಕ್ರವರ್ತಿ ಸೇರಿ ಅನೇಕ ನಟಿ ಮಣಿಗಳ ವಿಚಾರಣೆ ನಡೆಯಿತು. ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಮತ್ತು ಸಂಜನಾ ಗರ್ಲಾನಿ ಜೈಲು ವಾಸ ಅನುಭವಿಸಬೇಕಾಗಿ ಬಂದಿತ್ತು.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಹ ವಿಚಾರಣೆಯ ಹಂತದಲ್ಲಿಯೇ ಇದೆ. ನಟಿಯರ ತಲೆಕೂದಲು ಪರೀಕ್ಷೆ ವರದಿಯಲ್ಲಿ ಡ್ರಗ್ಸ್ ಸೇವಿಸಿದ್ದರ ಬಗ್ಗೆ ಸಾಕ್ಷ್ಯ ಸಿಕ್ಕಿದೆ. ಒಟ್ಟಿನಲ್ಲಿ ಎಲ್ಲಿಂದಲೋ ಹುಟ್ಟಿಕೊಂಡ ಡ್ರಗ್ಸ್ ಜಾಲಕ್ಕೆ ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಲೇ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ