ಸ್ವಲ್ಪ ಯಾಮಾರಿ ಡಾಬಾದಲ್ಲಿ ಮದ್ಯ ಸೇವಿಸಿದ್ರೆ ನಿಮ್ಮ ಜೀವಕ್ಕೆ ಆಪತ್ತು ಗ್ಯಾರೆಂಟಿ, ಚುನಾವಣೆ ಟಾರ್ಗೆಟ್ ಮಾಡಿ ಗ್ಯಾಂಗ್ ವೊಂದು ನಕಲಿ ಮದ್ಯ ಮಾರಾಟ, ಬ್ಯಾಂಡೆಡ್ ಕಂಪನಿಯ ಬಾಟಲ್ ನಲ್ಲಿ ನಕಲಿ ಮದ್ಯ ತುಂಬಿಸಿ ಮಾರಾಟ. ನಕಲಿ ಮದ್ಯ ಮಾರಾಟಕ್ಕೆ ಬ್ರಾಂಡೆಡ್ ಕಂಪನಿಯ ಕ್ಯಾಪ್, ಲೇಬಲ್‌ಗಳು ಬಳಕೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್
ರಾಯಚೂರು(ಏ.15): ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಈಗ ಚುನಾವಣೆ ಪ್ರಚಾರ ಜೋರಾಗಿ ಶುರುವಾಗಿದೆ. ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಹತ್ತಾರು ರೀತಿಯ ಕಸರತ್ತು ಶುರು ಮಾಡಿದ್ದಾರೆ. ಮತ್ತೊಂದು ಕಡೆ ನಾಯಕರು ಪ್ರಚಾರದ ವೇಳೆ ಹತ್ತಾರು ಕಾರ್ಯಕರ್ತರು ಮತ್ತು ಜನರನ್ನು ಸೇರಿಸಿಕೊಂಡು ಸಭೆ-ಸಮಾರಂಭ ಮಾಡಿ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡುವುದು ಈಗ ಹಳ್ಳಿ- ಹಳ್ಳಿಯಲ್ಲಿ ಕಾಣಬಹುದಾಗಿದೆ.
undefined
ಇಷ್ಟು ದಿನಗಳು ವ್ಯಾಪಾರ ಇಲ್ಲದೆ ಇರುವ ಹೋಟೆಲ್ ಮತ್ತು ಡಾಬಾಗಳಲ್ಲಿ ಈಗ ಭರ್ಜರಿ ವ್ಯಾಪಾರ ಶುರುವಾಗಿದೆ. ಅದರಲ್ಲೂ ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳು ಇದ್ದು, ಕಳೆದ ಬಾರಿ ಸೋತ ನಾಯಕರು ಗೆಲ್ಲಲು, ಕಳೆದ ಬಾರಿ ಗೆದ್ದವರು ಮತ್ತೊಮ್ಮೆ ವಿಜಯ ಸಾಧಿಸಲು ಪ್ರಚಾರಕ್ಕೆ ಇಳಿದ್ದಾರೆ. ಪ್ರಚಾರಕ್ಕೆ ಬಂದ ನಾಯಕರಿಗೆ ಊಟ ಮತ್ತು ರಾತ್ರಿ ಮದ್ಯ ನೀಡುವ ವ್ಯವಸ್ಥೆ ಎಲ್ಲೆಡೆಯೂ ಕಂಡು ಬರುತ್ತಿದೆ. ಕೆಲ ಪಕ್ಷದ ನಾಯಕರ ಜೊತೆಗೆ ಜನರು ಬಾರದೇ ಇರುವುದರಿಂದ ಅವರಿಗೆ ದಿನಕ್ಕೆ ಇಷ್ಟು ಕೂಲಿ ನೀಡಿ ಪ್ರಚಾರಕ್ಕೆ ಕಳೆದುಕೊಂಡ ಹೋಗುತ್ತಿದ್ದಾರೆ.
ರಾಯಚೂರು ಕದನ: ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
ಚುನಾವಣೆ ಪ್ರಚಾರದ ವೇಳೆ ಡಾಬಾಕ್ಕೆ ಹೋಗುವ ಮದ್ಯ ಪ್ರಿಯರೇ ಎಚ್ಚರ!
ಚುನಾವಣೆ ಆಯೋಗ ಈಗಾಗಲೇ ನೀತಿ ಸಂಹಿತೆ ಜಾರಿ ಮಾಡಿ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ. ಇಷ್ಟು ದಿನಗಳ ಕಾಲ ಟಿಕೆಟ್ ಗಾಗಿ ಪರದಾಟ ನಡೆಸಿದ ನಾಯಕರು, ಈಗ ಟಿಕೆಟ್ ಪಡೆದು ಕ್ಷೇತ್ರದಲ್ಲಿ ಬೆಳಗ್ಗೆಯಿಂದ ರಾತ್ರಿ 10 ಗಂಟೆವರೆಗೂ ಬಿಡುವಿಲ್ಲದೆ ಓಡಾಟ ನಡೆ ಮತಯಾಚನೆ ಮಾಡುತ್ತಿದ್ದಾರೆ. ಇದೇ ಬಂಡವಾಳ ಮಾಡಿಕೊಂಡ ಕೆಲ ಡಾಬಾಗಳು ಮದ್ಯ ಪ್ರಿಯರಿಗೆ ಮೋಸ ಮಾಡಲು ಹೊಸ ತಂತ್ರವೊಂದು ಕಂಡುಕೊಂಡಿದ್ದಾರೆ. ಡಾಬಾಕ್ಕೆ ಊಟಕ್ಕೆ ಬಂದವರು ಮದ್ಯ ಸೇವನೆ ಮಾಡಿ ಊಟ ಮಾಡುವುದು ಕಾಮಾನ್. ಇದೇ ಸಮಯವೆಂದು ಡಾಬಾದಲ್ಲಿ ನಕಲಿ ಮದ್ಯವನ್ನು ಬ್ರಾಂಡೆಡ್ ಕಂಪನಿಯ ಮದ್ಯದ ಬಾಟಲಿ ಹಾಕಿ ಮಾರಾಟ ಮಾಡುವ ಗ್ಯಾಂಗ್ ವೊಂದು ರಾಯಚೂರು ಜಿಲ್ಲೆಯಲ್ಲಿ ತನ್ನ ದಂಧೆ ನಡೆಸಿದೆ. ಹೀಗಾಗಿ ಮದ್ಯ ಪ್ರಿಯರು ಎಚ್ಚರದಿಂದ ಇರಬೇಕಾಗಿದೆ.
ಚುನಾವಣೆ ಟಾರ್ಗೆಟ್ ಮಾಡಿ ಗ್ಯಾಂಗ್ ವೊಂದು ನಕಲಿ ಮದ್ಯ ಮಾರಾಟ
ಅಸೆಂಬ್ಲಿ ಎಲೆಕ್ಷನ್ ಗೆ ಮುಹೂರ್ತ ಫಿಕ್ಸ್ ಆಗಿದೆ. ರಾಜಕೀಯ ಪಕ್ಷಗಳ ಅಂತಿಮ ಪಟ್ಟಿಗೂ ಕ್ಷಣಗಣನೆ ಶುರುವಾಗಿದೆ.ಈ ಹೊಸ್ತಿಲಿನಲ್ಲೇ ಬಿಸಿಲು ನಗರಿ ರಾಯಚೂರು ಜಿಲ್ಲೆಯಲ್ಲಿ ಆಘಾತಕಾರಿ ಸಂಗತಿವೊಂದು ಬೆಳಕಿಗೆ ಬಂದಿದೆ. ರಾಯಚೂರು ಜಿಲ್ಲೆಯ ಕೆಲವೆಡೆ ಬ್ರಾಂಡೆಡ್ ಮದ್ಯದ ಬಾಟಲ್ ಗೆ ಕಡಿಮೆ ಬೆಲೆಯ ಮದ್ಯ ಸಂಗ್ರಹ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ.
ಮುಂಬೈನಿಂದ ಬ್ರಾಂಡೆಡ್ ಕ್ಯಾಪ್,ಲೇಬಲ್ ತರಿಸಿಕೊಂಡು ಆ ಬ್ರಾಂಡೆಡ್ ಮದ್ಯದ ಬಾಟಲಿನಲ್ಲಿ ಕಳಪೆ ಮತ್ತು ಕಡಿಮೆ ಬೆಲೆಯ ಮದ್ಯ ತುಂಬಿಸಿ ಅದನ್ನು ಡಾಬಾದಲ್ಲಿ ಇಟ್ಟು ಮಾರಾಟ ಮಾಡಲಾಗುತ್ತಿದೆ. ಈ ಮಾಹಿತಿ ತಿಳಿದ ಅಬಕಾರಿ ಪೊಲೀಸರು ನಾಲ್ಕು ಕಡೆ ದಾಳಿ ನಡೆಸಿದಾಗ ಮದ್ಯದ ಅಸಲಿ ಬಣ್ಣ ಬಯಲಾಗಿದೆ.
ಟಿಕೆಟ್ ಘೋಷಣೆ ವಿಳಂಬ: ರಾಯಚೂರಲ್ಲಿ ರಂಗೇರದ ಚುನಾವಣಾ ಅಖಾಡ..!
ದಾಳಿ ಮಾಡಿದ ಅಬಕಾರಿ ಪೊಲೀಸರೇ ನಕಲಿ ಮದ್ಯ ನೋಡಿ ಶಾಕ್
ವಿಧಾನಸಭಾ ಚುನಾವಣೆ ಮತದಾನ ಮೇ.10ರಂದು ನಿಗದಿಯಾಗಿದೆ. ಮತಬ್ಯಾಂಕ್ ಭರ್ತಿ ಮಾಡಿಕೊಳ್ಳಲು ನಾಯಕರು ಮತ್ತು ಕಾರ್ಯಕರ್ತರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬೆಳಗ್ಗೆ ಮನೆ ಬಿಟ್ಟವರು ರಾತ್ರಿಯೇ ಮನೆಗಳಿಗೆ ಹೋಗುತ್ತಿದ್ದಾರೆ.ಬೆಳಗ್ಗೆ ಹೋಟೆಲ್ ನಲ್ಲಿ ತಿಂಡಿ, ಮಧ್ಯಾಹ್ನ ಡಾಬಾದಲ್ಲಿ ಊಟ ಮದ್ಯ ಸೇವನೆ ಕಾಣಬಹುದಾಗಿದೆ. ಭರ್ಜರಿ ದುಡ್ಡು ಮಾಡಬೇಕು ಎಂಬ ಕೆಲ ಡಾಬಾಗಳ ಮಾಲೀಕರು ನಕಲಿ ಮದ್ಯಮಾರಾಟದ ಗ್ಯಾಂಗ್ ಜೊತೆಗೆ ಕೈಜೋಡಿಸಿ ಜನರ ಆರೋಗ್ಯದ ಜೊತೆಗೆ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ಆಧಾರಿಸಿ ಅಬಕಾರಿ ಪೊಲೀಸರು ವಿವಿಧ ಡಾಬಾಗಳ ಮೇಲೆ ದಾಳಿ ಮಾಡಿದಾಗ ಅಬಕಾರಿ ಪೊಲೀಸರೇ ಕೆಲಕಾಲ ಶಾಕ್ ಆಗಿದ್ರು. ನಾಲ್ಕು ಕಡೆಯಲ್ಲಿ ದಾಳಿ ಮಾಡಿದ ರಾಯಚೂರು ಅಬಕಾರಿ ಪೊಲೀಸರು ಲಕ್ಷಾಂತರ ರೂ.ಮೌಲ್ಯದ 500ಕ್ಕೂ ಹೆಚ್ಚು ಮದ್ಯದ ಬ್ರಾಂಡೆಡ್ ಕಂಪನಿ ಕ್ಯಾಪ್,ಲೇಬಲ್ ಗಳು,80ಕ್ಕೂ ಹೆಚ್ಚು ಲೀಟರ್ ಮದ್ಯ, ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ ಹೋಂಡಾ ಆಕ್ಟಿವಾ ಬೈಕ್ ಹಾಗೂ ಆಟೋವನ್ನ ಜಪ್ತಿ ಮಾಡಿದ್ದಾರೆ. ಅಷ್ಟೇ ಅಲ್ಲದೇ 200 ರೂ. ಬೆಲೆಯ ಬ್ರಾಂಡೆಡ್ ಮದ್ಯದ ಖಾಲಿ ಬಾಟಲ್ ಗೆ, ಅತೀ ಕಡಿಮೆ 50-60ರೂ. ಬೆಲೆಯ ಮದ್ಯ ಸಂಗ್ರಹ ಮಾಡುವಾಗ ಆರೋಪಿಯನ್ನ ರೆಡ್ ಹ್ಯಾಂಡ್ ಸೆರೆ ಹಿಡಿದಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗುವರು ಡಾಬಾದಲ್ಲಿ ಮದ್ಯ ಸೇವನೆ ಮಾಡುವ ಮುನ್ನ ಎಚ್ಚರವಹಿಸಬೇಕಾಗಿದೆ. ಎಚ್ಚರ ತಪ್ಪಿದ್ರೆ ನಿಮ್ಮ ಜೇಬಿಗೂ ಕತ್ತರಿ ಬೀಳುತ್ತೆ ನಿಮ್ಮ ಆರೋಗ್ಯವೂ ಹಾಳಾಗುತ್ತೆ.