ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಾ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳದ ತಂಗಿಯ ಗಂಡ ಬುದ್ಧಿ ಹೇಳಲು ಬಂದ ಭಾಮೈದನನ್ನು ಸ್ವತಃ ಭಾವನೇ ಹಾಡು ಹಗಲೇ ಚಾಕು ಚುಚ್ಚಿ ಕೊಲೆ ಮಾಡಲಾಗಿದೆ.
ಯಾದಗಿರಿ (ಏ.14): ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಾ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳದ ತಂಗಿಯ ಗಂಡ ಬುದ್ಧಿ ಹೇಳಲು ಬಂದ ಭಾಮೈದನನ್ನು ಸ್ವತಃ ಭಾವನೇ ಹಾಡು ಹಗಲೇ ಚಾಕು ಚುಚ್ಚಿ ಕೊಲೆ ಮಾಡಿದ ಘಟನೆ ಯಾದಗಿರಿ ಪಟ್ಟಣದಲ್ಲಿ ನಡೆದಿದೆ.
ಕೌಟುಂಬಿಕ ಕಲಹ ಹಾಡುಹಗಲೇ ಎದೆಗೆ ಚಾಕು ಇರಿದು ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯ ಕೊಲೆ ಮಾಡಲಾಗಿದೆ. ಯಾದಗಿರಿ ನಗರದ ಲಾಡೀಸ್ ಗಲ್ಲಿಯ ಸ್ಟೇಷನ್ ಏರಿಯಾದಲ್ಲಿ ನಡೆದಿದೆ. ಲಾಡೀಸ್ ಗಲ್ಲಿಯ ಸಲೀಂ (30) ಕೊಲೆಯಾದ ವ್ಯಕ್ತಿ ಆಗಿದ್ದಾನೆ. ಸಲೀಂನ ತಂಗಿಯ ಗಂಡ ಮೆಹಬೂಬ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾರೆ. ಮೆಹಬೂಬನ ತಮ್ಮ ಕರೀಂ ಹಾಗೂ ತಂದೆ ಅಹ್ಮದ್ ಕೂಡ ಸಲೀಂನ ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು ಆಗಿದ್ದಾರೆ.
undefined
ಮೂಡಿಗೆರೆ ಪೊಲೀಸ್ ಠಾಣೆ ಮೇಲಿಂದ ಜಿಗಿಯಲು ಯತ್ನಿಸಿದ ಮಹಿಳೆ: ವ್ಯಾಜ್ಯ ಇತ್ಯರ್ಥಕ್ಕೆ ಪಟ್ಟು
ಕುಡಿಯಬೇಡ ಎಂದಿದ್ದಕ್ಕೆ ಕುಟುಂಬದವರು ಸೇರಿ ಹಲ್ಲೆ: ಇನ್ನು ಘಟನೆಗೆ ಬರುವುದಾದರೆ ಯಾದಗಿರಿ ಪಟ್ಟಣದ ಲಾಡೀಸ್ ಗಲ್ಲಿಯಲ್ಲಿ ವಾಸವಾಗಿರುವ ಮೆಹಬೂಬನಿಗೆ ಕಳೆದ 6 ತಿಂಗಳ ಹಿಂದಷ್ಟೇ ರುಬೀನಾಳನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ, ಮೆಹಬೂಬ ಕುಡಿತಕ್ಕೆ ದಾಸನಾಗಿದ್ದನು. ಇದೇ ಕಾರಣಕ್ಕೆ ಮೆಹಬೂಬನ ಹೆಂಡತಿ ರುಬೀನಾ ಕುಡಿತ ಬೇಡ ಎಂದು ಬುದ್ದಿ ಮಾತು ಹೇಳಿದ್ದಳು. ಬುದ್ದಿ ಮಾತು ಹೇಳಿದ್ದಕ್ಕೆ ಮೆಹಬೂಬನ ಕುಟುಂಬಸ್ಥರು ರುಬೀನಾ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ ತಂಗಿಯ ಗಂಡನಿಗೆ ಬುದ್ದಿ ಮಾತು ಹೇಳಲು ಸಲೀಂ ಊರಿನಿಂದ ಬಂದಿದ್ದನು.
ಸಲೀಂನ ಎದೆಗೆ ಚಾಕು ಚುಚ್ಚಿದ ಮೆಹಬೂಬ: ಇನ್ನು ಬುದ್ಧಿ ಮಾತನ್ನು ಹೇಳು ಬಂದಿದ್ದ ಭಾಮೈದ ಸಲೀಂನೊಡನೆ ಮಾತಿಗೆ ಮಾತು ಬೆಳೆದು ತಂಗಿಯ ಗಂಡ ಮೆಹಬೂಬನಿಗೆ ಹೊಡೆದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ಇಡೀ ಕುಟುಂಬಸ್ಥರು ಹಲ್ಲೆಗೆ ಮುಂದಾಗಿದ್ದಾರೆ. ಇನ್ನು ಮನೆಯ ಗಲಾಟೆ ನಡೆದ ಸ್ಥಳದಲ್ಲಿ ನೂರಾರು ಜನರು ಬಂದು ನೋಡುತ್ತಿದ್ದರೂ ಎಲ್ಲರ ಮುಂದೆಯೂ ರುಬೀನಾಳ ಅಣ್ಣ ಸಲೀಂನ ಎದೆಗೆ ಮೆಹಬೂಬ ಚಾಕುವನ್ನು ಚುಚ್ಚಿದ್ದಾನೆ. ಇನ್ನು ಇದನ್ನು ತಡೆಯದೇ ತಂದೆ ಮತ್ತು ಇನ್ನೊಬ್ಬ ಸಹೋದರ ಕೂಡ ಪ್ರೋತ್ಸಾಹ ನಿಡಿದ್ದಾರೆ. ಸ್ಥಳದಲ್ಲಿಯೇ ಸಲೀಂ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾನೆ.
ಕೊಡಗಿನಲ್ಲಿ ಕಾರು- ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಹಸುಗೂಸು ಸೇರಿ ಮಂಡ್ಯ ಮೂಲದ ಆರು ಮಂದಿ ಸಾವು
ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಸಲೀಂ: ಇನ್ನು ಮೃತ ಸಲೀಂ ಬೆಂಗಳೂರಿನಲ್ಲಿ ಡ್ರೈಪ್ರೂಟ್ಸ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದನು. ಇನ್ನು ತಂಗಿಯ ಗಂಡ ಸಲೀಂ ನಿನ್ನೆಯಷ್ಟೇ ಯಾದಗಿರಿಗೆ ಬಂದಿದ್ದನು. ಈಗ ತಂಗಿಯ ಬಾಳು ಸರಿಮಾಡಲು ಹೋಗಿ ಹೆಣವಾಗಿದ್ದಾನೆ. ಇನ್ನು ಜಗಳದಲ್ಲಿ ಆರೋಪಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ರಿಕ್ಷಾ ಗುದ್ದಿ ಗರ್ಭಿಣಿ ಸಾವು: ನಿನ್ನೆ ಕಾರವಾರದಲ್ಲಿ ಗರ್ಭಿಣಿ ಮಹಿಳೆಗೆ ಆಟೋ ರಿಕ್ಷಾ ಢಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದಲ್ಲಿ ನಡೆದಿದೆ. ಗರ್ಭಿಣಿ ರಸ್ತೆ ಬದಿ ತೆರಳುತ್ತಿದ್ದ ವೇಳೆ ರಿಕ್ಷಾ ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಶೋಭಾ ಗೋಪಾಲ ನಾಯಕ(28) ಮೃತ ದುರ್ದೈವಿಯಾಗಿದ್ದು, ಈಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಗಂಡನೊಂದಿಗೆ ಮನೆಯ ಎದುರಿನ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಅಪಘಾತವಾಗಿ ಈ ದುರಂತ ನಡೆದಿದೆ. ಅತಿವೇಗವಾಗಿ ಅಜಾಕರೂಕತೆಯಿಂದ ಬಂದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ನಡೆದಿದೆ. ರಿಕ್ಷಾ ಢಿಕ್ಕಿಯಾದ ರಭಸಕ್ಕೆ ಗಂಭೀರ ಗಾಯಗೊಂಡು ಗರ್ಭಿಣಿ ಉಸಿರು ಚೆಲ್ಲಿದ್ದಾರೆ.