
ಬೆಂಗಳೂರು(ಏ.15): ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯ ಹಾಗೂ ಟಿ.ವಿ.ಯಲ್ಲಿ ಪಂದ್ಯದ ನೇರಪ್ರಸಾರದ ನಡುವಿನ 10 ಸೆಕೆಂಡ್ ಅಂತರವನ್ನು ಬಂಡವಾಳ ಮಾಡಿಕೊಂಡು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಹೊರರಾಜ್ಯದ ನಾಲ್ವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣ ಮೂಲದ ವಿಶಾಂತ್, ಅಮರ್ ಜಿತ್ ಸಿಂಗ್, ಮೋಹಿತ್ ಬಾತಾ, ದುಶ್ಯಂತ್ ಕುಮಾರ್ ಸೋನಿ ಬಂಧಿತರು. ಐಪಿಎಲ್ ಕ್ರಿಕೆಟ್ಟ್ ಪಂದ್ಯದ ವೇಳೆ ತಂಡವೊಂದು ಬೆಟ್ಟಿಂಗ್ ನಡೆಸುವ ಬಗ್ಗೆ ಬಾತ್ಮೀದಾರರಿಂದ ದೊರೆತ ಮಾಹಿತಿ ಮೇರೆಗೆ ಇತ್ತೀಚೆಗೆ ನಗರದ ಚಿನ್ನಸಾ್ವಮಿ ಕಿ್ರಕೆಟ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಂಚನೆ ಕೇಸ್: ಫ್ರೀಡಂ ಆ್ಯಪ್ ಸಿಇಒ ಸುಧೀರ್ ಬಂಧನ
ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುವಾಗ ಮೊಬೈಲ್‌ನಲ್ಲಿ ಹೆಚ್ಚು ಸಕ್ರಿಯವಾಗಿರುವವರು ಹಾಗೂ ಅನುಮಾನಾಸ್ಪದವಾಗಿ ಓಡಾಡುವವರ ಬಗೆ್ಗ ಪೊಲೀಸರು ನಿಗಾವಹಿಸಿದ್ದರು. ಅದರಂತೆ ಈ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಕ್ರಿಕೆಟ್ ಬೆಟ್ಟಿಂಗ್‌ನ ವಿವಿಧ ಆ್ಯಪ್‌ಗಳಿರುವುದು ಪತೆ್ತಯಾಗಿತು್ತ. ಬಳಿಕ ಬಂಧಿಸಿ ವಿಚಾರಣೆಗೆ ಮಾಡಿದಾಗ ಬೆಟಿ್ಟಂಗ್ ದಂಧೆಯ ಬಗೆ್ಗ ಬಾಯಿ್ಬಟಿ್ಟದಾ್ದರೆ.
ವ್ಯವಸ್ಥಿತ ಜಾಲ:
ಈ ಬೆಟ್ಟಿಂಗ್ ದಂಧೆಯ ಹಿಂದೆ ದೊಡ್ಡ ಜಾಲವೇ ಕಾರ್ಯನಿರತವಾಗಿದೆ. ದೇಶದ ಯಾವುದೇ ಮೈದಾನದಲ್ಲಿ ಐಪಿಎಲ್ ಕಿ್ರಕೆಟ್ ಪಂದ್ಯ ನಡೆದರೂ ಅಲಿ್ಲಗೆ ತೆರಳುತಿ್ತದ್ದ ಆರೋಪಿಗಳ ತಂಡ, ಮೈದಾನದಲ್ಲಿ ಕುಳಿತು ಪಂದ್ಯ ವೀಕಿ್ಷಸುತಾ್ತ ಬೆಟಿ್ಟಂಗ್ ದಂಧೆ ನಡೆಸುತಿ್ತತು್ತ. ಒಂದು ಪಂದ್ಯ ಆರಂಭವಾಗಿ ಮುಗಿಯುವುದರೊಳಗೆ ಲಕಾ್ಷಂತರ ರುಪಾಯಿ ಸಂಪಾದಿಸುತಿ್ತತು್ತ. ಈ ಗಾ್ಯಂಗ್ ದೇಶಾದ್ಯಂತ ತಮ್ಮ ಸಹಚರರನು್ನ ಹೊಂದಿದು್ದ, ವ್ಯವಸಿ್ಥತವಾಗಿ ಬೆಟಿ್ಟಂಗ್ ದಂಧೆ ನಡೆಸುತಿ್ತರುವುದು ಪಾ್ರಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಈ ದಂಧೆಯಲ್ಲಿ ಯಾರೆಲಾ್ಲ ಭಾಗಿಯಾಗಿದಾ್ದರೆ ಎಂಬುದು ಸೇರಿದಂತೆ ಹಲವು ವಿಚಾರಗಳು ಹೆಚಿ್ಚನ ತನಿಖೆಯಿಂದ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದಾ್ದರೆ.
ಬೆಟ್ಟಿಂಗ್ ಹೇಗೆ?
ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯವನು್ನ ಟಿ.ವಿ.ಯಲ್ಲಿ ನೇರ ಪ್ರಸಾರ ಮಾಡುವಾಗ ಪಂದ್ಯಕೂ್ಕ ಟಿ.ವಿ.ನೇರ ಪ್ರಸಾರಕೂ್ಕ 10 ಸೆಕೆಂಡ್ ಅಂತರ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಈ ತಂಡ ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಗ್ಯಾಂಗ್‌ನ ಒಂದು ತಂಡ ಮೈದಾನಕ್ಕೆ ತೆರಳಿ ಪ್ರತಿ ಬಾಲ್ ಬಗ್ಗೆ ಹೊರಗಿರುವ ತಮ್ಮ ಗಾ್ಯಂಗ್‌ನ ಸಹಚರರಿಗೆ ಸಂದೇಶ ಕಳುಹಿಸುತ್ತು. ಈ ಸಂದೇಶವನ್ನು ಆಧರಿಸಿ ಹೊರಗಿನ ಗ್ಯಾಂಗ್ ತಮ್ಮ ಸಂಪಕರ್ದಲ್ಲಿ ಇರುವವರೊಂದಿಗೆ ಬೆಟ್ಟಿಂಗ್ ನಡೆಸಿ ಅಕ್ರಮವಾಗಿ ಹಣ ಗಳಿಸುತ್ತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ