ಅಪಘಾತ ತಪ್ಪಿಸಲು ಸಡೆನ್ ಬ್ರೇಕ್; ಚಾಲಕನ ದೇಹದೊಳಗೆ ನುಗ್ಗಿದ ಕಬ್ಬಿಣದ ರಾಡ್!

By Ravi Janekal  |  First Published Nov 26, 2023, 5:17 PM IST

ಅಪಘಾತ ತಪ್ಪಿಸಲು ಸಡನ್ ಬ್ರೇಕ್ ಹಾಕಿದ ಪರಿಣಾಮ ಲಾರಿ ಚಾಲಕನ ದೇಹದೊಳಗೆ ಕಬ್ಬಿಣದ ರಾಡ್ ಸಿಲುಕಿ ನೋವಿನಿಂದ ಒದ್ದಾಡಿದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.


ಬಾಗಲಕೋಟೆ (ನ.26): ಅಪಘಾತ ತಪ್ಪಿಸಲು ಸಡನ್ ಬ್ರೇಕ್ ಹಾಕಿದ ಪರಿಣಾಮ ಲಾರಿ ಚಾಲಕನ ದೇಹದೊಳಗೆ ಕಬ್ಬಿಣದ ರಾಡ್ ಸಿಲುಕಿ ನೋವಿನಿಂದ ಒದ್ದಾಡಿದ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ಚಾಲಕ ಫೈಯದ್, ಕ್ಲೀನರ್ ಯಾಕೂ ಖಾನ್ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ. ಕಬ್ಬಿಣದ ರಾಡ್ ಸಾಗಿಸುತ್ತಿದ್ದ ಲಾರಿ. ರಾಜಸ್ತಾನದಿಂದ ಮಹಾರಾಷ್ಟ್ರ ಕಡೆಗೆ ಹೊರಟಿದ್ದ ವೇಳೆ ರಸ್ತೆಗೆ ಅಡ್ಡಬಂದ ಕಾರು. ಈ ವೇಳೆ ಚಾಲಕ ಕಾರಿಗೆ ಡಿಕ್ಕಿಯಾಗಿ ಅಪಘಾತವಾಗುವುದನ್ನು ತಪ್ಪಿಸಲು ಸಡೆನ್ ಬ್ರೇಕ್ ಹಾಕಿದ್ದಾನೆ. ಲಾರಿ ಪಲ್ಟಿಯಾಗಿ ಹಿಂಬದಿಯಲ್ಲಿ ತುಂಬಿದ್ದ ಕಬ್ಬಿಣದ ರಾಡ್ ಗಳು ಬ್ರೇಕ್ ಹಾಕುತ್ತಿದ್ದಂತೆ ಮುಂದಕ್ಕೆ ನುಗ್ಗಿವೆ. 

Tap to resize

Latest Videos

undefined

ಮಕ್ಕಳನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ಗೃಹಿಣಿ ಆತ್ಮಹತ್ಯೆ! 

ಭೀಕರ ಅಪಘಾತಕ್ಕೆ ಸಿಲುಕಿ ಲಾರಿಯಲ್ಲಿ ಸಿಲುಕಿದ್ದ ಚಾಲಕ, ಕ್ಲೀನರ್‌ ಹೊರತೆಗೆಯಲು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಬೇಕಾಯಿತು. ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಲಾರಿ ಚಾಲಕ, ಕ್ಲೀನರ್ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಡಕೆ ಕೊಯ್ಯುವಾಗ ವಿದ್ಯುತ್‌ ತಗುಲಿ ಕೃಷಿ ಕಾರ್ಮಿಕ ಸಾವು

ಶಂಕರನಾರಾಯಣ: ಅಡಕೆ ತೋಟದಲ್ಲಿ ಅಡಕೆ ಕೊಯ್ಯತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶವಾಗಿ ಮರದಿಂದ ಕೆಳಗೆ ಬಿದ್ದು ಕೃಷಿ ಕಾರ್ಮಿಕ ಮೃತಪಟ್ಟಿರುವ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವಿಜಯ (46) ಎಂಬವರು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ.

BSNL ಅಧಿಕಾರಿಗಳ ಕಳ್ಳಾಟಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದಂಪತಿ!

ಅವರು ಶನಿವಾರ ಬೆಳಗ್ಗೆ 10 ಗಂಟೆಗೆ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಶಿಬು ಎಂಬವರ ತೋಟದಲ್ಲಿ ಅಡಿಕೆ ಕೊಯ್ಯುವಾಗ ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದಾರೆ. ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!