ಕಾರಿನ ಮೇಲೆ ಮಗುಚಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿಯ ಕೆಳಗೆ ಸಿಲುಕಿ ಕಾರು ನಜ್ಜುಗುಜ್ಜಾಗಿ ಒಂದೇ ಕುಟುಂಬದ ತಾಯಿ ಮತ್ತು ಮಗಳು ಇಬ್ಬರು ಕಾರಿನಲ್ಲಿಯೇ ಸಾವನಪ್ಪಿದ ಘಟನೆ ಆನೇಕಲ್ ಬಳಿ ನಡೆದಿದೆ.
ಆನೇಕಲ್/ಬನ್ನೇರುಘಟ್ಟ (ಫೆ.01): ಕಾರಿನ ಮೇಲೆ ಮಗುಚಿ ಬಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿಯ ಕೆಳಗೆ ಸಿಲುಕಿ ಕಾರು ನಜ್ಜುಗುಜ್ಜಾಗಿ ಒಂದೇ ಕುಟುಂಬದ ತಾಯಿ ಮತ್ತು ಮಗಳು ಇಬ್ಬರು ಕಾರಿನಲ್ಲಿಯೇ ಸಾವನಪ್ಪಿದ ಘಟನೆ ಆನೇಕಲ್ ಬಳಿ ನಡೆದಿದೆ. ಗಾಯತ್ರಿ (46) ಸಮತಾ (15) ಮೃತರು. ಶೇರ್‌ವುಡ್ ಹೈಸ್ಕೂಲ್‌ಗೆ ಬಿಟ್ಟು ಬರಲು ತೆರಳುತ್ತಿದ್ದಾಗ ಘಟನೆ ನಡೆದಿದ್ದು, ಮೃತರೆಲ್ಲರು ಕಗ್ಗಲೀಪುರ ಸಮೀಪದ ತರಳು ವಾಸಿಗಳಾಗಿದ್ದಾರೆ. ಇನ್ನು ಕಾರಿನಲ್ಲಿಯೇ ಮೃತದೇಹ ಸಿಲುಕಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರ ದೌಡಯಿಸಿದ್ದಾರೆ. ಘಟನೆಗೆ ಕಾಂಕ್ರೀಟ್ ಮಿಕ್ಸರ್ ಚಾಲಕನ ಅತಿ ವೇಗವೇ ಕಾರಣವಾಗಿದ್ದು, ಅಪಘಾತ ಬಳಿಕ ಚಾಲಕ ಪರಾರಿಯಾಗಿದ್ದಾನೆ.
ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆಗೆ ಅಪ್ಪಳಿಸಿದ ಬೈಕ್: ವೇಗವಾಗಿ ಚಾಲನೆ ವೇಳೆ ನಿಯಂತ್ರಣ ಕಳೆದುಕೊಂಡು ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಶವಂತಪುರದ ಸುಬೇದಾರ್ ಪಾಳ್ಯ ನಿವಾಸಿ ರಾಜೇಶ್ ಆಚಾರ್ಯ (28) ಮೃತ ಸವಾರ. ಪರಶುರಾಮ್ ಹಟ್ಟಿ(29) ಗಂಭೀರವಾಗಿ ಗಾಯಗೊಂಡಿರುವ ಹಿಂಬದಿ ಸವಾರ. ಸದ್ಯಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ವರದಕ್ಷಿಣೆ ಹಿಂಸೆ: ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು
ಸೋಮವಾರ ಮುಂಜಾನೆ 2ರ ಸುಮಾರಿಗೆ ಸ್ಯಾಂಕಿ ರಸ್ತೆ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿ ಘಟನೆ ಸಂಭವಿಸಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಎಸಿ ಟೆಕ್ನೀಶಿಯನ್ ಆಗಿರುವ ರಾಜೇಶ್ ಆಚಾರ್ಯ ಸೋಮವಾರ ತಡರಾತ್ರಿ ಸ್ನೇಹಿತ ಪರಶುರಾಮ್ ಹಟ್ಟಿಜತೆಗೆ ದ್ವಿಚಕ್ರ ವಾಹನದಲ್ಲಿ ಸುತ್ತಾಡಲು ಬಂದಿದ್ದರು. ವಿಧಾನಸೌಧ, ಹೈಕೋರ್ಟ್ ನೋಡಿಕೊಂಡು ಹೈಗ್ರೌಂಡ್ಸ್ ಜಂಕ್ಷನ್ ಕಡೆಯಿಂದ ವಿಂಡ್ಸರ್ ಮ್ಯಾನರ್ ಕಡೆಗೆ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬರುವಾಗ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ.
ಪೊಲೀಸರ ಹೆಸರಿನಲ್ಲಿ ಯುವಕ-ಯುವತಿಯಿಂದ ಹಣ ಸುಲಿದ ಹೋಮ್ ಗಾರ್ಡ್ ಜೈಲಿಗೆ
ಈ ವೇಳೆ ಇಬ್ಬರು ಸವಾರರಿಗೂ ಗಂಭೀರ ಗಾಯವಾಗಿದ್ದು, ಸಾರ್ವಜನಿಕರು ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು ಸವಾರ ರಾಜೇಶ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಇಬ್ಬರು ಸವಾರರು ಹೆಲ್ಮೆಟ್ ಧರಿಸಿರಲಿಲ್ಲ. ಅಪಘಾತಕ್ಕೆ ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಹೈಗ್ರೌಂಡ್‌್ಸ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.