ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.
ಕೊಡಗು (ಆ.19): ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಗ್ರಾಮದಲ್ಲಿ ನಡೆದಿದೆ.
ಅಮೃತ(24) ಮೃತ ದುರ್ದೈವಿ. ಮೂಲತಃ ಕೇರಳದ ಶ್ರೀಶೂರಿನವರಾದ ಅಮೃತ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದರು. ಎರಡೂ ಬೈಕ್‌ಗಳು ರಭಸವಾಗಿ ಡಿಕ್ಕಿಯಾಗಿರುವ ಪರಿಣಾಮ ಅಮೃತ ತೀವ್ರ ಗಾಯಗೊಂಡಿದ್ದಳು, ಅಮೃತಾಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಅಪೊಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪ್ಟಟ ಅಮೃತಾ. ಈ ಘಟನೆ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
undefined
ಬಿಎಂಟಿಸಿ ಬಸ್ ಹರಿದು ಎಲ್‌ಕೆಜಿ ಬಾಲಕಿ ಸಾವು: ಶಾಲೆಗೆ ಹೋಗುತ್ತಿದ್ದಾಗ ದುರ್ಘಟನೆ
ರಿಕ್ಷಾ ಅಪಘಾತ: ಮಹಿಳೆ ಸಾವು
ಮಂಗಳೂರು: ಆಟೋ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ನಳಿನಿ ಆರ್. ಶೆಟ್ಟಿಎಂಬವರು ತಲೆಗೆ ಗಾಯಗೊಂಡು ಮೃತಪಟ್ಟಿದ್ದಾರೆ.
ಆಟೋ ಚಾಲಕ ಲೋಕೇಶ್ ಅಮೀನ್, ನಂತೂರು ಕಡೆಯಿಂದ ಶಿವಭಾಗ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಂದರ್ಭ ನಂತೂರು ಜಂಕ್ಷನ್ ಬಳಿಯ ಬಸ್ ನಿಲ್ದಾಣದಿಂದ ಸ್ಪಲ್ಪ ಮುಂದೆ ಘಟನೆ ನಡೆದಿದೆ. ತನ್ನ ಮುಂಭಾಗದಲ್ಲಿ ಹೋಗುತ್ತಿದ್ದ ವಾಹನವೊಂದನ್ನು ಎಡ ಭಾಗದಿಂದ ಓವರ್ ಟೇಕ್ ಮಾಡುವ ಭರದಲ್ಲಿ ಆಟೋ ರಿಕ್ಷಾ ರಸ್ತೆಯ ತೀರಾ ಎಡಕ್ಕೆ ಚಲಿಸಿ ರಸ್ತೆಯಿಂದ ಕೆಳಗೆ ಇಳಿದಿದೆ. ಪುನಃ ರಸ್ತೆಗೆ ತಿರುಗಿಸುವ ವೇಳೆ ನಿಯಂತ್ರಣ ತಪ್ಪಿ ಎಡಕ್ಕೆ ವಾಲಿ ರಸ್ತೆಗೆ ಬಿದ್ದಿದೆ. ಇದರಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ನಳಿನಿ ಅವರ ತಲೆಗೆ ಜಜ್ಜಿದ ರೀತಿಯ ಗಾಯವಾಗಿದೆ. ಅದೇ ಆಟೋ ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ: ಕಾಲೇಜು ಲೆಕ್ಚರ್- ಸ್ಕೂಲ್ ಟೀಚರ್ ರಕ್ಷಾ ಸಾವು
ಹುಬ್ಬಳ್ಳಿ ಭೀಕರ ಅಪಘಾತ; ಇಬ್ಬರ ಸಾವು
ತಡರಾತ್ರಿ ಸಂಭವಿಸಿದ ಭೀಕರ ಅಪಘಾತದದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ನವನಗರದ ಬಳಿ ನಡೆದಿದೆ. ವೇಗವಾಗಿ ಬಂದ ಬೈಕ್ ಸವಾರ, ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ.
ಬೈಕ್ ಸವಾರ ಹಾಗು ರಸ್ತೆ ದಾಟುತ್ತಿದ್ದ ವ್ಯಕ್ತಿ ಇಬ್ಬರೂ ಸ್ಥಳದಲ್ಲೇ ಸಾವು.
120 ಸ್ಪೀಡ್ ನಲಿ ಬಂದ ಪಲ್ಸರ್ -೨೦೦ ಬೈಕ್ . ಈ ವೇಳೆ ರಸ್ತೆ ದಾಟಲು ಮುಂದಾಗಿದ್ದ ವ್ಯಕ್ತಿ. ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ವ್ಯಕ್ತಿಗೆ ಡಿಕ್ಕಿ. ಡಿಕ್ಕಿಯಾದ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವು.
ಬೈಕ್ ಸವಾರ ಧಾರವಾಡ ನಿವಾಸಿ ಮಕ್ತುಂ ಹಾಗು ಪಾದಚಾರಿ ಬಸವರಾಜ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಸಂಚಾರಿ ವಿಭಾಗದ ಎಸಿಪಿ ವಿನೋದ್ ಮುಕ್ತೆದಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ.