ನಿವೃತ್ತ ಅಧಿಕಾರಿಗೆ ಸಿಬಿಐ ಹೆಸರಲ್ಲಿ ಬೆದರಿಸಿ ₹42 ಲಕ್ಷ ವಂಚನೆ!

Published : Dec 01, 2023, 04:57 AM IST
ನಿವೃತ್ತ ಅಧಿಕಾರಿಗೆ ಸಿಬಿಐ ಹೆಸರಲ್ಲಿ ಬೆದರಿಸಿ ₹42 ಲಕ್ಷ ವಂಚನೆ!

ಸಾರಾಂಶ

ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧ ಜೈಲು ಸೇರಿರುವ ಖ್ಯಾತ ಉದ್ಯಮಿ ನರೇಜ್‌ ಗೋಯೆಲ್‌ ಜತೆ ಅಕ್ರಮ ಹಣಕಾಸು ವ್ಯವಹಾರ ನಡೆಸಿರುವುದಾಗಿ ಸಿಐಬಿ ಅಧಿಕಾರಿ ಹೆಸರಿನಲ್ಲಿ ಬೆದರಿಸಿ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಂದ ₹42 ಲಕ್ಷವನ್ನು ಸೈಬರ್‌ ವಂಚಕರು ದೋಚಿದ್ದಾರೆ.

ಬೆಂಗಳೂರು (ನ.1): ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧ ಜೈಲು ಸೇರಿರುವ ಖ್ಯಾತ ಉದ್ಯಮಿ ನರೇಜ್‌ ಗೋಯೆಲ್‌ ಜತೆ ಅಕ್ರಮ ಹಣಕಾಸು ವ್ಯವಹಾರ ನಡೆಸಿರುವುದಾಗಿ ಸಿಐಬಿ ಅಧಿಕಾರಿ ಹೆಸರಿನಲ್ಲಿ ಬೆದರಿಸಿ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಂದ ₹42 ಲಕ್ಷವನ್ನು ಸೈಬರ್‌ ವಂಚಕರು ದೋಚಿದ್ದಾರೆ.

ಎಂಆರ್‌ವಿ ಬಡಾವಣೆಯ ಎಂಎಲ್‌ಎ ಲೇಔಟ್ ನಿವಾಸಿ ಎ.ಮಹೇಂದ್ರ ಹಣ ಕಳೆದುಕೊಂಡಿದ್ದು, ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಅಕಾಶ್‌ ಕುಲಹರಿ ಸೇರಿದಂತೆ ಇತರರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಣಕಾಸು ಅಕ್ರಮ ಪ್ರಕರಣ ಸಂಬಂಧ ಜೆಟ್‌ ಏರ್‌ವೇಸ್ ಸಂಸ್ಥೆಯ ಸಂಸ್ಥಾಪಕ ನರೇಶ್ ಗೋಯೆಲ್ ಅವರನ್ನು ಸಿಬಿಐ ಬಂಧಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೆಸರಲ್ಲಿ ವಂಚನೆ: ಸುಳ್ಳೇ ಈತನ ಬಂಡವಾಳ..!

ಹೇಗೆ ವಂಚನೆ?

ನ.17ರಂದು ನಿವೃತ್ತ ಪಿಎಫ್‌ ಆಯುಕ್ತ ಮಹೇಂದ್ರ ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ತನ್ನನ್ನು ಸಿಬಿಐ ಅಧಿಕಾರಿ ಆಕಾಶ್ ಕುಲಹರಿ ಎಂದು ಪರಿಚಯಿಸಿ ಕೊಂಡಿದ್ದಾನೆ. ನೀವು ಉದ್ಯಮಿ ನರೇಶ್ ಗೋಯೆಲ್‌ ಜತೆ ಅಕ್ರಮವಾಗಿ ಹಣಕಾಸು ವ್ಯವಹಾರ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ನೀವು ರಾಷ್ಟ್ರೀಯ ಬ್ಯಾಂಕ್‌ವೊಂದರ ಮೂಲಕ ನರೇಶ್ ಜತೆ ಅಕ್ರಮ ಹಣ ವರ್ಗಾವಣೆ ನಡೆಸಿರುವುದು ಪುರಾವೆ ಸಹ ಲಭಿಸಿದೆ ಎಂದಿದ್ದಾನೆ. ಇದಕ್ಕೆ ಪೂರಕವಾಗಿ ಸರ್ವೋಚ್ಛ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಲಭಿಸಿದ ದಾಖಲೆಗಳು ಎಂದು ಹೇಳಿ ಮಹೇಂದ್ರ ಅವರಿಗೆ ದಾಖಲೆಗಳನ್ನು ತೋರಿಸಿದ್ದಾನೆ. ನಿಮ್ಮ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದ್ದು, ಬಂಧನದಿಂದ ತಪ್ಪಿಸಲು ಹಣ ನೀಡಬೇಕಾಗುತ್ತದೆ ಎಂದಿದ್ದಾನೆ.

ಪ್ರೊಫೈಲ್‌ ಪಿಕ್‌ ನೋಡಿ ಬೆತ್ತಲಾದ... ನಗ್ನ ಲೇಡಿಯ ಖೆಡ್ಡಾಗೆ ಬಿದ್ದು ಲಕ್ಷ ಲಕ್ಷ ಕಳಕೊಂಡ!

 

ಕೊನೆಗೆ ಆರೋಪಿ ಸೂಚಿಸಿದಂತೆ ಆತನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹42 ಲಕ್ಷಗಳನ್ನು ಅವರು ವರ್ಗಾಯಿಸಿದ್ದಾರೆ. ಬಳಿಕ ಈ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವ ಸಂಗತಿ ಮಹೇಂದ್ರ ಅವರಿಗೆ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ