ಹೊನ್ನಾಳಿ ಪಟ್ಟಣದ ಲಿಂಗರಾಜ ಎಂಬಾತ 2021ರಲ್ಲಿ ಕ್ಯಾಸನಕೆರೆ ಗ್ರಾಮದ ಸಿ.ಎಂ.ವೀರೇಶ ಹಾಗೂ ಸಿದ್ದೇಶ ಅಪಹರಿಸಿ, 30 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳಾಗಿದ್ದಾರೆ. ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಈ ಇಬ್ಬರೂ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಆ ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಪೊಲೀಸರು ಬಾಡಿ ವಾರೆಂಟ್ ಜಾರಿಗೊಳಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆಂದು ಹೇಳಲಾಗಿದೆ.
ದಾವಣಗೆರೆ(ನ.30): ಹೆಣ್ಣು ಭ್ರೂಣಲಿಂಗ ಪತ್ತೆ, ಗರ್ಭಪಾತ ಪ್ರಕರಣದಲ್ಲಿ ಆರೋಪಿಗಳಾದ ಹೊನ್ನಾಳಿ ತಾಲೂಕು ಕ್ಯಾಸನಕೆರೆ ಗ್ರಾಮದ ವೀರೇಶ ಹಾಗೂ ಸಿದ್ದೇಶ ವಿರುದ್ಧ 2021ರಲ್ಲಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಜಾರಿಗೊಳಿಸಲು ಹೊನ್ನಾಳಿ ಪೊಲೀಸರು ಮನವಿ ಮಾಡಿದ್ದಾರೆನ್ನಲಾಗಿದೆ.
ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು:
undefined
ಹೊನ್ನಾಳಿ ಪಟ್ಟಣದ ಲಿಂಗರಾಜ ಎಂಬಾತ 2021ರಲ್ಲಿ ಕ್ಯಾಸನಕೆರೆ ಗ್ರಾಮದ ಸಿ.ಎಂ.ವೀರೇಶ ಹಾಗೂ ಸಿದ್ದೇಶ ಅಪಹರಿಸಿ, 30 ಲಕ್ಷ ರು. ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳಾಗಿದ್ದಾರೆ. ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ಈ ಇಬ್ಬರೂ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಆ ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊನ್ನಾಳಿ ಪೊಲೀಸರು ಬಾಡಿ ವಾರೆಂಟ್ ಜಾರಿಗೊಳಿಸಲು ನ್ಯಾಯಾಲಯದ ಮೊರೆ ಹೋಗಿದ್ದಾರೆಂದು ಹೇಳಲಾಗಿದೆ.
ಭ್ರೂಣ ಲಿಂಗ ಪತ್ತೆ ಪ್ರಕರಣ; 2 ವರ್ಷದಲ್ಲಿ ಬರೋಬ್ಬರಿ 900 ಭ್ರೂಣ ಹತ್ಯೆ ಮಾಡಿರುವ ಪಾಪಿಗಳು!
ಒಬ್ಬ ಆರೋಪಿ ಪೊಲೀಸರ ವಶ:
ಈಗಾಗಲೇ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ಕ್ಯಾಸನಕೆರೆ ಸಿ.ಎಂ.ವೀರೇಶ ಪೊಲೀಸರ ವಶದಲ್ಲಿದ್ದಾನೆ. ಮತ್ತೊಬ್ಬ ಆರೋಪಿ ಕ್ಯಾಸಿನಕೆರೆ ಸಿದ್ದೇಶನು ತಲೆ ಮರೆಸಿಕೊಂಡಿದ್ದು, ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಆತನಿಗಾಗಿ ಶೋಧ ಕೈಗೊಂಡಿದ್ದಾರೆ. ಇದೀಗ ಬಂಧನದಲ್ಲಿರುವ ಆರೋಪಿ ವೀರೇಶ ಹಾಗೂ ತಲೆ ಮರೆಸಿಕೊಂಡ ಸಿದ್ದೇಶನಿಗಾಗಿ ದಾವಣಗೆರೆ ನ್ಯಾಯಾಲಯಕ್ಕೆ ಬಾಡಿ ವಾರೆಂಟ್ ಜಾರಿಗೊಳಿಸಲು ಹೊನ್ನಾಳಿ ಪೊಲೀಸರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.