
ಬೆಂಗಳೂರು (ಸೆ.5): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಿಲ್ಲಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಗ್ಯಾಂಗ್ ನಡೆಸಿದ್ದ ಕ್ರೌರ್ಯದ ಕಥೆಗಳು ಮಾತ್ರವೇ ಇಲ್ಲಿಯವರೆಗೂ ಸಿಕ್ಕಿದ್ದವು. ಈಗ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರಕರಣದಲ್ಲಿ ಎಕ್ಸ್‌ಕ್ಲೂಸಿವ್ ಆದ ಎರಡು ಚಿತ್ರಗಳು ಸಿಕ್ಕಿವೆ. ಎರಡೂ ಚಿತ್ರಗಳಲ್ಲಿ ಡಿ ಗ್ಯಾಂಗ್ ಪಟ್ಟಣಗೆರೆ ಶೆಡ್‌ನಲ್ಲಿ ನಡೆಸಿದ ಕ್ರೌರ್ಯದ ಕಥೆಗಳನ್ನು ತಿಳಿಸಿವೆ. ಯಾವುದೇ ರೀತಿಯ ಸಹಾನುಭೂತಿಗೂ ಈ ಗ್ಯಾಂಗ್ ಅರ್ಹರಲ್ಲ ಎನ್ನುವುದು ಈ ಫೋಟೋಗಳನ್ನು ನೋಡಿದರೆ ಸಾಬೀತಾಗುತ್ತದೆ. ಚಾರ್ಜ್‌ಶೀಟ್‌ನಲ್ಲಿ ಒಟ್ಟು ಐದು ಫೋಟೋಗಳಿದ್ದು, ಅದರಲ್ಲಿ ಎರಡು ಫೋಟೋ ಏಷ್ಯಾನೆಟ್ ಸುವರ್ಣನ್ಯೂಸ್ಗೆ ಲಭ್ಯವಾಗಿದೆ. ಸಣಕಲು ದೇಹದ ರೇಣುಕಾಸ್ವಾಮಿ ಪ್ರಾಣಭಿಕ್ಷೆ ನೀಡುವಂತೆ ಬೇಡಿಕೊಂಡರೂ, ದರ್ಶನ್ ನೇತೃತ್ವದ ರಕ್ಕಸರ ಗ್ಯಾಂಗ್ ಆತನ ಮೇಲೆ ಮುಗಿಬಿದ್ದು ಹಲ್ಲೆ ಮಾಡಿರುವುದು ಇದರಲ್ಲಿ ಗೊತ್ತಾಗಿದೆ. ಒಂದೊಂದು ಫೋಟೋಗಳು ದರ್ಶನ್ ಗ್ಯಾಂಗ್‌ನ ಕ್ರೌರ್ಯದ ಸಾವಿರ ಕಥೆಗಳನ್ನು ತಿಳಿಸಿದೆ
ರೇಣುಕಾಸ್ವಾಮಿ ಕೊನೆ ಕ್ಷಣದ ಕೆಲ ಫೋಟೋಗಳು ಲಭ್ಯವಾಗಿದ್ದು, ಎಫ್ಎಸ್ಎಲ್ನಲ್ಲಿ ವಿನಯ್ ಫೋನ್ನಿಂದ ರಿಟ್ರೀವ್ ಮಾಡಿದ ಫೋಟೋಗಳು ಇವಾಗಿದೆ. ಪ್ರಕರಣದ ಭೀಕರತೆಯನ್ನು ಒಂದೊಂದು ಫೋಟೋಗಳು ಬಿಚ್ಚಿಟ್ಟಿವೆ.
ಘಟನೆ ನಡೆದ ದಿನದ ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ತೆಗೆದ ಫೋಟೋ ಇದಾಗಿದೆ. ದರ್ಶನ್ ಬರುವುದಕ್ಕೂ ಮುನ್ನ ಒಂದು ಸುತ್ತು ಈ ಗ್ಯಾಂಗ್ ಹಲ್ಲೆ ನಡೆಸಿತ್ತು ಎನ್ನುವುದು ಗೊತ್ತಾಗಿದೆ. ಪಟ್ಟಣಗೆರೆ ಶೆಡ್‌ನ ನೆಲದ ಮೇಲೆ ಬಿದ್ದಿರುವ ರೇಣುಕಾಸ್ವಾಮಿ ಒಂದು ಫೋಟೋ ಇದಾಗಿದೆ. ನೆಲದ ಮೇಲೆ ರೇಣುಕಾಸ್ವಾಮಿ ಬಿದ್ದಿರುವ ಫೋಟೋವನ್ನು ಪಟ್ಟಣಗೆರೆ ಶೆಡ್‌ನ ನೌಕರನೊಬ್ಬ ತೆಗೆದಿದ್ದಾರೆ. ಆ ಬಳಿಕ ಶೆಡ್‌ನ ನೌಕರ ಈ ಫೋಟೋವನ್ನು ವಿನಯ್‌ನ ಮೊಬೈಲ್‌ಗೆ ಕಳಿಸಿದ್ದಾನೆ. ಅದೇ ವ್ಯಕ್ತಿಯನ್ನು ಪೊಲೀಸರು ಪ್ರತ್ಯಕ್ಷ ಸಾಕ್ಷಿ ಮಾಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಬದುಕಿರುವಾಗಿನ ಫೋಟೊ ಇದಾಗಿದ್ದು, ಪಕ್ಕದಲ್ಲಿ ನಿಂತ ಲಾರಿ ಕೂಡ ಇದಕ್ಕೆ ಸಾಕ್ಷಿಯಾಗಿದೆ. KA 51 AF 0454 ನಂಬರಿನ ಲಾರಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನಿಸಿಕೊಂಡಿದೆ.
ಇನ್ನೊಂದು ಫೋಟೋ ಮತ್ತಷ್ಟು ಕ್ರೌರ್ಯವನ್ನು ತೋರಿಸಿದೆ. ರೇಣುಕಾಸ್ವಾಮಿ ಕೊನೆಯ ಕ್ಷಣದ ಮತ್ತೊಂದು ಫೋಟೋ ಇದಾಗಿದ್ದು. ದರ್ಶನ್ ಶೆಡ್ಡಿಗೆ ಎಂಟ್ರಿ ಕೊಟ್ಟ ನಂತರದ ರೇಣುಕಾಸ್ವಾಮಿಯ ಫೋಟೋ ಇದಾಗಿದೆ. ಸುಮಾರು ಸಂಜೆ 5 ಗಂಟೆ ಬಳಿಕ ಮತ್ತೊಂದು ಸುತ್ತು ಹಲ್ಲೆ ನಡೆಸಲಾಗಿದೆ. ಶೆಡ್‌ನಲ್ಲಿ ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಮೇಲೆ ಭೀಕರವಾಗಿ ಈ ಹಂತದಲ್ಲಿ ಹಲ್ಲೆ ಮಾಡಲಾಗಿದೆ. ಅಳುತ್ತಾ ಬೇಡಿಕೊಂಡರೂ ದರ್ಶನ್ ಗ್ಯಾಂಗ್ ಬಿಟ್ಟಿಲ್ಲ.. ಅಳುತ್ತಾ ಬೇಡಿಕೊಳ್ಳುವ ರೇಣುಕಾಸ್ವಾಮಿಯ ಫೋಟೋ ಲಭ್ಯವಾಗಿದೆ. ವಿನಯ್ ಮೊಬೈಲ್ ರಿಟ್ರೀವ್ ಮಾಡಿದಾಗ ಈ ಫೋಟೋಗಳು ಸಿಕ್ಕಿವೆ.
ಜೈಲಲ್ಲಿ ನಟ ದರ್ಶನ್ ಸಿಗರೇಟ್ ಸೇದಬಹುದು ನಮಗೇಕಿಲ್ಲ: ಬೀಡಿ, ಸಿಗರೇಟ್‌ಗಾಗಿ ಕೈದಿಗಳ ಪ್ರತಿಭಟನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ