
ಭೋಪಾಲ್ (ಸೆ.5): ಧೂಮ್-2 ಚಿತ್ರದಲ್ಲಿ ನಟ ಹೃತಿಕ್ ರೋಶನ್ ನಿರ್ವಹಿಸಿದ ಪಾತ್ರದಿಂದ ಪ್ರಭಾವಿತನಾಗಿ ಕಳ್ಳನೊಬ್ಬ ಇಲ್ಲಿನ ಮ್ಯೂಸಿಯಂ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಆದರೆ ಚಿತ್ರದಲ್ಲಿ ಹೃತಿಕ್ ಹಾರಿದ ರೀತಿ ಸರಿಯಾಗಿ ಹಾರಲಾಗದೇ ಕೆಳಗೆ ಉರುಳಿಬಿದ್ದು ಸಿಕ್ಕಿಹಾಕಿಕೊಂಡಿದ್ದಾನೆ.
ವಿನೋದ್ ಎಂಬಾತ ಭಾನುವಾರ ವಸ್ತುಸಂಗ್ರಹಾಲಯ ಪ್ರವೇಶಕ್ಕೆ ಟಿಕೆಟ್ ಖರೀದಿಸಿ ರಾತ್ರಿ ಯಾರಿಗೂ ಗೊತ್ತಾಗದಂತೆ ಅಲ್ಲೇ ಉಳಿದುಕೊಂಡಿದ್ದಾನೆ. ಸೋಮವಾರ ಮ್ಯೂಸಿಯಂಗೆ ರಜೆ ಇದ್ದ ಕಾರಣ 2 ಗ್ಯಾಲರಿ ಮುರಿದು ಒಳಗಿದ್ದ ಅಪರೂಪದ ಕಲಾಕೃತಿ, ಚಿನ್ನದ ನಾಣ್ಯಗಳನ್ನು ದೋಚಿದ್ದಾನೆ. ಬಳಿಕ ಆ ಕಟ್ಟಡದಿಂದ ಹೊರಗೆ ಬರುವ ಯತ್ನದ ವೇಳೆ 23 ಅಡಿ ಎತ್ತರದಿಂದ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿ ಹೋಗಿದೆ.
ಕಳ್ಳತನ, ದರೋಡೆ, ಪಿಕ್‌ಪಾಕೆಟ್, ಸುಲಿಗೆ ಕಲಿಸಲು ಶುರುವಾಗಿದೆ ಸ್ಕೂಲ್: ಬಾಡಿಗೆಗೂ ಸಿಗ್ತಾರೆ ಪಕ್ಕಾ ಕ್ರಿಮಿನಲ್‌ಗಳು!
ಮರುದಿನ ಭದ್ರತಾ ಸಿಬ್ಬಂದಿ ಒಡೆದ ಗಾಜು ಮತ್ತು ಕೆಲ ವಸ್ತುಗಳು ಕಾಣೆಯಾಗಿದ್ದನ್ನು ಕಂಡು ಹುಡುಕಾಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿನೋದ್ ಸಿಕ್ಕಿಬಿದ್ದಿದ್ದಾನೆ. ಆತನ ಬಳಿ ಗುಪ್ತರ ಬಂಗಾರ ನಾಣ್ಯಗಳು, ಬ್ರಿಟಿಷ್ ಹಾಗೂ ನವಾಬರ ಕಾಲದ ವಸ್ತುಗಳು ತುಂಬಿದ್ದ ಚೀಲ ದೊರಕಿದೆ. ಇವುಗಳ ಮೌಲ್ಯ ಸರಾಸರಿ 15 ಕೋಟಿ ರು. ಇರಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ