
ಕಲಬುರಗಿ(ಸೆ.05): ಮನೆ ಬೀಗ ಮುರಿದು 1.40 ಲಕ್ಷ ರು. ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಸ್ವರಗೇಟ್ ನಗರದಲ್ಲಿ ನಡೆದಿದೆ.
ಶಶಿಕಾಂತ ವಾಡಿ ಎಂಬುವವರ ಮನೆ ಬೀಗ ಮುರಿದು 84 ಸಾವಿರ ರು. ಮೌಲ್ಯದ 30 ಗ್ರಾಂ.ಬಂಗಾರದ ಮಂಗಳಸೂತ್ರ, 28 ಸಾವಿರ ರು. ಮೌಲ್ಯದ 10 ಗ್ರಾಂ.ಬಂಗಾರದ ಎರಡು ಎಳೆಯ ಚೈನ್, 28 ಸಾವಿರ ರು. ಮೌಲ್ಯದ 10 ಗ್ರಾಂ.ಬಂಗಾರದ ಬ್ರಾಸಲೇಟ್ ಸೇರಿ 1.40 ಲಕ್ಷ ರು. ಮೌಲ್ಯದ 50 ಗ್ರಾಂ. ಬಂಗಾರದ ಆಭರಣ ಕಳವು ಮಾಡಲಾಗಿದೆ. ಅಪೆಕ್ಸ್ ಬ್ಯಾಂಕನ ನೇಮಕಾತಿ ಪರೀಕ್ಷೆ ಇರುವ ಪ್ರಯುಕ್ತ ಶಶಿಕಾಂತ ಅವರು ತಂದೆ-ತಾಯಿಯನ್ನು ಮನೆಯಲ್ಲಿ ಬಿಟ್ಟು ಆ.31ರಂದು ರಾತ್ರಿ ಬೆಂಗಳೂರಿಗೆ ಹೋಗಿದ್ದರು.
ಕಾರವಾರದಲ್ಲಿ ಅರೆಬೆಂದ ಸ್ಥಿತಿಯಲ್ಲಿ 35 ವರ್ಷದ ಮಹಿಳೆ ಶವ ಪತ್ತೆ!
ಸ್ವ-ಗ್ರಾಮವಾದ ಆಳಂದ ತಾಲ್ಲೂಕಿನ ಸಾವಳಗಿ (ಕೆ) ಗ್ರಾಮದಲ್ಲಿರುವ ಜಮೀನಿನಲ್ಲಿ ಬೆಳೆದ ಹೂವಿನ ಕಟಾವಿನ ಸಂಬಂಧ ಇವರ ತಂದೆ ತಾಯಿ ಸೆ.1ರಂದು ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದರು. Dಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಕಳ್ಳರು ಮನೆ ಬೀಗ ಮುರಿದು ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ