ನಟ ದರ್ಶನ್ ಅಂಡ್ ಗ್ಯಾಂಗ್ ಅನ್ನು ಪುನಃ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರು (ಜೂ.15): ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧನವಾಗಿರುವ ನಟ ದರ್ಶನ್ ಸೇರಿದಂತೆ ಒಟ್ಟು 16 ಜನರ ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ವಿಚಾರಣೆ ಮಾಡಿದ ಮ್ಯಾಜಿಸ್ಟ್ರೇಟ್ ವಿಶ್ವನಾಥ್ ಸಿ.ಗೌಡರ್ ಅವರು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಕೋರ್ಟ್ ವಿಚಾರಣೆ ವೇಳೆ ನ್ಯಾಯಾಧೀಶರು, ಪೊಲೀಸರು ನಿಮಗೆ ವಿಚಾರಣೆ ವೇಳೆ ತೊಂದರೆ ಕೊಟ್ಟಿದ್ದಾರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ನಟ ದರ್ಶನ್ ಮತ್ತು ಸಹಚರರು ಇಲ್ಲವೆಂದು ಹೇಳಿದ್ದಾರೆ. ಆದರೆ, ನ್ಯಾಯಧೀಶರ ವಿಚಾರಣೆ ವೇಲೆ ನಟಿ ಹಾಗೂ ನಟ ದರ್ಶನ್ 2ನೇ ಪತ್ನಿ ಪವಿತ್ರಾಗೌಡ ಅವರು ಕಣ್ಣೀರು ಹಾಕಿದ್ದಾರೆ. ಇನ್ನು ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸಿನ ಬಗ್ಗೆ ಮತ್ತಷ್ಟು ಸ್ಥಳ ಮಹಜರು ಮತ್ತು ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹ ಮಾಡಬೇಕಿದೆ. ಜೊತೆಗೆ, ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಸಾಯಿಸಲಾಗಿದ್ದು, ಈ ಸಂಬಂಧಿತ ವಸ್ತುಗಳನ್ನು ವಶಕ್ಕೆ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಆತನ ಸಹಚರರನ್ನು ಮತ್ತೆ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಸರ್ಕಾರಿ ಪರ ವಕೀಲ (ರೇಣುಕಾಸ್ವಾಮಿ ಕೊಲೆ ಬಗ್ಗೆ ವಾದ ಮಂಡಿಸುತ್ತಿರುವ ಪಬ್ಲಿಕ್ ಪ್ರಾಸಿಕ್ಯೂಟರ್) ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.
undefined
ನಟ ದರ್ಶನ್‌ಗೆ ಶುರುವಾಯ್ತು ಶೇಕ್; ರೇಣುಕಾಸ್ವಾಮಿ ಕೇಸಿನ ವಾದಕ್ಕೆ ಬಂದ ವಕೀಲರ ಹಿನ್ನೆಲೆ ಕೇಳಿ ಶಾಕ್
ಸರ್ಕಾರಿ ವಕೀಲರ ವಾದದ ವಿರುದ್ಧವಾಗಿ ವಾದ ಮಂಡಿಸಿದ ನಟ ದರ್ಶನ್ ಪರ ವಕೀಲರು ಈಗಾಗಲೇ ಪೊಲೀಸ್ ಕಸ್ಟಡಿ ಅಂತ್ಯಗೊಂಡಿದೆ. ಈಗ ಪುನಃ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಲೆ ಆರೋಪಿಗಳ ಎಲ್ಲ ಮೊಬೈಲ್ ಡೇಟಾ ರಿಟ್ರೀವ್ ಮಾಡಬೇಕಿದೆ. ಜೊತೆಗೆ, ಮೈಸೂರಿನಲ್ಲಿ ಕೊಲೆ ಕೇಸಿನ ಕುರಿತು ಕೆಲವು ಸಾಕ್ಷಿಗಳು ಲಭ್ಯವಾಗಬಹುದೆಂಬ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ದಿನ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೊಡಬೇಕು ಎಂದು ಮನವಿ ಮಾಡಲಾಗಿದೆ. ಎಲ್ಲ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ' ಒಟ್ಟು 13 ಜನರ ಆರೋಪಿಗಳನ್ನು ಮುಂದಿನ 5 ದುನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಕಸ್ಟಡಿಗೆ ಹೋಗುವ ಆರೋಪಿಗಳು:
ಎ1 ಪವಿತ್ರ ಗೌಡ
ಎ2 ದರ್ಶನ್
ಎ3 ಪವನ್
ಎ4 ರಾಘವೇಂದ್ರ
ಎ5 ನಂದೀಶ್
ಎ6 ಜಗದೀಶ್
ಎ7 ಅನುಕುಮಾರ್
ಎ10 ವಿನಯ್
ಎ11 ನಾಗರಾಜು
ಎ12 ಲಕ್ಷ್ಮಣ್
ಎ13 ದೀಪಕ್
ಎ14 ಪ್ರದೋಶ್
ಎ16 ನಿಖಿಲ್
ಶೀನಾ ಬೋರಾ ಕೇಸ್‌ಗೆ ಟ್ವಿಸ್ಟ್, ಪ್ರಮುಖ ಸಾಕ್ಷ್ಯವಾಗಿದ್ದ ಮೂಳೆಗಳು ನಾಪತ್ತೆ!
ಪ್ರಕರಣದ ಹಿನ್ನೆಲೆಯೇನು?
ನಟ ದರ್ಶನ್ 2ನೇ ಪತ್ನಿ ಹಾಗೂ ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿದ್ದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಬೆಂಗಳೂರಿಗೆ ಕರೆತಂದು ಪಟ್ಟಣಗೆರೆಯ ಶೆಡ್‌ನಲ್ಲಿ ಕೂಡಿಹಾಕಿದ್ದ ನಟ ದರ್ಶನ್ ಹಾಗೂ ಆತನ ಸಹಚಚರು ಚಿತ್ರಹಿಂಸೆ ಕೊಟ್ಟು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿ ಸುಮನಹಳ್ಳಿ ಮೇಲ್ಸೇತುವೆ ಬಳಿಯ ಚರಂಡಿಗೆ ಬೀಸಾಡಿ ಹೋಗಿದ್ದರು. ಈ ಕೊಲೆ ಕೇಸಿನಲ್ಲಿ ನಾಲ್ವರು ಪೊಲೀಸರಿಗೆ ಸರೆಂಡರ್ ಆಗಿದ್ದು, ಅವರನ್ನು ವಿಚಾರಣೆ ಮಾಡಿದಾಗ ನಟ ದರ್ಶನ್ ಸೇರಿ ಹಲವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಬಾಯಿ ಬಿಟ್ಟಿದ್ದರು. ಇದರ ಬೆನ್ನಲ್ಲಿಯೇ ಸೋಮವಾರ ನಟ ದರ್ಶನ್ ಸೇರಿ ಹಲವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಆದರೆ, ಆರು ದಿನಗಳ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆಯಾದರೂ ನಾಳೆ ಭಾನುವಾರ ಹಾಗೂ ಸೋಮವಾರವೂ ರಜೆ ಇರುವ ಹಿನ್ನೆಲೆಯಲ್ಲಿ ಶನಿವಾರವೇ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ಮಾಡಿದ ನ್ಯಾಯಾಧೀಶರು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.