ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಸಾಯಿಸಿದ್ದಾರೆ; ಕೋರ್ಟ್‌ಗೆ ಸರ್ಕಾರಿ ವಕೀಲರಿಂದ ಮಾಹಿತಿ

By Sathish Kumar KH  |  First Published Jun 15, 2024, 5:45 PM IST

ಚಿತ್ರದುರ್ಗದ ರೇಣುಕಾಸ್ವಾಮಿಗೆ ನಟ ದರ್ಶನ್ ಮತ್ತು ಆತನ ಸಹಚರರು ಎಲೆಕ್ಟ್ರಿಕ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.


ಬೆಂಗಳೂರು (ಜೂ.15): ನಟಿ ಪವಿತ್ರಗೌಡಗೆ ಕೆಟ್ಟದಾಗಿ ಸಂದೇಶ ಕಳಿಸಿದ್ದಾರೆಂಬ ಕೋಪಕ್ಕೆ ರೇಣುಕಾಸ್ವಾಮಿಯನ್ನು ಕರೆತಂದು ಭೀಕರವಾಗಿ ಮರ್ಮಾಂಗಕ್ಕೆ ಹಲ್ಲೆ ಮಾಡಿದ್ದೂ ಅಲ್ಲದೇ ಎಲೆಕ್ಟ್ರಿಕ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಸರ್ಕಾರಿ ವಿಶೇಷ ಅಭಿಯೋಜಕ (ಎಸ್‌ಪಿಪಿ) ಪಿ. ಪ್ರಸನ್ನ ಕುಮಾರ್ ಅವರು ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಹಾಗೂ ಆತನ ಸಹಚರರು ಸೇರಿ 18 ಜನರನ್ನು ಬಂಧಿಸಲಾಗಿದ್ದು, 6 ದಿನ ಪೊಲೀಸ್ ಕಸ್ಟಡಿಗೆ ಕೊಡಲಾಗಿತ್ತು. ಈಗ ಕಸ್ಟಡಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪುನಃ ಕೋರ್ಟ್ ಮುಂದ ಎಹಾಜರುಪಡಿಸಲಾಗಿದೆ. ಈ ಬಗ್ಗೆ ನ್ಯಾಯಾಧೀಶರಿಗೆ ಪೊಲೀಸ್ ತನಿಖೆಯ ಬಗ್ಗೆ ವಿಚಾರಣಾ ವರದಿ ಒಪ್ಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು 'ರೇಣುಕಾಸ್ವಾಮಿಗೆ ಗಂಭೀರ ಹಲ್ಲೆ ಮಾಡಿದ್ದೂ ಅಲ್ಲದೇ ಮೆಗ್ಗರ್ ಎಂಬ ಡಿವೈಸ್‌ನಿಂದ ಎಲೆಕ್ಟ್ರಿಕ್ ಶಾಕ್ ಕೊಟ್ಟು ಸಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಡಿವೈಸ್ ಅನ್ನು ಪೊಲೀಸರು ಸ್ಥಳ ಮಹಜರು ಮಾಡಿ ವಶಕ್ಕೆ ಪಡೆಯಬೇಕಿದೆ. ಆದ್ದರಿಂದ ಆರೋಪಿಗಳನ್ನು ಮತ್ತಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೊಡಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ.

Tap to resize

Latest Videos

ನಟ ದರ್ಶನ್‌ಗೆ ಶುರುವಾಯ್ತು ಶೇಕ್; ರೇಣುಕಾಸ್ವಾಮಿ ಕೇಸಿನ ವಾದಕ್ಕೆ ಬಂದ ವಕೀಲರ ಹಿನ್ನೆಲೆ ಕೇಳಿ ಶಾಕ್

ಇನ್ನೂ ಮೆಗ್ಗರ್ ಡಿವೈಸ್ ಎಲ್ಲಿದೆ ಎಂಬುದನ್ನು ಆರೋಪಿಗಳು ಪೊಲೀಸರ ಮುಂದೆ ಬಾಯಿ ಬಿಡುತ್ತಿಲ್ಲ. ಇನ್ನು ಆರೋಪಿಗಳು ಎಲ್ಲರೂ ಒಂದೇ ಹೇಳಿಕೆಯನ್ನು ನೀಡದೇ ಒಬ್ಬೊಬ್ಬರು ಒಂದೊಂದು ಹೇಳಿಕೆ ನಿಡುತ್ತಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಕೊಲೆ ಆರೋಪಿಗಳಾದ ಎ3 ಆರೋಪಿ ಪವನ್ ಮತ್ತು ಎ5 ಆರೋಪಿ ನಂದೀಶ್ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

click me!