ದರ್ಶನ್ ಮತ್ತು ಎರಡನೇ ಪತ್ನಿ ಪವಿತ್ರಾ ವಯಸ್ಸಿನ ಅಂತರ 14 ವರ್ಷ! ಮೊದಲ ಭೇಟಿ ಎಲ್ಲಿ?

By Suvarna News  |  First Published Jun 12, 2024, 6:09 PM IST

ಕೊಲೆ ಆರೋಪದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಮತ್ತು  ಎ 2 ಆರೋಪಿಯಾಗಿರುವ ನಟ ದರ್ಶನ್ ಅವರ ವಯಸ್ಸಿನ ಅಂತರದ ಬಗ್ಗೆ ಬಾರೀ ಈಗ ಹುಡುಕಾಟ ನಡೆದಿದೆ.


ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan), ಆತನ ಎರಡನೇ ಪತ್ನಿ ಪವಿತ್ರಾ ಗೌಡ  (Darshan Second Wife Pavithra Gowda) ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, 6 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.  ಇಂದು ಪೊಲೀಸರು ಕೊಲೆ ನಡೆಸಿದ ಜಾಗದ ಸ್ಥಳ ಮಹಜರು ನಡೆಸಿದ್ದಾರೆ. ಇದಲ್ಲದೆ ಈ ಪ್ರಕರಣದಲ್ಲಿ ಇನ್ನೂ 4 ಜನರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರಿಗಾಗಿ ತೀವ್ರ ಶೋಧ ನಡೆಯುತ್ತಿದೆ.

ಈಗ ವಿಷ್ಯ ಅದಲ್ಲ ಕೊಲೆ ಆರೋಪದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಮತ್ತು  ಎ 2 ಆರೋಪಿಯಾಗಿರುವ ನಟ ದರ್ಶನ್ ಅವರ ವಯಸ್ಸಿನ ಅಂತರದ ಬಗ್ಗೆ ಈಗ ಹುಡುಕಾಟ ನಡೆದಿದೆ. ದರ್ಶನ್ ಮತ್ತು ಅವರ ಎರಡನೇ ಪತ್ನಿಗೆ ಬರೋಬ್ಬರಿ 14 ವರ್ಷಗಳ ವಯಸ್ಸಿನ ಅಂತರವಿದೆ. ದರ್ಶನ್ ಗೆ ಈಗ 47 ವರ್ಷ ಮತ್ತು ಪವಿತ್ರಾಗೆ ಈಗ 33 ವರ್ಷ. ಇವರ ಸಂಬಂಧಕ್ಕೆ 10 ವರ್ಷ. ಅಂದರೆ ಪವಿತ್ರಾ 23 ವರ್ಷದವಳಿದ್ದಾಗ ದರ್ಶನ್‌ ಗೆ 37 ವರ್ಷವಾಗಿತ್ತು. ಆಗ ಅವರಿಬ್ಬರ ಸಂಬಂಧ ಆರಂಭವಾಗಿತ್ತು. ಹೇಳಿ ಕೇಳಿ ಪವಿತ್ರಾಗೆ ದರ್ಶನ್ ಜೊತೆಗೆ ಎರಡನೇ ಮದುವೆ, ಇಲ್ಲಿವರೆಗೆ ಗೆಳತಿ ಎಂದೇ ಹೇಳಿಕೊಂಡಿದ್ದು, ಆದರೆ ಮದುವೆಯಾಗಿದೆ ಎಂಬುದು ಕನ್ಫರ್ಮ್ ಆಗಿದೆ. ಇಷ್ಟು ಸಣ್ಣ ವಯಸ್ಸಿಗೆ ಎಷ್ಟೆಲ್ಲ ಆಟ ಆಡಿದ್ದಾಳೆ ಪವಿತ್ರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Tap to resize

Latest Videos

ಕೊಲೆಯಾದ ರೇಣುಕಾಸ್ವಾಮಿಗೆ ಖೆಡ್ಡಾ ತೋಡಲು ಪವಿತ್ರಾ ಮತ್ತು ದರ್ಶನ್ ಗ್ಯಾಂಗ್ ನಿಂದ ಖತರ್ನಾಕ್ ಪ್ಲಾನ್!

ದರ್ಶನ್ ಎರಡನೇ ಪತ್ನಿ ಪವಿತ್ರಾ ಎಂಬುದು ಗೊತ್ತಾಗಿದ್ದು ರೇಣುಕಾಸ್ವಾಮಿ ಕೊಲೆಯ ಬಳಿಕವೇ. ಅಲ್ಲಿವರೆಗೆ ಗೆಳೆತನಕ್ಕೂ ಮೀರಿದ ಸಂಬಂಧ ಇದೆ ಎಂದಷ್ಟೇ ಗೊತ್ತಿತ್ತು. ತನ್ನ 18 ವರ್ಷದಲ್ಲಿ ಮೊದಲ ಮದುವೆಯಾಗಿದ್ದ ಪವಿತ್ರಾ ಗೌಡಗೆ ಒಂದು ಹೆಣ್ಣು ಮಗುವಿದೆ. ಆಕೆಯ ಮೊದಲ ಗಂಡ ಸಂಜಯ್ ಸಿಂಗ್.  ಅದು ಕೂಡ ಸಂಜಯ್ ಸಿಂಗ್‌ನನ್ನು ಪ್ರೀತಿಸಿ ಮದುವೆಯಾಗಿದ್ದಳಂತೆ. ಬಳಿಕ ಸಂಸಾರ ಸರಿ ಹೋಗದೆ ಬೇರೆ ಬೇರೆಯಾಗಿದ್ದರು. ಈ ವಿಚಾರ ಹೊರಗಡೆ ಬಂದಿದ್ದು ಕಳೆದ ಜನವರಿಯಲ್ಲಿ, ಅಂದು ಪವಿತ್ರ  ದರ್ಶನ್ ಜೊತೆಗಿನ ಸಂಬಂಧದ ದಶಕದ ಸಂಭ್ರಮದ ಬಗ್ಗೆ ಹೇಳಿಕೊಂಡು ಹಂಚಿಕೊಂಡಿದ್ದಳು. ಇದು  ದರ್ಶನ್ ಮೊದಲ ಪತ್ನಿ ವಿಜಯಲಕ್ಷ್ಮಿ ಕೋಪಕ್ಕೆ ಕಾರಣವಾಗಿತ್ತು.

ಜನವರಿ 24 , 2024ರಲ್ಲಿ ವಿಡಿಯೋ ಫೋಟೋ ಶೇರ್ ಮಾಡಿಕೊಂಡಿದ್ದ ಪವಿತ್ರ ಗೌಡ ನಮ್ಮಿಬ್ಬರ ಸಂಬಂಧಕ್ಕೆ ಹತ್ತು ವರ್ಷ ಎಂದು ಹಾಕಿಕೊಂಡಿದ್ದಳು. ಇದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ದರ್ಶನ್ ಮೊದಲ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಒಂದನ್ನು ಹಾಕಿದಾಗಲೇ ಸತ್ಯಾಂಶ ಹೊರಬಂದಿತ್ತು. ವಿಜಯಲಕ್ಷ್ಮಿ ಅವರು ವಿಥ್ ಫೋಟೋ ಪವಿತ್ರಾ ಮೊದಲ ಗಂಡನ ಬಗ್ಗೆ ಬಹಿರಂಗ ಪಡಿಸಿ ಪವಿತ್ರಾ ತನ್ನ ಸಂಸಾರದಲ್ಲಿ ಹುಳಿ ಹಿಂಡುತ್ತಿರುವ ಬಗ್ಗೆ  ಹೇಳಿಕೊಂಡಿದ್ದರು.

ಕೊಲೆಯಾದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಅದೇ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ಕೊಡಲು ಕಾರಣವೇನು?

ಸಂಜಯ್ ಸಿಂಗ್ ಆಕೆಯ ಗಂಡ ಅವರಿಬ್ಬರಿಗೆ ಓರ್ವ ಮಗಳಿದ್ದಾಳೆ. ಓರ್ವ ಪುರುಷ ವಿವಾಹಿತನೆಂದು ತಿಳಿದುಕೊಂಡು ಅವಳು ಇನ್ನೂ ತಮ್ಮ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸುತ್ತಿದ್ದಾಳೆ. ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ತೆಗೆದುಕೊಳ್ಳುವುದಿಲ್ಲ ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದರು.

ಜಗ್ಗು ದಾದಾ ಚಿತ್ರದ ಸಮಯದಲ್ಲಿ ಇವರಿಬ್ಬರ ಪರಿಚಯವಾಗಿತ್ತು ಎನ್ನಲಾಗುತ್ತಿದೆ. ಆ ಚಿತ್ರಕ್ಕೆ ಅಡಿಷನ್ ಕೊಡಲು ಹೋದಾಗ ಇಬ್ಬರ ಪರಿಚಯವಾಯ್ತಂತೆ. ಅಲ್ಲಿಂದ ಶುರುವಾದ ಇವರಿಬ್ಬರ ಗೆಳೆತನ, ಪ್ರೀತಿ, ಬಳಿಕ ಈಗ ಮದುವೆ ಕೂಡ ಆಗಿದ್ದು, ಮದುವೆಯ ಬಳಿಕ ಜೊತೆಯಾಗಿಯೇ ಕೊಲೆ ಮಾಡುವವರೆಗೂ ಇವರ ಸಬಂಧ ಬಂದು ನಿಂತಿದೆ. 10 ವರ್ಷಗಳ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದರೆ ಕೊಲೆ ಮಾಡುವುದರಲ್ಲೂ ಜೊತೆಯಾಗಿಯೇ ಇದ್ದಾರೆ!. 

click me!