Rape and Murder: ಕುರಿಗಾಯಿ ಮಹಿಳೆಯ ಮೇಲೆ ಕಾಮುಕರ ಅಟ್ಟಹಾಸ

By Suvarna News  |  First Published Feb 19, 2022, 11:19 AM IST

*  ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆದ ಘಟನೆ
*  ಕಟ್ಟಿಗೆ ತರಲು ಬಂದಿದ್ದ ಮಹಿಳೆಯ ಮೇಲೆ ರೇಪ್‌
*  ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು  
 


ಧಾರವಾಡ(ಫೆ.19): ಕುರಿಗಾಯಿ ಮಹಿಳೆಯ(Woman) ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಕುಂದಗೋಳ(Kundgol) ತಾಲೂಕಿನ ಯರಗುಪ್ಪಿ ಗ್ರಾಮದ ಹೊರವಲಯದಲ್ಲಿ ಇಂದು(ಶನಿವಾರ) ನಡೆದಿದೆ. 

ಕಟ್ಟಿಗೆ ತರಲು ಬಂದ ಮಹಿಳೆಯ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. 35 ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ(Rape) ಎಸಗಿ ಕೊಲೆ(Murder) ಮಾಡಲಾಗಿದೆ.  ಬೆಳಗಾವಿ(Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೂಲದ ಕುರಿಗಾಯಿ ಮಹಿಳೆ ಅಂತ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ಪರಿಶೀಲನೆ ನೀಡಿದ್ದಾರೆ. 

Tap to resize

Latest Videos

ಹೆಂಡತಿ ತಂಗಿಯನ್ನೇ ಗರ್ಭಿಣಿಯನ್ನಾಗಿಸಿದ ಭೂಪ, ಕಾಮುಕನ ನೀಚ ಕೃತ್ಯ ಬಯಲು

4 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಗಂಗಾವತಿ(Gangavati): ಇಲ್ಲಿಯ ನೀಲಕಂಠೇಶ್ವರ ಕ್ಯಾಂಪ್‌ನಲ್ಲಿ ಯುವಕನೊಬ್ಬ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಫೆ.15 ರಂದು ನಡೆದಿದೆ. ಇತ್ತೀಚೆಗೆ ಫೋಟೊಗ್ರಾಫರ್‌ ಗುರುರಾಜ ವೆಂಕಟೇಶ ಗಣಪ ಎನ್ನುವ ಯುವಕ ಈ ಕೃತ್ಯ ಎಸಗಿದ್ದು, ತನ್ನ ಮನೆಗೆ ಆಗಮಿಸಿದ್ದ ಕುಡಿತಿನಿಯ ಸಂಬಂಧಿಕರ ಪುತ್ರಿಯ ಮೇಲೆ ಈ ಕೃತ್ಯ ನಡೆಸಿದ್ದನು. 

ಗುರುರಾಜ ತನ್ನ ಮನೆಯ ಮೇಲೆ ಜೋಳ ಒಣಗಿಸಲು ಹೋಗಿದ್ದ ಸಂದರ್ಭದಲ್ಲಿ ಬಾಲಕಿಯನ್ನು ರೂಮಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದನು. ಈ ಕುರಿತು ಬಾಲಕಿ ತಾಯಿ ನಗರ ಪೊಲೀಸ್‌(Police) ಠಾಣೆಯಲ್ಲಿ ದೂರು ನೀಡಿದ್ದರು. ಗುರುರಾಜ ವಿರುದ್ಧ ಫೋಕ್ಸೊ ಕಾಯ್ದೆ ಅಡಿ ದೂರು ದಾಖಲಾಗಿದ್ದು, ಅರೋಪಿ(Accused) ಪತ್ತೆ ಕಾರ್ಯವನ್ನು ಪೊಲೀಸರು ಕೈಗೊಂಡಿದ್ದರು.

87 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ

ನವದೆಹಲಿ: ಇಲ್ಲಿನ ತಿಲಕ್‌ನಗರದಲ್ಲಿರುವ ಮನೆಯೊಂದಕ್ಕೆ ಗ್ಯಾಸ್‌ ಏಜೆನ್ಸಿಯವ ಎಂದು ಹೇಳಿಕೊಂಡು ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ 87 ವರ್ಷದ ಹಾಸಿಗೆ ಹಿಡಿದಿರುವ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿರುವ ಅಮಾನುಷ ಘಟನೆ ಫೆ.13 ರಂದು ನಡೆದಿತ್ತು. 

ಈ ಕುರಿತು ದೆಹಲಿ ಪೊಲೀಸ್‌ ಅನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ವ್ಯಕ್ತಿಯೊಬ್ಬರು ‘ನನ್ನ ಸ್ನೇಹಿತರ 87 ವರ್ಷದ ಅಜ್ಜಿಯ ಮೇಲೆ ಅತ್ಯಚಾರ ನಡೆಸಲಾಗಿದೆ. ಅವರು ಗಾಯಗೊಂಡಿದ್ದಾರೆ. ಆದರೆ ತಿಲಕ್‌ನಗರದ ಪೊಲೀಸರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ’ಎಂದು ಟ್ವೀಟ್‌ ಮಾಡಿದ್ದರು.

ಈ ನಡುವೆ, ಈ ಕುರಿತು ಪೊಲೀಸ್‌ ಸ್ಟೇಶನ್‌ಗೆ ದೂರು ನೀಡಿದಾಗ ಪೊಲೀಸರು ಎಫ್‌ಐಆರ್‌ ದಾಖಲಿಸದೇ ತಡ ಮಾಡಿದರು ಎಂದು ಮನೆಯವರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ ಪೊಲೀಸರು ದೂರು ದಾಖಲಿಸಲಾಗಿದೆ ಎಂದು ಹೇಳಿದ್ದರು.

‘ಮೊದಲು ಕೇವಲ ಮೊಬೈಲ್‌ ಕಳ್ಳತನವಾಗಿರುವುದಾಗಿ ಮಾತ್ರ ದೂರು ನೀಡಿದ್ದರು. ಈಗ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಹೇಳಿದ್ದಾರೆ. ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಆರಂಭಿಸಿದ್ದೇವೆ’ ಎಂದು ಪೊಲೀಸರು ಹೇಳಿದ್ದರು.

ಕೆಲಸ ನೀಡುವ ನೆಪದಲ್ಲಿ ಯುವತಿ ಮೇಲೆ ನಾಲ್ವರ ಅತ್ಯಾಚಾರ

ಚುರು(ರಾಜಸ್ಥಾನ): ಯುವತಿಗೆ ಕೆಲಸದ ಆಮಿಷವೊಡ್ಡಿ ಆಕೆಯನ್ನು ದೆಹಲಿಯಿಂದ ರಾಜಸ್ಥಾನಕ್ಕೆ ಕರೆಸಿಕೊಂಡ ನಾಲ್ವರು ದುರುಳರು ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಹೋಟೆಲ್‌ ಮೇಲಿನಿಂದ ಕೆಳಗೆ ನೂಕಿದ ಘಟನೆ ಫೆ.13 ರಂದು ನಡೆದಿತ್ತು. 

ಅತ್ಯಾಚಾರ ಸಂತ್ರಸ್ತೆಗೆ ಗರ್ಭಪಾತ ಮಾಡಲು ಬಾಂಬೆ ಹೈಕೋರ್ಟ್ ಅನುಮತಿ

ಸಂದರ್ಶನದ ನೆಪದಲ್ಲಿ ದಿಲ್ಲಿಯಿಂದ ಆಕೆಯನ್ನು ಚುರುವಿನ ಹೋಟೆಲ್‌ಗೆ ದುರುಳರು ಕರೆಸಿಕೊಂಡಿದ್ದಾರೆ. ಮೇಲ್ಛಾವಣಿ ಮೇಲೆ ಆಕೆಯ ಕಾಲು-ಕೈಗೆ ಹಗ್ಗ ಕಟ್ಟಿಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಮೇಲಿನಿಂದ ನೂಕಿದ್ದರು. ಸುದೈವವಶಾತ್‌ ಆಕೆಯ ಕೈಗೆ ಕಟ್ಟಿದ ಹಗ್ಗ ಕಂಬಕ್ಕೆ ಸಿಕ್ಕಿಕೊಂಡು ಬಚಾವಾಗಿದ್ದಳು.

ಈ ಘಟನೆ ಕುರಿತು ಭಾನುವಾರ 25 ವರ್ಷದ ಸಂತ್ರಸ್ತ ಯುವತಿ ದೂರು(Complaint) ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ(Gang Rape) ಮತ್ತು ಹಲ್ಲೆ ಮಾಡಿದ ಆರೋಪದಡಿ ಕೇಸ್‌ ದಾಖಲಿಸಿಕೊಳ್ಳಲಾಗಿತ್ತು. ಆರೋಪಿಗಳಾದ ದೇವೇಂದ್ರ ಸಿಂಗ್‌, ವಿಕ್ರಂ ಸಿಂಗ್‌, ಭವಾನಿ ಸಿಂಗ್‌ ಮತ್ತು ಸುನೀಲ್‌ ರಜಪೂತ್‌ರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದರು.
 

click me!