* ಸಂತ್ರಸ್ತೆಯೊಬ್ಬರ ಪತಿ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನ
* ಫೇಸ್‌ಬುಕ್‌ನಲ್ಲಿ ಪರಿಚಯಿಸಿಕೊಂಡು ಕೃತ್ಯ
* ಜೆಸಿಬಿ ಚಾಲನನ್ನು ಬಂಧಿಸಿದ ಸಿಇಎನ್ ಠಾಣೆ ಪೊಲೀಸರು
ಬೆಂಗಳೂರು(ಫೆ.19): ಸಾಮಾಜಿಕ ಜಾಲತಾಣಗಳಲ್ಲಿ(Social Media) ಮಹಿಳೆಯರನ್ನು ತನ್ನ ಸ್ನೇಹದ ಬಲೆಗೆ ಬೀಳಿಸಿಕೊಂಡು ಬಳಿಕ ಅವರಿಗೆ ಆಶ್ಲೀಲ ವಿಡಿಯೋ ಕಳುಹಿಸಿ(Porn video) ವಿಕೃತಿ ಮೆರೆಯುತ್ತಿದ್ದ ಜೆಸಿಬಿ ಚಾಲಕನೊಬ್ಬನನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
ಹಾಸನ(Hasaan) ಜಿಲ್ಲೆ ಅರಕಲಗೂಡು ತಾಲೂಕಿನ ನಿವಾಸಿ ಹರೀಶ್ (27) ಬಂಧಿತನಾಗಿದ್ದು, ಇತ್ತೀಚೆಗೆ ಬಿಳೇಕಳ್ಳಿಯ ಸಂತ್ರಸ್ತೆಯೊಬ್ಬರ ಪತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು(Accused) ಬಂಧನವಾಗಿದೆ(Arrest). ಮಹಿಳೆಯರಿಗೆ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಕಳುಹಿಸಿ ಆತ ಖುಷಿಪಡುತ್ತಿದ್ದ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಎಂ.ಜೋಷಿ ತಿಳಿಸಿದ್ದಾರೆ.
ಗಾಂಜಾ ಸೇದುವುದು ಹಿಂದೂಗಳ ಪರಂಪರೆ, ಯುವಕರಿಗೆ ಪ್ರೇರಣೆ ನೀಡಿದ ಹಿಂದೂ ಸಂಘಟನೆ ಮುಖಂಡ
ಫೇಸ್‌ಬುಕ್-ವಾಟ್ಸ್ ಆ್ಯಪ್‌ನಲ್ಲಿ ಆಶ್ಲೀಲ ಸಂದೇಶ:
ಅರಕಲಗೂಡಿನ ಹರೀಶ್, ಸ್ಥಳೀಯವಾಗಿ ಜೆಸಿಬಿ ಚಾಲಕನಾಗಿದ್ದ. ನೋಡಲು ಬೆಳ್ಳಗೆ ತೆಳ್ಳಗಿರುವ ಆರೋಪಿ, ಫೇಸ್‌ಬುಕ್‌ನಲ್ಲಿ(Facebook) ಮಹಿಳೆಯರಿಗೆ ಗಾಳ ಹಾಕುತ್ತಿದ್ದ. ತನ್ನ ಬಲೆಗೆ ಬಿದ್ದ ಮಹಿಳೆಯೊಂದಿಗೆ ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಮೊದಲು ಚಾಟಿಂಗ್ ಶುರು ಮಾಡುತ್ತಿದ್ದ. ಸಲುಗೆ ಬೆಳೆದ ಬಳಿಕ ವಾಟ್ಸ್ ಆ್ಯಪ್(WhatsApp) ನಂಬರ್ ಪಡೆಯುತ್ತಿದ್ದ. ಹೀಗೆ ಸ್ನೇಹಿತರಾದ ಮಹಿಳೆಯರಿಗೆ ದಿನ ಕಳೆದಂತೆ ಆಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸಿ ಕುಚೋದ್ಯತನ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೆ ಕೆಲವು ಮಹಿಳೆಯರಿಗೆ(Woman) ತನ್ನ ನಗ್ನ ಫೋಟೋಗಳನ್ನು ಸಹ ಕಳುಹಿಸಿ ಆತ ವಿಕೃತಿ ಮೆರೆದಿದ್ದ. ಇದೇ ರೀತಿ ಕೆಲ ದಿನಗಳ ಹಿಂದೆ ಬಿಳೇಕಳ್ಳಿ ಸಮೀಪದ ನಿವಾಸಿ ಸಂತ್ರಸ್ತೆ ಸಹ ಫೇಸ್‌ಬುಕ್‌ನಲ್ಲಿ ಆರೋಪಿಗೆ ಪರಿಚಯವಾಗಿದ್ದರು. ಬಳಿಕ ಅವರಿಗೆ ಆಶ್ಲೀಲ ಸಂದೇಶ ಕಳುಹಿಸಿ ಆರೋಪಿ ಕಿರುಕುಳ(Harassment) ಕೊಡುತ್ತಿದ್ದ. ಈ ಹಿಂಸೆ ಸಹಿಸಲಾರದೆ ತನ್ನ ಪತಿಗೆ ಆಕೆ ಹೇಳಿದ್ದರು. ಆನಂತರ ಆಗ್ನೇಯ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಬಗ್ಗೆ ತನಿಖೆ ನಡೆಸಿದ ಎಸಿಪಿ ಸುಧೀರ್ ಎಂ.ಹೆಗಡೆ ಹಾಗೂ ಇನ್‌ಸ್ಪೆಕ್ಟರ್ ಎಸ್.ಟಿ.ಯೋಗೇಶ್ ನೇತೃತ್ವದ ತಂಡವು, ಮೊಬೈಲ್ ಕರೆಗಳು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿ ವಿಚಾರಣೆ ವೇಳೆ ಸುಮಾರು ಹತ್ತುಕ್ಕೂ ಹೆಚ್ಚಿನ ಮಹಿಳೆಯರಿಗೆ ಆತ ಕಾಟ ಕೊಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಡಿಸಿಪಿ ಶ್ರೀನಾಥ್ ಜೋಶಿ ಮಾಹಿತಿ ನೀಡಿದ್ದಾರೆ.
ವರ್ಷದಿಂದ ಕಿಡಿಗೇಡಿತನ
ಪಿಯುಸಿ ಫೇಲ್ ಆಗಿ ಜೆಸಿಬಿ ಚಾಲಕನಾಗಿದ್ದ ಹರೀಶ್, ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಪೀಡಕನಾಗಿದ್ದ. ಆದರೆ ಬಹುತೇಕರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ಕೊಟ್ಟಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Mysuru Crime: ಸಾಲದ ಕಂತು ಕೇಳಿದ್ದಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ
ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಜತೆ ಸ್ನೇಹ ಮಾಡುವ ಮುನ್ನ ನಾಗರಿಕರು ಎಚ್ಚರ ವಹಿಸಬೇಕು. ಆರೋಪಿಯಿಂದ ಯಾರಿಗಾದರೂ ತೊಂದರೆ ಆಗಿದ್ದರೆ ನಿರ್ಭಯವಾಗಿ ಬಂದು ದೂರು ಸಲ್ಲಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಅಶ್ಲೀಲ ಫೋಟೋ ಮತ್ತು ಸಂದೇಶ ಕಳುಹಿಸುವ ಕಿಡಿಗೇಡಿಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಅಂತ ಆಗ್ನೇಯಾ ವಿಭಾಗದ ಡಿಸಿಪಿ ಶ್ರೀನಾಥ್.ಎಂ.ಜೋಷಿ ತಿಳಿಸಿದ್ದಾರೆ.
ಸಾಲಗಾರನ ಕೊಂದು 7 ವರ್ಷದ ಬಳಿಕ ಸಿಕ್ಕಿಬಿದ್ದ ದಂಪತಿ
ಸಾಲ ಕೊಟ್ಟ ಬಳಿಕ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಸಂಬಂಧಿಯನ್ನು ಹತ್ಯೆಗೈದು(Murder) ತಲೆಮರೆಸಿಕೊಂಡಿದ್ದ ದಂಪತಿ ಏಳು ವರ್ಷದ ಬಳಿಕ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ.
ಆಂಧ್ರಪ್ರದೇಶದ(Andhra Pradesh) ಶೇಖ್ ಮೊಹಮದ್ ಗೌಸ್ ಹಾಗೂ ಕೌಸರ್ ಅಲಿಯಾಸ್ ಹೀನಾ ಬಂಧಿತರಾಗಿದ್ದಾರೆ(Arrest). ಕಾಮಾಕ್ಷಿಪಾಳ್ಯದ ವಜೀರ್ ಪಾಷಾ ಹತ್ಯೆಯಾದ ಸಂಬಂಧಿ. ತಮಗೆ ಕೊಟ್ಟಿದ್ದ 1.5 ಲಕ್ಷ ಸಾಲಕ್ಕೆ(Loan) ಕೌಸರ್ ಜತೆ ವಜೀರ್ ಅಕ್ರಮ ಸಂಬಂಧ(Illicit Relationship) ಹೊಂದಿದ್ದ. ಆಗ ಆತನನ್ನು ಮನೆಗೆ ಕರೆಸಿಕೊಂಡು ದಂಪತಿ ಕೊಂದು ಬಳಿಕ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು.