ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಶಂಕಿತ ಪುಣೆಗೆ ಪರಾರಿಯಾಗುರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರ ಜೊತೆಗೆ ಬೆಂಗಳೂರು ಸ್ಫೋಟದ ಹಿಂದೆ ಐಸಿಸ್ ಬಳ್ಳಾರಿ ಮಾಡ್ಯೂಲ್? ಶಂಕೆ ವ್ಯಕ್ತವಾಗಿದೆ.
ಬೆಂಗಳೂರು (ಮಾ.8): ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಶಂಕಿತ ಪುಣೆಗೆ ಪರಾರಿಯಾಗುರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರ ತಂಡ ಪುಣೆಯಲ್ಲಿ ಶಂಕಿತನಿಗಾಗಿ ಹುಡುಕಾಟ ನಡೆಸುತ್ತಿದೆ. ಸಿಸಿಬಿ ಪೊಲೀಸರು ರಾಮೇಶ್ವರಂ ಕೆಫೆ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದಾಗ ಶಂಕಿತ ಮೆಜೆಸ್ಟಿಕ್ ಕಡೆಗೆ ತೆರಳುವ ಬಿಎಂಟಿಸಿ ಬಸ್ ಹತ್ತಿ ಹೊರಟಿರುವುದು ಗೊತ್ತಾಗಿದೆ. ಇದೇ ಜಾಡು ಹಿಡಿದು ಬಸ್ ಸಂಚರಿಸಿದ ಮಾರ್ಗದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರಿಗೆ ಶಂಕಿತ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಬಳಿಕ ಬೇರೆ ಬಸ್ ಹಿಡಿದು ಲೂಲೂ ಮಾಲ್ ವರೆಗೆ ಬಂದು ನಂತರ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತುಮಕೂರು ಮಾರ್ಗವಾಗಿ ಪುಣೆಗೆ ತೆರಳಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಸಿಸಿಬಿ ಪೊಲೀಸರ ತಂಡ ಲುಲೂ ಮಾಲ್, ತುಮಕೂರು ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಅಂತೆಯೇ ಒಂದು ತಂಡ ಪುಣೆಗೆ ತೆರಳಿ ಶಂಕಿತನ ಪತ್ತೆಗೆ ಕಾರ್ಯನಿರತವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಬಳ್ಳಾರಿಯ ಬಸ್ ನಿಲ್ದಾಣದಲ್ಲಿ ರಾತ್ರಿ.8.58ಕ್ಕೆ ಕಾಣಿಸಿಕೊಂಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಬಳ್ಳಾರಿ ಬಸ್ ನಿಲ್ದಾಣದಿಂದ ಮುಂದೆ ಎಲ್ಲಿಗೆ ಪ್ರಯಾಣ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
Rameshwaram cafe Blast: ಬೆಂಗಳೂರು, ಹುಮ್ನಾಬಾದ್ ಬಸ್ ಸಿಸಿಟೀವೀಲಿ ಕೆಫೆ ಬಾಂಬರ್ ಸೆರೆ!
undefined
ಮತ್ತೆ ಮೂವರು ವಶಕ್ಕೆ:
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಜೈಲಿನಲ್ಲಿದ್ದ ಮತ್ತೆ ಮೂವರನ್ನು ವಶಕ್ಕೆ ಪಡೆದು ಎನ್ ಐ ಎ ವಿಚಾರಣೆ ನಡೆಸುತ್ತಿದೆ. ಬೆಂಗಳೂರು, ಮುಂಬೈ, ದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಮಿನಾಜ್ ಸೇರಿದಂತೆ ನಾಲ್ವರ ವಿಚಾರಣೆ ನಡೆಸುತ್ತಿದೆ. ಬಳ್ಳಾರಿಯ ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಕ್, ದೆಹಲಿಯ ಶ್ಯಾನ್ ರೆಹಮಾನ್ @ ಹುಸೇನ್ ವಶಕ್ಕೆ ಪಡೆದು ಎನ್ ಐ ಎ ವಿಚಾರಣೆ ನಡೆಸುತ್ತಿದೆ.
ಬೆಂಗಳೂರು ಸ್ಫೋಟದ ಹಿಂದೆ ಐಸಿಸ್ ಬಳ್ಳಾರಿ ಮಾಡ್ಯೂಲ್?
ಬಳ್ಳಾರಿಗೆ ತೆರಳಿರುವ ಶಂಕಿತ ಆಮೇಲೆ ಅಲ್ಲಿಂದ ಕಾಣಿಸಿಲ್ಲ ಹೀಗಾಗಿ ಬೆಂಗಳೂರು ಸ್ಫೋಟದ ಹಿಂದೆ ಐಸಿಸ್ ಬಳ್ಳಾರಿ ಮಾಡ್ಯೂಲ್ ಎಂಬ ಶಂಕೆಯಲ್ಲಿ ಜೈಲಿನಲ್ಲಿದ್ದ ಬಳ್ಳಾರಿ ಮಾಡ್ಯೂಲ್‌ನ ನಾಲ್ವರ ವಶಕ್ಕೆ ಪಡೆದಿರುವ ಎನ್ ಐ ಎ ಬೆಂಗಳೂರು, ಮುಂಬೈ, ದೆಹಲಿಯಲ್ಲಿ ವಿಚಾರಣೆ ನಡೆಸುತ್ತಿದೆ. ಮಿನಾಜ್ ಮತ್ತು ಸೈಯದ್ ಸಮೀರ್ ನನ್ನು ಬೆಂಗಳೂರಿನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಶ್ಯಾನ್ ರೆಹಮಾನ್ ವಿಚಾರಣೆ ಅನಾಸ್ ಇಕ್ಬಾಲ್ ಶೇಕ್ ನನ್ನು ಕೂಡ ವಿಚಾರಣೆ ನಡೆಸಲಾಗುತ್ತಿದೆ. ರಾಮೇಶ್ವರಂ ಕೆಫೆ ಕೇಸ್ ಸಂಬಂಧ ನಾಲ್ವರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬಿಎಂಟಿಸಿ ಬಸ್ ಸಿಸಿಟಿವಿ ಕ್ಯಾಮರಾದಲ್ಲಿ ಅಚಾನಕ್ ಸೆರೆಸಿಕ್ಕ ರಾಮೇಶ್ವರಂ ಕೆಫೆ ಬಾಂಬರ್!
ಏನಿದು ಐಸಿಸ್ ಬಳ್ಳಾರಿ ಮಾಡ್ಯೂಲ್?
ಇದು 2023 ಡಿಸೆಂಬರ್ 14ರಂದು ದಾಖಲಾಗಿದ್ದ ಪ್ರಕರಣ. ಈ ಸಂಬಂಧ ದೇಶದ ನಾಲ್ಕು ರಾಜ್ಯಗಳಲ್ಲಿ ಎನ್ ಐ ಎ ದಾಳಿಯಾಗಿತ್ತು. ಒಟ್ಟು 19 ಕಡೆ ದಾಳಿ ನಡೆಸಿದ್ದ ಎನ್ ಐ ಎ ಅಧಿಕಾರಿಗಳು ಒಟ್ಟು 8 ಶಂಕಿತ ಉಗ್ರರನ್ನು ಬಂಧಿಸಿದ್ದರು. ಬಂಧಿತರು ಕರ್ನಾಟಕ ಸೇರಿದಂತೆ ಆಯಾ ರಾಜ್ಯದ ಜೈಲುಗಳಲ್ಲಿದ್ದರು. ಐಇಡಿ ತಯಾರಿಕೆಗೆ ಬೇಕಾದ ಕಚ್ಛಾವಸ್ತುಗಳು ಈ ವೇಳೆ ಜಪ್ತಿ ಮಾಡಲಾಗಿತ್ತು.
ಯಾರು ಈ ಮಿನಾಜ್ @ ಸುಲೆಮಾನ್..?:
ಐಸಿಸ್ ಬಳ್ಳಾರಿ ಮಾಡ್ಯೂಲ್ ಮುಖ್ಯಸ್ಥ ಮಿನಾಜ್ ಅಲಿಯಾಸ್ ಸುಲೇಮಾನ್ ಈತ ಬಳ್ಳಾರಿ ಮೂಲದವನೇ ಆಗಿದ್ದು, ಐಸಿಸ್ ಬಳ್ಳಾರಿ ಮಾಡ್ಯೂಲ್‌ನ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಿನಾಜ್ ದೇಶದ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಈತನಿಗೆ ಮುಂಬೈ, ದೆಹಲಿ, ಜಾರ್ಖಂಡ್, ಪುಣೆ ಮೊದಲಾದೆಡೆ ಸಂಪರ್ಕ ಇದೆ. ಅಲ್ಲಿನ ಯುವಕರನ್ನೂ ಬಳ್ಳಾರಿ ಮಾಡ್ಯೂಲ್‌ಗೆ ಸೇರಿಸಿದ್ದ. ಮಿನಾಜ್ ಮೊದಲು ಪಿಎಫ್‌ಐ ಸಂಘಟನೆಯಲ್ಲಿದ್ದ ಪಿಎಫ್‌ಐ ಬ್ಯಾನ್ ಬಳಿಕ ಮತ್ತೊಂದು ಸಂಘಟನೆ ಮೂಲಕ ಕೆಲಸ ಮಾಡುತ್ತಿದ್ದ, ಈ ಹಿಂದೆ ಪಿಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ. ರಾಜ್ಯಾದ್ಯಂತ ಪಿಎಫ್‌ಐ ಮೇಲೆ ಎನ್‌ಐಎ, ರಾಜ್ಯ ಪೊಲೀಸ್ ದಾಳಿ ನಡೆಸಿತ್ತು ಆದರೆ ಈ ದಾಳಿ ವೇಳೆ ಮಿನಾಜ್ ಮಾತ್ರ ಅರೆಸ್ಟ್ ಆಗಿರಲಿಲ್ಲ.
ಪಿಎಫ್‌ಐ ನಿಷೇಧದ ಬಳಿಕ ಐಸಿಸ್ ಜೊತೆಗೆ ಸಂಪರ್ಕ ಆರಂಭಿಸಿದ್ದ, ಐಸಿಸ್‌ನಿಂದ ದೊಡ್ಡಮಟ್ಟದಲ್ಲಿ ಮಿನಾಜ್‌ಗೆ ಪ್ರೋತ್ಸಾಹ ಸಿಕ್ಕಿತ್ತು. ಹೊಸ ಯುವಕರನ್ನು ಐಸಿಸ್‌ಗೆ ಸೇರಿಸುವ ಹೊಣೆ ಮಿನಾಜ್ ಹೆಗಲಿಗೆ ಇತ್ತು. ಇದಕ್ಕಾಗಿ ಯುವಕರ ಮನಪರಿವರ್ತನೆ ಮಾಡುವ ಕೆಲಸಕ್ಕೆ ಕೈಹಾಕಿದ್ದ. ಅದರಲ್ಲೂ ಪಿಎಫ್‌ಐ ಕಾರ್ಯಕರ್ತರಾಗಿದ್ದವರಿಗೆ ಮಿನಾಜ್ ಮಣೆ ಹಾಕಿದ್ದ. ರಾಜ್ಯದಿಂದ ಬಂಧಿತರಾದವರಲ್ಲಿ ಕೆಲವರು ಪಿಎಫ್‌ಐನಲ್ಲೂ ಸಕ್ರಿಯರಾಗಿದ್ರು.
ಸುಲೈಮಾನ್ @ ಮಿನಾಜ್‌ಗೆ ಇವಾಗ 26 ವರ್ಷ. ಸುಲೈಮಾನ್ ತಂದೆ ಬಳ್ಳಾರಿಯಲ್ಲಿ ಬಟ್ಟೆ ಅಂಗಡಿ ನಡೆಸ್ತಿದ್ದಾರೆ. ತಾಯಿಯೂ, ತಂದೆಯ ಜೊತೆಗೆ ಅಂಗಡಿಯಲ್ಲಿ ಕೆಲಸ. ಸುಲೈಮಾನ್ ಅಣ್ಣ ಗೋವಾಗೆ ಕೆಲಸಕ್ಕೆ ಹೋಗಿದ್ದ. ಅಲ್ಲಿದ್ದಾಗ ಅಪಘಾತವಾಗಿ ಗಾಯಗೊಂಡು ವಾಪಾಸ್ ಊರಿಗೆ ಬಂದಿದ್ದ. ಬಳಿಕ ತಂದೆಗೆ ಸಹಾಯ ಮಾಡ್ತಾ ಬಳ್ಳಾರಿಯಲ್ಲೇ ಇದ್ದಾನೆ. ಸುಲೈಮಾನ್ ತಂಗಿ ತುಮಕೂರಿನಲ್ಲಿ MBBS ವ್ಯಾಸಂಗ ಮಾಡ್ತಿದ್ದಾಳೆ.