ಬೆಂಗಳೂರು: ಹಣಕ್ಕಾಗಿ ಪೋರ್ನ್ ವಿಡಿಯೋ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

By Ravi Janekal  |  First Published Mar 8, 2024, 12:01 AM IST

ಹಣದಾಸೆ ಪೋರ್ನ್ ವಿಡಿಯೋಗಳ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಸೌಮ್ಯ, ರವಿ, ರೇಣುಕ, ರಮೇಶ ಎಂಬುವವರೇ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿನ 5ನೇ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯೊಂದನ್ನು ಲೀಸ್‌ಗೆ ಪಡೆದು ಪೋರ್ನ್‌ ವಿಡಿಯೋ ಮಾಡುತ್ತಿದ್ದ ಗ್ಯಾಂಗ್.


ಬೆಂಗಳೂರು (ಮಾ.7): ಹಿಂದೆಲ್ಲ ಪೋರ್ನ್ ವಿಡಿಯೋಗಳೆಂದೆರೆ ವಿದೇಶದಲ್ಲಿ ತಯಾರಾಗಿ ಸಿಡಿ ಮೂಲಕ ಜನರ ಕೈಗೆ ಸೇರುತ್ತಿದ್ದವು. ಅವುಗಳನ್ನು ಜನರು ಕದ್ದುಮುಚ್ಚಿ ನೋಡುತ್ತಿದ್ದರು. ಆದರೆ ಇದೀಗ ಸಿಲಿಕಾನ್ ಸಿಟಿಯಲ್ಲೇ ಪೋರ್ನ್ ವಿಡಿಯೋಗಳು ತಯಾರಾಗುತ್ತಿವೆ ಎಂದರೆ ನಂಬುತ್ತೀರಾ? ಹೌದು ಹಣದಾಸೆ ಪೋರ್ನ್ ವಿಡಿಯೋಗಳ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.

ಸೌಮ್ಯ, ರವಿ, ರೇಣುಕ, ರಮೇಶ ಎಂಬುವವರೇ ಬೆಂಗಳೂರಿನ ಉಲ್ಲಾಳ ಉಪನಗರದಲ್ಲಿನ 5ನೇ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯೊಂದನ್ನು ಲೀಸ್‌ಗೆ ಪಡೆದು ಪೋರ್ನ್‌ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ, ವೆಬ್‌ಸೈಟ್‌ಗಳಿಗೆ ಅಪ್ಲೋಡ್ ಮಾಡಿ ಹಣ ಗಳಿಸುತ್ತಿದ್ದ ಗ್ಯಾಂಗ್.

Tap to resize

Latest Videos

undefined

ಗೌಪ್ಯತೆ ನಿಯಮ ಮೀರಿ ಅಶ್ಲೀಲ ಚಿತ್ರ ಹಂಚಿಕೆ, ಪೋರ್ನ್‌ಹಬ್‌ ಮಾಲೀಕನ ಮೇಲೆ ಕೆನಡಾ ಕ್ರಮ!

ಸೌಮ್ಯ ಹಾಗೂ ರವಿ ಇಬ್ಬರು ಪೋರ್ನ್ ಸ್ಟಾರ್‌ಗಳು. ರೇಣುಕ, ರಮೇಶ್ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಬಾಡಿಗೆ ಮನೆಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ವಿಡಿಯೋ ಮಾಡುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಈ ಬಗ್ಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು.

ಈ ಸೀಕ್ರೆಟ್‌ಗಳನ್ನು ಪೋರ್ನ್‌ ನಟ ನಟಿಯರು ಯಾರಿಗೂ ಹೇಳೊಲ್ಲ!

click me!