* ಕುಡುಕ ಗಂಡನ ಕಾಟ ತಾಳಲಾರದೆ ಕರೆಂಟ್ ಶಾಕ್ ಕೊಟ್ಟಳು
* ಪ್ರತಿದಿನ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ
* ಮತ್ತು ಬರುವ ಔಷಧಿ ನೀಡಿ ಪ್ರಜ್ಞೆ ತಪ್ಪಿದ ಮೇಲೆ ಶಾಕ್ ಕೊಟ್ಟಳು
ಜೈಪುರ(ಆ. 17) ಕುಡುಕ ಗಂಡನ ಕೆಟ್ಟ ವರ್ತನೆ ತಾಳಲಾರದೆ ಪತ್ನಿ ಕರೆಂಟ್ ಶಾಕ್ ಕೊಟ್ಟು ಆತನನ್ನು ಕೊಲ್ಲುವ ಯತ್ನ ಮಾಡಿದ್ದಾಳೆ.
ಕುಡುಕ ಗಂಡ ಕಂಠ ಪೂರ್ತಿ ಮದ್ಯ ಸೇವನೆ ಮಾಡಿ ಪ್ರತಿದಿನ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಪತಿ ಸದ್ಯ ಬಿಕನೇರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗಂಡ 32 ವರ್ಷದ ಮಹೇಂದ್ರ ದನ್ ನನ್ನು ಪತ್ನಿ ಆಗಸ್ಟ್ 12 ರಂದು ಕೊಲೆ ಮಾಡಲು ಯತ್ನಿಸಿದ್ದಾಳೆ. ಕೆಲಸ ಮುಗಿಸಿ ಮನೆಗೆ ಬಂದ ಗಂಡನಿಗೆ ಹೊಟ್ಟೆ ತುಂಬಾ ಆಹಾರ ನೀಡಿದ್ದಾಳೆ. ಆದರೆ ಆಹಾರದಲ್ಲಿ ಮತ್ತು ಬರುವ ಔಷಧ ಸೇರಿಸಿದ್ದಳು. ಗಂಡ ಎಚ್ಚಗೊಂಡಾಗ ಆತನ ಕಾಲುಗಳನ್ನು ವೈರ್ ನಿಂದ ಬಿಗಿಯಾಗಿ ಕಟ್ಟಲಾಗಿತ್ತು. ಕರೆಂಟ್ ಶಾಕ್ ಕೊಡಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಳು.
ಛೇ.. ಒಂದು ಹಲ್ಲು ಸೆಟ್ ಮುರಿದಿದ್ದಕ್ಕೆ ಕಂದಮ್ಮನ ಕೊಲೆ
ಶಾಕ್ ಕೊಟ್ಟ ನಂತರ ಗಂಡ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದಾನೆ. ಮರುದಿನ ಎಷ್ಷರಗೊಂಡಾಗ ಪತ್ನಿ ಮಾಡಿದ ಕೆಲಸ ಗೊತ್ತಾಗಿದೆ. ಅಪ್ಪ ಮತ್ತು ಸಹೋದರ ಈ ವಿಚಾರವನ್ನು ತಿಳಿಸಿದ್ದಾರೆ ಎಂದು ಹೇಳಿಕೆಯಲ್ಲಿ ಮಹೇಂದ್ರ ತಿಳಿಸಿದ್ದಾನೆ.
ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರತಿದಿನ ಚಿತ್ರಹಿಂಸೆ ತಾಳಲಾರದೆ ಇಂಥ ಕೆಲಸ ಮಾಡಿದೆ ಎಂದು ಒಪ್ಪಿಕೊಂಡಿದ್ದಾಳೆ .