*ಸಿನಿಮಾ ಫ್ಲಾಪ್ ಆಗಿದ್ದಕ್ಕೆ ಅಡ್ಡದಾರಿ ಹಿಡಿದ ನಿರ್ದೇಶಕ
* ಲೋಹಕ್ಕೆ ಚಿನ್ನದ ಲೇಪ ಮಾಡಿ ಅದನ್ನು ಅಡವಿಟ್ಟು ಸಾಲ
* ಬಡ್ಡಿ ಕಟ್ಟಲು ನೊಟಿಸ್ ನೀಡಿದರೆ ಕ್ಯಾರೇ ಎನ್ನಲಿಲ್ಲ
* ಬ್ಯಾಂಕ್ ಸಿಬ್ಬಂದಿಗೆ ಶಾಕ್ ನೀಡಿದ ಕಿಲಾಡಿ
ಬೆಂಗಳೂರು(ಆ. 17) ಸಿನಿಮಾ ಫ್ಲಾಪ್ ಆಗಿದ್ದಕ್ಕೆ ಈ ನಿರ್ದೇಶಕ ಅಡ್ಡ ದಾರಿ ಹಿಡಿದ್ದಾನೆ. ನಿರ್ದೇಶಕನ ಮಾಸ್ಟರ್ ಪ್ಲಾನ್ ಗೆ ಪೊಲೀಸರೆ ದಂಗಾಗಿದ್ದಾರೆ. ಸಿನಿಮಾ ಸ್ಟೈಲ್ ನಲ್ಲಿ ಯಾಮಾರಿಸಿದ್ದ ಖತರ್ನಾಕ್ ನಿರ್ದೇಶಕ ಖಾಸಗಿ ಬ್ಯಾಂಕ್ ನಲ್ಲಿ ಚಿನ್ನ ಇಟ್ಟು 42.91 ಲಕ್ಷ ಹಣ ಪಡೆದಿದ್ದ.
ಬಡ್ಡಿ ಕಟ್ಟಲು ನೋಟೀಸ್ ಕೊಟ್ಟರು ಕ್ಯಾರೆ ಎನ್ನದ ನಿರ್ದೇಶಕ ಹರಾಜು ಹಾಕ್ತಿವಿ ಅಂದ್ರು ಡೋಂಟ್ ಕೇರ್ ಅಂದಿದ್ದ. ಆಗ ಡೌಟ್ ಬಂದು ಬಂಗಾರ ಚೆಕ್ ಮಾಡಿದಾಗ ಬ್ಯಾಂಕ್ ಸಿಬ್ಬಂದಿಗೆ ಆಘಾತವಾಗಿದೆ. ಲೋಹಕ್ಕೆ ಚಿನ್ನದ ಲೇಪ ಮಾಡಿ ಅದನ್ನು ಅಡವಿಟ್ಟಿದ್ದ ಸಂಗತಿ ಬೆಳಕಿಗೆ ಬಂದಿದೆ.
ವಂಚಕ ಅಂದರೆ ಯುವರಾಜ್ ಸ್ವಾಮಿ.. ಸ್ವಾಮಿ ಪುರಾಣ
ಮಾಸ್ಟರ್ ಪ್ಲಾನ್ ಮಾಡಿ ವಂಚನೆ ಮಾಡಿದ ನಿರ್ದೇಶಕನ ಬಂಧನವಾಗಿದೆ. ಕರಮಲ ಬಾಲರವಿಂದ್ರನಾಥ ಬಂಧಿತ ನಿರ್ದೇಶಕ ಮಧುರ ಸ್ವಪ್ನ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ. 2016 ರಲ್ಲಿ ತೆರೆ ಕಂಡಿದ್ದ ಮಧುರ ಸ್ವಪ್ನ ಸಿನಿಮಾ ಅಂತ ಹೆಸರು ಮಾಡಿರಲಿಲ್ಲ.
ರಾಜಾಜಿನಗರ ಪೊಲೀಸರು ಆರೋಪಿ ಬಾಲರವಿಂದ್ರನಾಥನನ್ನು ಬಂಧಿಸಿದ್ದಾರೆ. ಹಲವೆಡೆ ಇದೇ ರೀತಿ ವಂಚಿಸಿರೋ ಅನುಮಾನ ಸಹ ಇದೆ. ಹೆಚ್ಚಿನ ವಿಚಾರಣೆಗೆ ನಿರ್ದೇಶದಕನ್ನು ಒಳಪಡಿಸಲಾಗಿದೆ.