
ಮುಂಬೈ(ಆ. 17) ಗಂಡು ಸಂತಾನವೇ ಬೇಕೆಂದು ಪಟ್ಟು ಹಿಡಿದ ಪತಿರಾಯ ಹೀನ ಕೆಲಸ ಮಾಡಿದ್ದಾನೆ. ಗಂಡು ಸಂತಾನದ ಹಪಹಪಿಯಿಂದ ಪತ್ನಿಗೆ ಎಂಟು ಸಾರಿ ಅಬಾರ್ಶನ್ ಮಾಡಿಸಿದ್ದಾನೆ.
ಮುಂಬೈನ ದಾದರ್ ದಿಂದ ಘಟನೆ ವರದಿಯಾಗಿದೆ. 40 ವರ್ಷದ ಮಹಿಳೆ ಗಂಡನಿಂದ ಪಡಬಾರದ ಸಂಕಷ್ಟ ಅನುಭವಿಸಿದ್ದಾಳೆ. ಗಂಡು ಮಗು ಬೇಕೆಂಬ ಕಾರಣಕ್ಕೆ ಪತ್ನಿಗೆ 1500 ಸ್ಟೀರಾಯ್ಡ್ ಮತ್ತು ಹಾರ್ಮೋನುಗಳ ಚುಚ್ಚುಮದ್ದು ನೀಡಿಸಿದ್ದಾನೆ ಎಂಬ ಆರೋಪವೂ ಇದೆ.
ವೃದ್ಧ ಗುರುವಿಗೆ 28 ರ ಶಿಷ್ಯೆ.. ಇದೊಂದು ಅಬಾರ್ಶನ್ ಕಹಾನಿ
ನೊಂದ ಮಹಿಳೆ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಉನ್ನತ ಶಿಕ್ಷಣ ಪಡೆದ ಕುಟುಂಬಕ್ಕೆ ಸೇರಿದ ವ್ಯಕ್ತಿಯನ್ನು ಮಹಿಳೆ 2007 ರಲ್ಲಿ ಮದುವೆಯಾಗಿದ್ದಳು. ಮಹಿಳೆಯ ಪತಿ ಮತ್ತು ಅತ್ತೆ ವಕೀಲರಾಗಿದ್ದು, ಆಕೆಯ ಅತ್ತಿಗೆ ವೈದ್ಯೆ. ಮದುವೆಯಾದ ಕೆಲವು ವರ್ಷಗಳ ನಂತರ, ಆರೋಪಿ ಮಹಿಳೆಯ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿ ಗಂಡು ಮಗು ಬೇಕೆಂಬ ಪಟ್ಟು ಹಿಡಿದಿದ್ದ.
ತನ್ನ ಕುಟುಂಬ ಮತ್ತು ಪ್ರತಿಷ್ಠೆ ಕಾಪಾಡಲು ಗಂಡು ಮಗು ಬೇಕು ಎನ್ನುವುದು ಆರೋಪಿಯ ವಾದವಾಗಿತ್ತು. 2009 ರಲ್ಲಿ ಮಹಿಳೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು. ಇದಾಗಿ ಎರಡು ವರ್ಷದ ನಂತರ ಆಕೆ ಮತ್ತೆ ಗರ್ಭ ಧರಿಸಿದಳು. ವೈದ್ಯರ ಬಳಿಮ ಕರೆದುಕೊಂಡು ಹೋದ ಪಾಪಿ ಪತಿರಾಯ ಆಕೆಗೆ ಮಗು ಬೇಡ ಎಂದು ಹೇಳಿಸಿ ಅಬಾರ್ಶನ್ ಮಾಡಿಸಿದ.
ಇದಾದ ಮೇಲೆ 2011 ರಲ್ಲಿ ಚಿಕಿತ್ಸೆಗೆಂದು ಆರೋಪಿ ಪತ್ನಿಯನ್ನು ಬ್ಯಾಂಕಾಕ್ ಗೆ ಕರೆದುಕೊಂಡು ಹೋದ. ಅಲ್ಲಿ ಆಕೆಗೆ ಹಾರ್ಮೋನ್ ಚಿಕಿತ್ಸೆ ಎಂದು ಚಿತ್ರಹಿಂಸೆ ನೀಡಿದ. ಭಾರತದಲ್ಲಿ ನಿಷೇಧಕ್ಕೆ ಗುರಿಯಾಗಿರುವ ಚಿಕಿತ್ಸೆಯನ್ನು ನೀಡಿದ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ