ಅಪ್ರಾಪ್ತ ಬಾಲಕಿ ಮೇಲೆ ಹಲವು ಬಾರಿ ಗ್ಯಾಂಗ್‌ ರೇಪ್‌: ಕೃತ್ಯ ಸೆರೆ ಹಿಡಿದು ಕಾಮುಕರ ಬ್ಲ್ಯಾಕ್‌ಮೇಲ್‌

Published : May 29, 2023, 03:55 PM IST
ಅಪ್ರಾಪ್ತ ಬಾಲಕಿ ಮೇಲೆ ಹಲವು ಬಾರಿ ಗ್ಯಾಂಗ್‌ ರೇಪ್‌: ಕೃತ್ಯ ಸೆರೆ ಹಿಡಿದು ಕಾಮುಕರ ಬ್ಲ್ಯಾಕ್‌ಮೇಲ್‌

ಸಾರಾಂಶ

ಶಾರಿಕ್‌ ಹುಸೇನ್‌ ಅವರ ಮನೆಯಲ್ಲಿ ಮೊದಲೇ ಇದ್ದ ಸಲ್ಮಾನ್ ಅಲಿ, ಬಾಲಕಿಗೆ ಚಹಾದಲ್ಲಿ ಮತ್ತು ಬರೆಸುವ ವಸ್ತುವನ್ನು ಬೆರೆಸಿದ್ದು, ಆಕೆ ಅದನ್ನು ಕುಡಿದ ಬಳಿಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ. 

ಜೈಪುರ (ಮೇ 29, 2023): ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಬ್ಲ್ಯಾಕ್‌ ಮೇಲ್ ಮಾಡಿದ ಆರೋಪದ ಮೇಲೆ ಇಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬಂಧಿತರು ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ, ಹಾಗೂ ಈ ಹೀನ ಕೃತ್ಯವನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಆಕೆಯ ಫೋಟೋಗಳು ಮತ್ತು ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ತಿಳಿದುಬಂದಿದೆ.

ಈ ಕೃತ್ಯವೆಸಗಿದ ಆರೋಪಿಗಳನ್ನು ಶಾರಿಕ್ ಹುಸೇನ್ (21) ಮತ್ತು ಸಲ್ಮಾನ್ ಅಲಿ (21) ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಶಹಬಾಜ್‌ಪುರ ಕಾಲಾ ನಿವಾಸಿಗಳು ಎಂದೂ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ಸಂಬಂಧಿಕರು ಮಾರ್ಚ್ 10 ರಂದು ದೂರು ದಾಖಲಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಮಮೂರ್ತಿ ಜೋಶಿ ಮಾಹಿತಿ ನೀಡಿದ್ದಾರೆ. ತಮ್ಮ ಮಗಳು ಮದುವೆಗೆ ಹೋಗುತ್ತಿದ್ದಾಗ ಆರೋಪಿ ಶಾರಿಕ್ ಹುಸೇನ್‌ ತನ್ನ ಮನೆಗೆ ಕರೆದೊಯ್ದಿದ್ದಾನೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ.ಇ

ಇದನ್ನು ಓದಿ: Honour Killing: ಪ್ರೀತಿ ಮಾಡಿದ್ದೇ ತಪ್ಪಾಯ್ತಾ..? ಯುವತಿಗೆ ಕುಟುಂಬಸ್ಥರಿಂದ ತೀವ್ರ ಚಿತ್ರಹಿಂಸೆ, ಸಜೀವ ದಹನ

ಅಲ್ಲದೆ, ಶಾರಿಕ್‌ ಹುಸೇನ್‌ ಅವರ ಮನೆಯಲ್ಲಿ ಮೊದಲೇ ಇದ್ದ ಸಲ್ಮಾನ್ ಅಲಿ, ಬಾಲಕಿಗೆ ಚಹಾದಲ್ಲಿ ಮತ್ತು ಬರೆಸುವ ವಸ್ತುವನ್ನು ಬೆರೆಸಿದ್ದು, ಆಕೆ ಅದನ್ನು ಕುಡಿದ ಬಳಿಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಇಬ್ಬರೂ ಆರೋಪಿಗಳು ತಮ್ಮ ಮೊಬೈಲ್‌ಗಳಲ್ಲಿ ಆಕೆಯ ಫೋಟೋಗಳನ್ನು ತೆಗೆದಿದ್ದು, ಅಲ್ಲದೆ, ವಿಡಿಯೋವೊಂದನ್ನೂ ಮಾಡಿದ್ದರು. ಹಾಗೂ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು ಎಂದೂ ರಾಜಸ್ಥಾನ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆಯ ಕುಟುಂಬ ದೂರು ಸಲ್ಲಿಕೆ ಮಾಡಿದ ಬಳಿಕ ಐಪಿಸಿ, ಶಸ್ತ್ರಾಸ್ತ್ರ ಮತ್ತು ಐಟಿ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. ಹಾಗೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಾರಿಕ್ ಹುಸೇನ್ ಮತ್ತು ಸಲ್ಮಾನ್ ಅಲಿಯನ್ನು ಬಂಧಿಸಲಾಗಿದೆ. ಹಾಗೆ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದೂ ರಾಜಸ್ಥಾನ ಪೊಲೀಸರು ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: ಮತ್ತೊಂದು ಲವ್ ಜಿಹಾದ್‌ ಕೇಸ್‌: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!

ಅಸ್ಸಾಂನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿರುವ ಘಟನೆ ಫೆಬ್ರವರಿಯಲ್ಲಿ ನಡೆದಿತ್ತು.. ಈ ಸಂಬಂಧ ದಿಬ್ರುಗಢದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ಇಬ್ಬರು ಆರೋಪಿಗಳನ್ನು ಭಾಯಿಜಾನ್ ಅಲಿ ಮತ್ತು ಸಫರ್ ಅಲಿ ಎಂದು ಗುರುತಿಸಲಾಗಿದೆ ಎಂದೂ ದಿಬ್ರುಗಢ ಎಸ್‌ಪಿ ಶ್ವೇತಾಂಕ್ ಮಿಶ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ದಿಬ್ರುಗಢದಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಭಾಯಿಜಾನ್ ಅಲಿ ಮತ್ತು ಸಫರ್ ಅಲಿ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿ ಅಥಾಬರಿ ಚಹಾ ತೋಟದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ" ಎಂದೂ ಅವರು ಹೇಳಿದರು. ಆರೋಪಿಗಳ ವಿರುದ್ಧ 2012 ರ ಪೋಕ್ಸೋ ಕಾಯ್ದೆಯ ಸೆಕ್ಷನ್ 376 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಎಸ್‌ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಗರ್ಲ್‌ಫ್ರೆಂಡ್‌ ಕೊಲೆ ಮಾಡಿ ಪೀಸ್‌ ಪೀಸ್‌ ಮಾಡ್ದ: ಕೈಕಾಲು ಫ್ರಿಡ್ಜ್‌ನಲ್ಲಿ, ಡೆಡ್‌ಬಾಡಿ ಸೂಟ್‌ಕೇಸ್‌ನಲ್ಲಿಟ್ಟ ಪಾಪಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್