ಎಮ್‌ಕಾಂ ಮುಗಿಸಿ ಉದ್ಯೋಗಗಾಗಿ ಹಲವು ಪರೀಕ್ಷೆ ಬರೆದಿದ್ದಾಳೆ. ಆದರೆ ಉದ್ಯೋಗ ಸಿಕ್ಕಿಲ್ಲ. ಇದರಿಂದ ಬೇಸತ್ತ 22ರ ಹರೆಯದ ಯುವತಿ ಬದುಕು ಅಂತ್ಯಗೊಳಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ(ಮೇ.29): ವಯಸ್ಸು 22. ಹೆಸರು ಗೌತಮಿ. ಎಂಕಾಂ ಸ್ನಾತಕೋತ್ತರ ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದಾಡಿದ್ದಾಳೆ. ಬ್ಯಾಂಕಿಂಗ್ ಸೇರಿ ಇತರ ಕೆಲ ಪರೀಕ್ಷೆಗಳನ್ನು ಬರೆದಿದ್ದಾಳೆ. ಆದರೆ ಉದ್ಯೋಗ ಸಿಗಲಿಲ್ಲ. ಇದರಿಂದ ಖಿನ್ನತೆಗೆ ಒಳಗಾದ ಯುವತಿ ಇದೀಗ ಬದುಕು ಅಂತ್ಯಗೊಳಿಸಿದ್ದಾಳೆ. ಉದ್ಯೋಗ ಸಿಗದೆ ಮನನೊಂದಿದ್ದ ಯುವತಿ ಡೆತ್ ನೋಟ್ ಬರೆದಿಟ್ಟು ಬುದುಕಿಗೆ ಪೂರ್ಣವಿರಾಮ ಹಾಕಿದ್ದಾಳೆ. ಇತ್ತ ಯುವತಿ ನಿರ್ಧಾರ ಪೋಷಕರನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ.
ಉಡುಪಿ ಜಿಲ್ಲೆಯ ಬೈಂದೂರಿನ ಕಾಲ್ತೋಡು ಗ್ರಾಮದ ನಿವಾಸಿಯಾಗಿರುವ ಗೌತಮಿ, ಎಂಜಿಎಂ ಕಾಲೇಜಿನಲ್ಲಿ ಎಂಕಾಂ ಪದವಿ ಮುಗಿಸಿದ್ದಾಳೆ. ಸ್ನಾತಕೋತ್ತರ ಪದವಿ ಬಳಿಕ ಹಲವು ಕಂಪನಿಗಳು ಉದ್ಯೋಗಾಗಿ ಅರ್ಜಿ ಹಾಕಿದ್ದಳು. ಇತ್ತ ಬ್ಯಾಕಿಂಗ್ ಪರೀಕ್ಷೆಯನ್ನು ಬರೆದಿದ್ದಳು. ಆದರೆ ಯಾವುದರಲ್ಲೂ ಉದ್ಯೋಗ ಸಿಕ್ಕಿರಲಿಲ್ಲ. ಇದು ಗೌತಮಿಯನ್ನು ತೀವ್ರವಾಗಿ ಕುಗ್ಗಿಸಿದೆ. ಖಿನ್ನತೆಗೆ ಜಾರಿಗೆ ಗೌತಮಿ, ಡೆತ್ ನೋಟ್ ಬರೆದಿತ್ತು ಮನೆಯ ಮೊದಲ ಮಹಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ.
undefined
ಗೆಳೆಯನಿಂದಲೇ ಹತ್ಯೆಯಾದ 16ರ ಬಾಲಕಿ, 20 ಬಾರಿ ಚಾಕು ಇರಿದು ಕಲ್ಲು ಎತ್ತಿಹಾಕಿ ಭೀಕರ ಕೊಲೆ!
ಅರ್ಹತೆ ಇದ್ದರೂ ಯುವತಿಗೆ ಉದ್ಯೋಗ ಸಿಕ್ಕಿರಲಿಲ್ಲ. ಇದು ಗೌತಮಿ ಮಾನಸಿಕವಾಗಿ ಕುಗ್ಗಿಸಿತ್ತು. ಖಿನ್ನತೆಗೆ ಜಾರಿದ್ದ ಯುವತಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿ ಮೃದೇಹ ಪರಿಶೀಲನೆ ನಡೆಸಿದ್ದಾರೆ. ಇತ್ತ ಯುವತಿ ಬರೆದಿರುವ ಡೆತ್‌ನೋಟ್ ವಶಕ್ಕೆ ಪಡೆದಿದ್ದಾರೆ.
ವಿದ್ಯಭ್ಯಾಸದಲ್ಲಿ ಮುಂದಿದ್ದ ಗೌತಮಿ ಎಂಕಾಂನಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಆದರೆ ಉದ್ಯೋಗ ವಿಚಾರದಲ್ಲಿ ಗೌತಮಿ ಎಡವಿದ್ದಾಳೆ. ಯುವತಿಯ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ಹೀಗಾಗಿ ಕಳೆದ ಕೆಲ ದಿನಗಳಿಂದ ಯಾರೊಂದಿಗೂ ಹೆಚ್ಚು ಮಾತನಾಡದೇ ಮೌನಿಯಾಗಿದ್ದಳು. ಉದ್ಯೋಗ ಸಿಗದ ಮಗಳನ್ನು ಪೋಷಕರು ಪ್ರತಿ ಭಾರಿ ಸಮಾಧಾನ ಮಾಡಿದ್ದರು. ಆದರೆ ಯುವತಿ ಮಾತ್ರ ಪೋಷಕರ ಮಾತು ಕೇಳದೆ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾಳೆ.
ಮತ್ತೊಂದು ಲವ್ ಜಿಹಾದ್ ಕೇಸ್: ಗರ್ಭಿಣಿಗೆ ಮತಾಂತರಕ್ಕೆ ಒತ್ತಾಯಿಸಿ ವಿಷ ಹಾಕಿ ಕೊಂದ ಪಾಪಿಗಳು!
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಗೌತಮಿ ಗೆಳೆತಿಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕಾಲೇಜಿನಲ್ಲಿ ಎಲ್ಲರ ಅಚ್ಚುಮೆಚ್ಚಾಗಿದ್ದ ಗೌತಮಿಯ ಈ ಕಠಿಣ ನಿರ್ಧಾರ ಸಹಪಾಠಿಗಳನ್ನು ಆತಂಕಕ್ಕೆ ತಳ್ಳಿದೆ. ಗೌತಮಿ ಕೆಲ ದಿನಗಳಿಂದ ವ್ಯಾಟ್ಸ್‌ಆ್ಯಪ್ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದಿದ್ದಾರೆ. ಆದರೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ಸಣ್ಣ ಸುಳಿವು ಇರಲಿಲ್ಲ ಎಂದಿದ್ದಾರೆ.