ಬೆಂಗಳೂರು: ರಾಯಚೂರಿನಿಂದ ಕೆಲಸಕ್ಕೆ ಬಂದ ಮಹಿಳೆ ಹೊತ್ತೊಯ್ದು ಅತ್ಯಾಚಾರವೆಸಗಿ ಕೊಲೆ

Published : Apr 04, 2024, 04:17 PM IST
ಬೆಂಗಳೂರು: ರಾಯಚೂರಿನಿಂದ ಕೆಲಸಕ್ಕೆ ಬಂದ ಮಹಿಳೆ ಹೊತ್ತೊಯ್ದು ಅತ್ಯಾಚಾರವೆಸಗಿ ಕೊಲೆ

ಸಾರಾಂಶ

ಕಲ್ಯಾಣ ಕರ್ನಾಟಕದ ರಾಯಚೂರಿನಿಂದ ಕಟ್ಟಡ ಕಾರ್ಮಿಕಳಾಗಿ ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ ಮಹಿಳೆಯನ್ನು ರಾತ್ರೋರಾತ್ರಿ ಎತ್ತಿಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ ದುರ್ಘಟನೆ ನಡೆದಿದೆ.

ಬೆಂಗಳೂರು (ಏ.04): ಕಲ್ಯಾಣ ಕರ್ನಾಟಕದಲ್ಲಿ ಕೂಲಿ ಸಿಗುತ್ತಿಲ್ಲವೆಂದು ಕೆಲಸವನ್ನರಸಿ ಕಟ್ಟ ನಿರ್ಮಾಣ ಕೆಲಸಕ್ಕೆ ಗಂಡ ಹಾಗೂ ಮೂವರು ಮಕ್ಕಳೊಂದಿಗೆ ಬಂದಿದ್ದ ಮಹಿಳೆಯನ್ನು ರಾತ್ರಿ ಎಳೆದೊಯ್ದು ಅತ್ಯಾಚಾರವೆಸಗಿ, ಬೆತ್ತಲೆಯಾಗಿಯೇ ಆಕೆಯನ್ನು ಕೊಲೆ ಮಾಡಿ ಬೀಸಾಡಿ ಹೋಗಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ದುರ್ಘಟನೆ ನಡೆದಿದೆ. ದುಷ್ಕರ್ಮಿ ಯುಕನೊಬ್ಬ ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರು ಮೂಲದ 55 ವರ್ಷದ ಮಹಿಳೆ ಕೊಲೆಯಾದ ದುರ್ದೈವಿ ಆಗಿದ್ದಾಳೆ. ಅಮೃತಹಳ್ಳಿಯ ಕಾಫಿ ಬೋರ್ಡ್ ಬಳಿ ಘಟನೆ ನಡೆದಿದೆ. ಗಾರೆ ಕೆಲಸ ಮಾಡುತ್ತಿದ್ದ ‌ಮಹಿಳೆಯನ್ನು ಯುವಕ ಎಳೆದೊಯ್ದ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸಾಮಾನ್ಯವಾಗಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಬರುವ ಕುಟುಂಬಗಳು ನಿರ್ಮಾಣ ಹಂತದ ಕಟ್ಟಡದಲ್ಲಿ ಅಥವಾ ಅದರ ಪಕ್ಕದಲ್ಲಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡು ವಾಸವಾಗಿರುತ್ತಾರೆ. ಹೀಗೆ, ನಿರ್ಮಾಣ ಹಂದ ಪಕ್ಕದಲ್ಲಿ ವಾಸವಿದ್ದ ಮಹಿಳೆ ರಾತ್ರಿ ವೇಳೆ ಹೊರಗೆ ಬಂದಾಗ ಆಕೆಯನ್ನು ಎಳೆದೊಯ್ದ ಯುವಕ ನಿರ್ಮಾಣ ಹಂತದ ಕಟ್ಟಡದೊಳಗೆ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಇನ್ನು ಮರು ದಿನ ಬೆಳಿಗ್ಗೆ ಕಟ್ಟಡದ ಮಾಲೀಕ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಪ್ರೇಮಿಗೆ ಹೇಳಿದಳು ಮದುವೆಯಾಗಲ್ಲ ಐ ಆ್ಯಮ್ ಸಾರಿ, ಅವಳೆದೆಗೆ ಚುಚ್ಚೇ ಬಿಟ್ಟ 16 ಬಾರಿ!

ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆ ಮೂಲತಃ ರಾಯಚೂರಿನ ದೇವದುರ್ಗದವರಾಗಿದ್ದಾರೆ. ಬೇಸಿಗೆಯ ಹಿನ್ನೆಲೆಯಲ್ಲಿ ಕೂಲಿ ಕೆಲಸ ಹುಡುಕಿ ಮೂವರು ಮಕ್ಕಳೊಂದಿಗೆ ಬೆಂಗಳೂರಿಗೆ ಬಂದಿದ್ದಳು. ಅಮೃತಹಳ್ಳಿಯ ವರದರಾಜು ಬಡಾವಣೆಯಲ್ಲಿ ವಾಸವಿದ್ದರು. ಮೊನ್ನೆ ರಾತ್ರಿ 7 ಗಂಟೆಗೆ ಮನೆಯಿಂದ ಹೊರಗೆ ಬಂದಿದ್ದ ವೇಳೆ ಮಹಿಳೆಯನ್ನ ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದಿದ್ದಾನೆ. ಬಳಿಕ ಅತ್ಯಾಚಾರವೆಸಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದನು. ಬೆಳಗ್ಗೆ ಕಟ್ಟಡ ನಿರ್ಮಾಣ ಕೆಲಸಗಾರರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಮೃತದೇಹ ಬೆತ್ತಲಾಗಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ತಕ್ಷಣವೇ ಕಟ್ಟಡ ಮಾಲೀಕ ಅಮೃತಹಳ್ಳಿ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ರಾತ್ರಿ ಆಟೋದಲ್ಲಿ ಯುವತಿ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ: 
ಕಳೆದ ಫೆಬ್ರವರಿ ತಿಂಗಳಲ್ಲಿ ಸಂಪಂಗಿರಾಮ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರ ಸಮೀಪ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಈ ಪ್ರಕರಣ ಭೇಧಿಸಿದ ಪೊಲೀಸರಿಗೆ ಆಟೋಗಾಗಿ ಕಾಯುತ್ತಿದ್ದ ಯುವತಿಯನ್ನು ಪಿಕ್ ಮಾಡಿದ್ದ ಆಟೋ ಚಾಲಕ ಆಕೆಯನ್ನು ನಿರ್ಮಾಣ ಹಂತದ ಕಟ್ಟದೊಳಗೆ ಎತ್ತಿಕೊಂಡು ಹೋಗಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. 

ಇನ್ನು ಯುವತಿ ಫೆ.18ರಂದು ಆಟೋಗೆ ಹತ್ತಿಕೊಂಡು ಹಣ ಕೊಡದೇ ಟ್ರಾಫಿಕ್ ಸಿಗ್ನಲ್‌ ಬಳಿ ಇಳಿದು ಓಡಿ ಹೋಗಿದ್ದಳು. ಪುನಃ ಈ ಯುವತಿ ಫೆ.19ರ ರಾತ್ರಿ ವೇಳೆ ಇದೇ ಆಟೋ ಚಾಲಕನ ಕೈಗೆ ಸಿಕ್ಕಿದ್ದಳು. ಆಗ ಆಟೋ ಚಾಲಕ ಈಕೆ ಆಟೋ ಚಾರ್ಜ್‌ ಕೊಡದೇ ವಂಚಿಸುತ್ತಾಳೆ ಎಂದು ಹೇಳಿ ಯಾರೊಬ್ಬರೂ ಹತ್ತಿಸಿಕೊಳ್ಳದಂತೆ ಮಾಡಿದ್ದಾನೆ. ತಡರಾತ್ರಿಯಾದ ನಂತರ ಆಕೆಯನ್ನುಯ ಆಟೋಗೆ ಹತ್ತಿಸಿಕೊಂಡು ಬೆಳಗ್ಗಿನ ಜಾವದವರೆಗೆ ಸುತ್ತಾಡಿಸಿ ಯುವತಿ ನಿದ್ದೆ ಮಾಡುತ್ತಿದ್ದಾಗ ಶಾಂತಿನಗರದ ಬಳಿ ನಿರ್ಮಾಣ ಹಂತದ ಕಟ್ಟಡದೊಳಗೆ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು.

ರಾಯಚೂರು: ಸೈಟ್​​​ ಖರೀದಿಸಲು ಹೋದ ಅಜ್ಜಿ ಮಿಸ್ಸಿಂಗ್​​, ಅವಳ ದುಡ್ಡೇ ಪ್ರಾಣ ತೆಗೆದಿತ್ತು..!

ಅತ್ಯಾಚಾರ ಘಟನೆಯ ವೇಳೆ ಯುವತಿ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಬಿಡದೇ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ಈ ಘಟನೆ ನಂತರ ಯುವತಿ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾಳೆ. ಆಗ ಭಯಗೊಂಡ ಆಟೋ ಚಾಲಕ ಮುಬಾರಕ್ ಆಕೆಯನ್ನು ಕಟ್ಟಡ ಮೇಲಂತಸ್ಥಿಗೆ ಕರೆದೊಯ್ದು ತಳ್ಳಿ ಕೊಲೆ ಮಾಡಿದ್ದಾನೆ. ನಂತರ, ತನಗೆ ಗೊತ್ತೇ ಇಲ್ಲದಂತೆ ಪರಾರಿ ಆಗಿದ್ದನು. ಆದರೆ, ಪೊಲೀಸರು ಮಾ.1ರಂದು ಆಟೋ ಚಾಲಕನನ್ನು ಹಿಡಿದು ವಿಚಾರಣೆ ಮಾಡಿದಾಗ ತಾನು ಅತ್ಯಾಚಾರವೆಸಗಿ ಮೇಲಿಂದ ತಳ್ಳಿ ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಸಂಪಂಗಿರಾಮನಗರ ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?