ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಸೆ.22) : ಅಬಕಾರಿ ಎಡವಟ್ಟಿಗೆ ಆರೋಪಿ ಕೆಲ ಕಾಲ ನರಕ ಅನುಭವಿಸಿದ ಘಟನೆ ವಿಜಯಪುರ ಅಬಕಾರಿ ಕಚೇರಿಯಲ್ಲಿ ನಡೆದಿದೆ. ಅಬಕಾರಿ ಪೊಲೀಸರ ಹುಂಬತನಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಆರೋಪಿಗಳನ್ನ ಬಂಧಿಸಿ ಕರೆತಂದಾಗ ಪೊಲೀಸರು ಮುಖಕ್ಕೆ ಕಪ್ಪು ಬಟ್ಟೆ ಹಾಕಿ ಮಾಧ್ಯಮಗಳ ಎದುರು ಪ್ರದರ್ಶಿಸುತ್ತಾರೆ. ಆರೋಪಿ ಮುಖ ಗುರುತು ಸಿಗದಿರಲಿ. ನ್ಯಾಯಾಲಯದಲ್ಲಿ ಆರೋಪಿ ಅಪರಾಧಿ ಹೌದೋ ಅಲ್ಲವೋ ಎನ್ನುವುದು ತೀರ್ಮಾನವಾಗುತ್ತೆ ಎನ್ನುವ ಕಾರಣಕ್ಕೆ. ಆದ್ರೆ ವಿಜಯಪುರ ಅಬಕಾರಿ ಪೊಲೀಸರು ಆರೋಪಿ ಜೊತೆಗೆ ನಡೆದುಕೊಂಡ ರೀತಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿ ಮುಖಕ್ಕೆ ಕಪ್ಪು ಬಟ್ಟೆ ಬದಲಿಗೆ. ಕಪ್ಪು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಕಿ ಎಡವಟ್ಟು ಮಾಡಿದ್ದಾರೆ.
ವಿಜಯಪುರ ಜಿಲ್ಲಾಸ್ಪತ್ರೆಗೆ ಕೇಂದ್ರದ ಪ್ರತಿಷ್ಟಿತ ಪ್ರಶಸ್ತಿ!
ಗಾಂಜಾ ಸಾಗಾಟ ಪ್ರಕರಣದಲ್ಲಿ ಆರೋಪಿ:
ಗಾಂಜಾ ಸಾಗಾಟT(marijuana supply) ಪ್ರಕರಣದಲ್ಲಿ ಇಂಡಿ(Indi) ತಾಲೂಕಿನ ಹಿರೆರೂಗಿ(Hirerugi) ನಿವಾಸಿ ಸೋಮನಿಂಗ್ ಗುಡಿ(Somaninga gudi)ಯನ್ನ ಬಂಧಿಸಲಾಗಿತ್ತು. ರೂಗಿ-ಅಥರ್ಗಾ ಮಾರ್ಗದಲ್ಲಿ ಪೀರಾಪೂರ ದರ್ಗಾ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಆತನನ್ನ ಬಂಧಿಸಿದ್ದರು. ಆತನಿಂದ 40 ಸಾವಿರ ಮೌಲ್ಯದ 950 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದರು. ಇದೆ ಆರೋಪಿಗೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್(plastic carrybag) ಮುಖಕ್ಕೆ ಹಾಕಿ ಎಡವಟ್ಟು ಮಾಡಿದ್ದಾರೆ ಅಬಕಾರಿ ಅಧಿಕಾರಿಗಳು..
ಮಾರ್ಕೆಟ್‌ನಲ್ಲಿ ಸಿಗುವ 1 ರೂ ಕ್ಯಾರಿಬ್ಯಾಗ್ ಬಳಕೆ!
ಕಪ್ಪು ಬಟ್ಟೆ ಬದಲಿಗೆ ಮಾರ್ಕೆಟ್ ನಲ್ಲಿ ಕೇವಲ 1 ರೂಪಾಯಿಗೆ ಸಿಗುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಬಳಕೆ ಮಾಡಲಾಗಿದೆ. ಆರೋಪಿಯನ್ನ ಪ್ಲಾಸ್ಟಿಕ್ ಕಪ್ಪು ಕ್ಯಾರಿಬ್ಯಾಗ್ ಹಾಕಿಯೇ ಕೂರಿಸಿ ಪೋಟೋ ತೆಗೆದು ಮಾಧ್ಯಮಗಳಿಗೆ ರವಾನಿಸಲಾಗಿದೆ. ಬಳಿಕ ಮುಖಕ್ಕೆ ಹಾಕಿದ್ದು ಕಪ್ಪು ಬಟ್ಟೆ ಅಲ್ಲ, ಕಟ್ಟು ಪ್ಲಾಸ್ಟಿಕ್ ಅನ್ನೋದು ಬಯಲಾಗಿದೆ.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ಆರೋಪಿ ನರಳಾಟ:
ಇತ್ತ ಮುಖಕ್ಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಕಿದ್ದರಿಂದ ಆರೋಪಿ ಸೋಮನಿಂಗ್ ಕೆಲಕಾಲ ನರಕ ಯಾತನೆ ಅನುಭವಿಸುವಂತಾಯ್ತು. ಕಪ್ಪು ಪ್ಲಾಸ್ಟಿಕ್ ಕ್ಯಾರಿಬ್ಯಾಕ್ ಮುಖಕ್ಕೆ ಹಾಕಿದ್ದರಿಂದ ಆರೋಪಿ ಉಸಿರಾಡಲು ಪರದಾಡಿದ್ದಾನೆ. ಜೊತೆಗೆ ಅತಿವ ಆಕ್ಸಿಜನ್, ಗಾಳಿಯ ಕೊರತೆಯಿಂದ ಕೆಲಕಾಲ ಹಿಂಸೆ ಅನುಭವಿಸುವಂತಾಗಿದೆ.
ವಿಜಯಪುರದಲ್ಲಿ ಕಸ ನಿರ್ವಹಣೆಗೆ ಮಹಿಳೆಯರ ಸಾರಥ್ಯ!
ಪೋಟೋದಲ್ಲಿ ಹಿರಿಯ ಅಬಕಾರಿ ಅಧಿಕಾರಿಗಳು:
ಆರೋಪಿ ಮುಖಕ್ಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಹಾಕಿ ಎಡವಟ್ಟು ಸಿಬ್ಬಂದಿ ಮಾಡಿದ ಎಡವಟ್ಟನ್ನ ಅಲ್ಲೆ ಇದ್ದ ಹಿರಿಯ ಅಬಕಾರಿ ಪೊಲೀಸರು ಪ್ರಶ್ನಿಸಿಲ್ಲ. ಅಲ್ಲೆ ಇದ್ದ ಅಬಕಾರಿ ನಿರೀಕ್ಷಿಕ ಮಂಜುನಾಥ ಶಿರಹಟ್ಟಿ ಕ್ಯಾರಿಬ್ಯಾಗ್ ಬಳಕೆ ಮಾಡದಂತೆ ಸೂಚನೆಯನ್ನು ನೀಡಿಲ್ಲ. ಬದಲಿಗೆ ತಾವು ಆರೋಪಿ, ಸಿಬ್ಬಂದಿ ಜೊತೆಗೆ ನಿಂತು ಪೋಸ್ ನೀಡಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.