Chikkaballapur: ಕಳ್ಳನ ಜತೆ ಬಂದ ಪೊಲೀಸರ ಕೂಡಿ ಹಾಕಿದ ಚಿನ್ನದಂಗಡಿ ಮಾಲೀಕರು!

By Govindaraj SFirst Published Sep 22, 2022, 3:23 AM IST
Highlights

ಕಳವು ಮಾಡಿ ಮಾರಿದ್ದ ಚಿನ್ನದ ವಸೂಲಾತಿಗೆ ಆಗಮಿಸಿದ್ದ ಚೆನ್ನೈ ಪೊಲೀಸರನ್ನು ಹಾಗೂ ಕಳ್ಳನನ್ನು ಕೆಲಕಾಲ ಸ್ಥಳೀಯ ಚಿನ್ನದಂಗಡಿ ಮಾಲೀಕರು ಕೂಡಿ ಹಾಕಿರುವ ಪ್ರಸಂಗ ಬುಧವಾರ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ. 

ಚಿಕ್ಕಬಳ್ಳಾಪುರ (ಸೆ.22): ಕಳವು ಮಾಡಿ ಮಾರಿದ್ದ ಚಿನ್ನದ ವಸೂಲಾತಿಗೆ ಆಗಮಿಸಿದ್ದ ಚೆನ್ನೈ ಪೊಲೀಸರನ್ನು ಹಾಗೂ ಕಳ್ಳನನ್ನು ಕೆಲಕಾಲ ಸ್ಥಳೀಯ ಚಿನ್ನದಂಗಡಿ ಮಾಲೀಕರು ಕೂಡಿ ಹಾಕಿರುವ ಪ್ರಸಂಗ ಬುಧವಾರ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ. ಬೆಂಗಳೂರು, ಚೆನ್ನೈ ಮತ್ತಿತರ ಕಡೆ ಮನೆಗಳಲ್ಲಿ ಕಳವು ಮಾಡಿ 580 ಕ್ಕೂ ಹೆಚ್ಚು ಗ್ರಾಂ ಚಿನ್ನಾಭರಣವನ್ನು ಆಂಧ್ರದ ಹಿಂದೂಪುರದ ನಿವಾಸಿ ಮಹಮದ್‌ ಖಾನ್‌ ಎಂಬಾತ ಚಿಕ್ಕಬಳ್ಳಾಪುರದ ಚಿನ್ನದಂಗಡಿ ಮಾಲೀಕ ಆತುಲ್‌ ಆಲಿಯಾಸ್‌ ಸೂರ್ಯವಂಶಿ ಎಂಬುವರಿಗೆ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ಚೆನ್ನೈ ಪೊಲೀಸರಿಗೆ ಬಾಯಿಬಿಟ್ಟಿದ್ದ, ತನಿಖೆಗೆ ಬಂದಾಗ ಪೊಲೀಸರನ್ನೆ ಕೂಡಿಹಾಕಿದರು.

ಕಳ್ಳ ಮಹಮದ್‌ ಖಾನ್‌ನ್ನನ್ನು ಚೆನ್ನೈ ಪೊಲೀಸರು ನಿನ್ನೆ ಚಿಕ್ಕಬಳ್ಳಾಪುರಕ್ಕೆ ಕರೆ ತಂದು ತಾನು ಮಾರಾಟ ಮಾಡಿದ್ದ ಅಂಗಡಿ ಬಳಿ ತೆರಳಿದ್ದಾರೆ. ಆದರೆ ಚಿನ್ನ ಖರೀದಿಸಿದ್ದ ಸೂರ್ಯವಂಶಿ ಎರಡು ತಿಂಗಳ ಹಿಂದೆಯೆ ಅಂಗಡಿ ಬಿಟ್ಟು ಪರಾರಿ ಆಗಿದ್ದು, ಈ ವೇಳೆ ಸೂರ್ಯವಂಶಿ ಮಾವ ಶ್ರೀನಿವಾಸ್‌ ಎಂಬುವರ ಅಂಗಡಿ ಬಳಿ ತೆರಳಿ ಚೆನ್ನೈ ಪೊಲೀಸರು ಚಿನ್ನಾಭರಣ ವಸೂಲಿಗೆ ಇಳಿದಾಗ ಸ್ಥಳೀಯ ಚಿನ್ನದಂಗಡಿಯ ವರ್ತಕರೆಲ್ಲಾ ಸೇರಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸ್ಥಳೀಯ ವರ್ತಕರು ತಮ್ಮ ಗುರುತಿನ ಚೀಟಿ ತೋರಿಸುವಂತೆ ಕೇಳಿದಾಗ ಚೆನ್ನೈ ಪೊಲೀಸರು ತೋರಿಸಿಲ್ಲ. ಬಂದಿದ್ದ ಕಾರಿಗೂ ನಂಬರ್‌ ಪ್ಲೇಟ್‌ ಇರಲಿಲ್ಲ. ಹೀಗಾಗಿ ಸ್ಥಳೀಯ ಚಿನ್ನದಂಗಡಿ ವರ್ತಕರು ಕಳ್ಳನ ಜೊತೆಗೆ ಬಂದಿದ್ದ ಚೆನ್ನೈ ಪೊಲೀಸರನ್ನು ಕೂಡಿ ಹಾಕಿದ್ದಾರೆ. ಈ ವೇಳೆ ಪೊಲೀಸರು ಬಂದಿದ್ದ ಕಾರ್‌ ಗಾಳಿ ಸಹ ಬಿಚ್ಚಿದ್ದಾರೆ. ಈ ವಿಚಾರ ನಗರದ ಇತರೇ ಚಿನ್ನದಂಗಡಿ ವರ್ತಕರಿಗೆ ತಿಳಿದು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರೇಯಸಿಯನ್ನ ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ: 4 ವರ್ಷದ ಪ್ರೀತಿ ಜಗಳದಲ್ಲಿ ಅಂತ್ಯ?

ನಗರ ಠಾಣೆ ಪೊಲೀಸರ ಪ್ರವೇಶ: ವಿಷಯ ತಿಳಿದು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಕಳ್ಳನ ಜೊತೆ ಚೆನ್ನೈ ಪೊಲೀಸರು ಆಗಮಿಸಿರುವುದು ಸ್ಪಷ್ಟವಾಗಿದೆ. ವಿವಿಧ ಕಳವು ಪ್ರಕರಣಗಳಲ್ಲಿ ಬಂಧಿತನಾಗಿದ್ದ ಮಹಮ್ಮದ್‌ ಖಾನ್‌ ಹಾಲಿ ಬೆಂಗಳೂರಿನಲ್ಲಿ ವಾಸ ಇದ್ದು ಚೆನ್ನೈ, ಬೆಂಗಳೂರು ಮತ್ತಿತರ ಕಡೆ ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಕಳವು ಮಾಡಿದ್ದ ಅಪಾರ ಪ್ರಮಾಣದ ಚಿನ್ನವನ್ನು ಚಿಕ್ಕಬಳ್ಳಾಪುರಕ್ಕೆ ಬಂದು ಪರಿಚಯ ಇದ್ದ ವಿನಯ್‌ ಮೂಲಕ ಚಿನ್ನದಂಗಡಿ ಮಾಲೀಕ ಸೂರ್ಯವಂಶಿಗೆ ಮಾರಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಚೆನ್ನೈನಿಂದ ಮಹಿಳಾ ಸಿಪಿಐ ವೀರಮಣಿ ಹಾಗೂ ಪಿಎಸ್‌ಐ ಸೆಲ್ವಕುಮಾರ್‌ ಹಾಗೂ ಸಿಬ್ಬಂದಿ ಆಗಮಿಸಿ ವಿಚಾರಿಸಿದಾಗ ಸ್ಥಳೀಯ ಚಿನ್ನದಂಗಡಿ ವರ್ತಕರು ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಗೊಂದಲ, ಗದ್ದಲ್ಲಕ್ಕೆ ನಗರದ ಗಂಗಮ್ಮ ಗುಡಿ ರಸ್ತೆ ಸಾಕ್ಷಿಯಾಯಿತು.

ಇಬ್ಬರು ಕಳ್ಳರ ಸೆರೆ: ತಾಲೂಕಿನ ಮುತ್ತಿನಕೊಪ್ಪದ ಮನೆಯೊಂದರಲ್ಲಿ ಫೆಬ್ರವರಿ 6ರಂದು ಕಳ್ಳತನ ನಡೆಸಿದ್ದ ಭದ್ರಾವತಿಯ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 6ರಂದು ಮುತ್ತಿನಕೊಪ್ಪದ ಮೊಹಮದ್‌ ಶಫಿವುಲ್ಲಾ ಎಂಬವರ ಮನೆಯಲ್ಲಿ ಕಳ್ಳರು ಮನೆಯ ಬೀಗ ಮುರಿದು ಕಳ್ಳವು ಕೃತ್ಯ ನಡೆಸಿದ್ದರು. ಪೊಲೀಸರು ತನಿಖೆ ಮಾಡಿ ಭದ್ರಾವತಿ ತಾಲೂಕಿನ ಅಶೋಕ ನಗರದ ಎಡೆಹಳ್ಳಿ ಗ್ರಾಮದ ಬುಡೇನ್‌ ಸಾಬ್‌ ಹಾಗೂ ಅದೇ ಊರಿನ ಉಮೇಶ ಎಂಬ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 

Belagavi: ನರ್ಸ್ ವೇಷದಲ್ಲಿ ಬಂದು ಮಗು ಅಪಹರಿಸಿದ್ದ ಚಾಲಾಕಿ ಕಳ್ಳಿಯ ಬಂಧನ

ಆರೋಪಿಗಳಿಂದ ಮನೆ ಕಳ್ಳತನ ಮಾಡಿದ್ದ .65 ಸಾವಿರ ಬೆಲೆ ಬಾಳುವ ಚಿನ್ನಾಭರಣ, ಕಳ್ಳತನಕ್ಕೆ ಬಳಸಿದ್ದ 25 ಸಾವಿರ ಸಾವಿರ ರು. ಬೆಲೆ ಬಾಳುವ ಬೈಕ್‌, ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ. ವೃತ್ತ ನಿರೀಕ್ಷಿಕ ವಸಂತ ಭಾಗವತ್‌ ಮಾರ್ಗದರ್ಶನದಲ್ಲಿ ಪೊಲೀಸ್‌ ಠಾಣಾಧಿಕಾರಿ ದಿಲೀಪ್‌ಕುಮಾರ್‌, ಕ್ರೈಂ ಸಬ್‌ ಇನ್‌ಸ್ಪೆಕ್ಟರ್‌ ಗುರು ಎ. ಸಜ್ಜನ್‌ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಕೆ.ಜೆ.ಶಂಕರ್‌, ಎಸ್‌.ಜಿ.ಮಧು ಹಾಗೂ ಚೇತನ್‌ ಪಾಲ್ಗೊಂಡಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

click me!