* ಎರಡು ದಿನದಿಂದ ನಾಪತ್ತೆಯಾಗಿದ್ದ ಮಗಳಿಗಾಗಿ ತಂದೆಯ ಹುಡುಕಾಟ
* ಎರಡು ದಿನಗಳ ಬಳಿಕ ನೆರೆಮನೆಯಲ್ಲಿ ಶವ ಪತ್ತೆ
* ಬಟ್ಟೆಗಳ ಮಧ್ಯೆ ಬಟ್ಟೆ ನಡುವೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಹಾಪುರ್(ಡಿ.05): ಉತ್ತರ ಪ್ರದೇಶದ ಹಾಪುರ್ (Hapur Crime) ಜಿಲ್ಲೆಯಲ್ಲಿ ಎರಡು ದಿನಗಳಿಂದ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿಯ ಮೃತದೇಹ (Deadbody) ನೆರೆಮನೆಯಲ್ಲಿದ್ದ ಪೆಟ್ಟಿಗೆಯೊಂದರಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆಯೇ ಆಕ್ರೋಶಗೊಂಡ ಗುಂಪು ಆರೋಪಿ ಯುವಕನ ಮೇಲೆ ಹಲ್ಲೆ ನಡೆಸಿದೆ. ಆದರೆ, ಪೊಲೀಸರು ಮಧ್ಯಪ್ರವೇಶಿಸಿ ಬಹಳ ಕಷ್ಟಪಟ್ಟು ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಬೇರೆಡೆ ರವಾನಿಸಿದ್ದಾರೆ. ಪೊಲೀಸರು ಆರೋಪಿಯ ಮನೆಯ ಬೀಗ ಒಡೆದು ಅಲ್ಲಿಂದ ಟ್ರಂಕ್‌ನಲ್ಲಿ ಹಾಕಲಾಗಿದ್ದ ಬಾಲಕಿಯ ಶವವನ್ನು ಹೊರತೆಗೆದಿದ್ದಾರೆ.
ಅತ್ಯಾಚಾರದ (Rape) ಸಾಧ್ಯತೆ ಬಗ್ಗೆ ಉತ್ತರಿಸಿದ ಹಾಪುರ್ ಪೊಲೀಸ್ ಎಸ್ಪಿ ಸರ್ವೇಶ್ ಕುಮಾರ್ ಮಿಶ್ರಾ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವೇ ಇದನ್ನು ಹೇಳಬಹುದು ಎಂದು ಹೇಳಿದ್ದಾರೆ. ಹಾಪುರ್ ಎಸ್ಪಿ ಮಾತನಾಡಿ, ಹುಡುಗಿ ಕಾಣೆಯಾಗಿದ್ದಾಳೆ ಎಂದು ನಿನ್ನೆ ದೂರು ಬಂದಿತ್ತು. ಆದರೆ ಶನಿವಾರ ಬೆಳಿಗ್ಗೆ, ನೆರೆಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ. ಆದರೆ ಬಾಗಿಲಿಗೆ ಬೀಗ ಹಾಕಲಾಗಿದೆ ಎಂದು ಅಕ್ಕಪಕ್ಕದ ಜನರು ದೂರಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಬೀಗ ಒಡೆದಿದ್ದಾರೆ. ಮನೆಗೆ ನುಗ್ಗಿ ಹುಡುಕಾಡಿದಾಗ ಬಾಲಕಿಯ ಶವ ಪೆಟ್ಟಿಗೆಯೊಳಗೆ ಇರಿಸಿ ಬೀಗ ಹಾಕಿರುವುದು ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
undefined
ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ (Postmortem ಕಳುಹಿಸಿದ್ದಾರೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ಬಳಿಕ ಮನೆಯ ಮಾಲೀಕರನ್ನು ವಶಕ್ಕೆ ಪಡೆಯಲಾಗಿದೆ. ಇದರ ಬೆನ್ನಲ್ಲೇ ಆ ಪ್ರದೇಶದಲ್ಲಿ ಕೋಪಗೊಂಡ ಜನಸಮೂಹ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಾಗ ಥಳಿಸಿರುವುದೂ ತಿಳಿದು ಬಂದಿದೆ. ಮತ್ತೊಂದು ವೀಡಿಯೊದಲ್ಲಿ ಹುಡುಗಿಯ ದೇಹವು ದೊಡ್ಡ ಪೆಟ್ಟಿಗೆಯಲ್ಲಿ ಬಟ್ಟೆಗಳ ನಡುವೆ ಅಡಗಿಸಿಟ್ಟಿರುವುದನ್ನು ತೋರಿಸಲಾಗಿದೆ. ಅದನ್ನು ಪೊಲೀಸರು ಬಳಿಕ ಡಿಲೀಟ್ ಮಾಡಿಸಿದ್ದಾರೆ.
ಗುರುವಾರ ಸಂಜೆ ತನ್ನ ಮಗಳನ್ನು ಕೊನೆಯ ಬಾರಿಗೆ ನೋಡಿದ್ದು ಎಂದು ಹುಡುಗಿಯ ತಂದೆ ಹೇಳಿದ್ದಾರೆ. ತನ್ನ ಮಗಳು ತನ್ನಿಂದ ಐದು ರೂಪಾಯಿ ತೆಗೆದುಕೊಂಡು ಮನೆಯಿಂದ ಹೊರಬಂದಿದ್ದಳು, ಇದಾದ ನಂತರ ಅವಳ ಬಗ್ಗೆ ಏನೂ ತಿಳಿದಿಲ್ಲ ಎಂದಿದ್ದಾರೆ. ಕುಟುಂಬಸ್ಥರು ರಾತ್ರಿಯಿಡೀ ಬಾಲಕಿಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಮರುದಿನ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆದರೆ, ಆ ಪ್ರದೇಶದ ಸಿಸಿಟಿವಿಯಿಂದ (ಸಿಸಿಟಿವಿ) ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಯುವಕ ಹುಡುಗಿಯನ್ನು ತನ್ನೊಂದಿಗೆ ಕರೆದೊಯ್ದಿರುವುದು ಕಂಡುಬಂದಿದೆ. ಮೊದಲು ಯುವಕ ಯುವತಿಯನ್ನು ಮೋಟಾರ್ ಬೈಕ್ ನಲ್ಲಿ ಕರೆದುಕೊಂಡು ಹೋಗಿ ನಂತರ ಮನೆಯ ಕಡೆಗೆ ಕರೆದುಕೊಂಡು ಹೋಗಿರುವುದು ಕಂಡು ಬಂದಿದೆ.