ನಾನು ಸತ್ತ ಮೇಲಾದ್ರೂ ಕಾಮ ಪಿಶಾಚಿಗಳನ್ನು ಶಿಕ್ಷಿಸಿ ಎಂದು ಡೆತ್‌ನೋಟ್‌ ಬರೆದು ಆತ್ಮಹತ್ಯೆ ಮಾಡ್ಕೊಂಡ ವಿದ್ಯಾರ್ಥಿನಿ

Published : Mar 21, 2023, 06:34 PM ISTUpdated : Mar 21, 2023, 06:37 PM IST
ನಾನು ಸತ್ತ ಮೇಲಾದ್ರೂ ಕಾಮ ಪಿಶಾಚಿಗಳನ್ನು ಶಿಕ್ಷಿಸಿ ಎಂದು ಡೆತ್‌ನೋಟ್‌ ಬರೆದು ಆತ್ಮಹತ್ಯೆ ಮಾಡ್ಕೊಂಡ ವಿದ್ಯಾರ್ಥಿನಿ

ಸಾರಾಂಶ

ಈ ಸೂಸೈಡ್‌ ನೋಟ್‌ನಲ್ಲಿ ಆರೋಪಿಗಳೆನ್ನಲಾದ ನಾಲ್ವರು ಪುರುಷರ ಹೆಸರುಗಳು ಸಹ ಇದ್ದು, ಅವರು ತನ್ನನ್ನು ಕೊಲ್ಲಲು ಪ್ರಯತ್ನಿಸಿದರು ಮತ್ತು ಅವರ ಕಿರುಕುಳಕ್ಕೆ ಹೆದರಿ ತನ್ನ ಶಾಲೆಯನ್ನು ಬಿಡಬೇಕಾಯಿತು ಎಂದೂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾಳೆ.

ಲಖನೌ (ಮಾರ್ಚ್‌ 21, 2023): ಉತ್ತರ ಪ್ರದೇಶದಲ್ಲಿ ಬಾಲಕಿಯೊಬ್ಬಳ ಮೇಲೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಬೇಸತ್ತ ಹದಿಹರೆಯದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಈ ಪ್ರಕರಣದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಲಾಗಿದೆ.  12 ನೇ ತರಗತಿ ಓದುತ್ತಿದ್ದ 17 ವರ್ಷದ ಯುವತಿ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಆಕೆ ಡೆತ್‌ ನೋಟ್‌ ಅನ್ನೂ ಬರೆದು ಸೂಸೈಡ್‌ ಮಾಡಿಕೊಂಡಿದ್ದಾಳೆ ಎಂದೂ ತಿಳಿದುಬಂದಿದೆ. ತನ್ನ ಮನೆಯ ಸಮೀಪದಲ್ಲಿ ವಾಸಿಸುತ್ತಿದ್ದ ಕಿರುಕುಳ ನೀಡುವವರಿಗೆ ತಕ್ಕ ಶಿಕ್ಷೆಯಾಗುವಂತೆ ಆಶಿಸಿ ತಾನು ಈ ಕ್ರಮ ಕೈಗೊಳ್ಳುತ್ತಿದ್ದೇನೆ ಮತ್ತು ಹಿಂದಿನ ಸಂದರ್ಭಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಮೊರಾದಾಬಾದ್‌ನ ಸ್ಥಳೀಯ ಪೊಲೀಸರನ್ನು ಮೃತ ವಿದ್ಯಾರ್ಥಿನಿ ತನ್ನ 2 ಪುಟಗಳ ಸೂಸೈಡ್ ನೋಟ್‌ನಲ್ಲಿ ದೂಷಿಸಿದ್ದಾಳೆ. 

ಅಲ್ಲದೆ, ಆರೋಪಿಗಳು ಶ್ರೀಮಂತರಾಗಿರುವ ಕಾರಣ ತನ್ನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ಮೃತ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ಸೂಸೈಡ್‌ ನೋಟ್‌ನಲ್ಲಿ ಆರೋಪಿಗಳೆನ್ನಲಾದ ನಾಲ್ವರು ಪುರುಷರ ಹೆಸರುಗಳು ಸಹ ಇದ್ದು, ಅವರು ತನ್ನನ್ನು ಕೊಲ್ಲಲು ಪ್ರಯತ್ನಿಸಿದರು ಮತ್ತು ಅವರ ಕಿರುಕುಳಕ್ಕೆ ಹೆದರಿ ತನ್ನ ಶಾಲೆಯನ್ನು ಬಿಡಬೇಕಾಯಿತು ಎಂದೂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾಳೆ. ಇನ್ನು, ವಿದ್ಯಾರ್ಥಿನಿಯ ಸಾವಿನ ಬಳಿಕ ಎಚ್ಚೆತ್ತುಕೊಂಡ ಮೊರಾದಾಬಾದ್‌ ಪೊಲೀಸರು, ಇಬ್ಬರು ಆರೋಪಿಗಳಾದ ವಿಕೇಶ್ ಮತ್ತು ಅಮೃತ್ ಅವರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇದನ್ನು ಓದಿ: ಎಕ್ಸಾಂನಲ್ಲಿ ಕಡಿಮೆ ಮಾರ್ಕ್ಸ್‌ ಭಯ: ಮನೇಲಿ ಬೈತಾರೆಂದು ಲೈಂಗಿಕ ಕಿರುಕುಳದ ಕತೆ ಕಟ್ಟಿದ ಬಾಲಕಿ..!

ಇತ್ತೀಚಿನ ಘಟನೆಯಲ್ಲಿ, ಮೊರಾದಾಬಾದ್ ಬಳಿಯ ಗ್ರಾಮವೊಂದರಲ್ಲಿ ದುಷ್ಕರ್ಮಿಗಳು ಮನೆಗೆ ನುಸುಳಿ ಛಾವಣಿಯಿಲ್ಲದ ಬಾತ್‌ರೂಂನೊಳಗೆ ಸ್ನಾನ ಮಾಡುತ್ತಿದ್ದ ಹುಡುಗಿಯ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ. ಹಾಗೂ, ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ತನ್ನನ್ನು ಪ್ರತಿದಿನವೂ ಅವಮಾನಿಸುವಂತೆ ಮಾಡುವ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕಿ ತನ್ನ ಆತ್ಮಹತ್ಯೆ ಪತ್ರದಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾಳೆ.

“ನಾನು ಬಡ ಕುಟುಂಬಕ್ಕೆ ಸೇರಿದವನಾಗಿದ್ದೇನೆ ಮತ್ತು ಯಾರೂ ನಮ್ಮ ದೂರುಗಳಿಗೆ ಗಮನ ಕೊಡಲಿಲ್ಲ. ಆರೋಪಿಗಳು ಸ್ಥಳೀಯ ಪೊಲೀಸರಿಗೆ ಲಂಚ ನೀಡಿ ಆರೋಪದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಬದುಕಿರುವಾಗ ಅವರನ್ನು ಶಿಕ್ಷಿಸಲು ನನಗೆ ಸಾಧ್ಯವಾಗುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಆದರೆ ನನ್ನ ಸಾವಿನ ನಂತರವಾಗಲೂ ಅವರನ್ನು ಬಂಧಿಸಲಾಗುವುದು ಎಂದು ನಾನು ಭಾವಿಸುತ್ತೇನೆ. ಈ ಜನ ನನ್ನ ಕನಸನ್ನು ನನಸಾಗಿಸಲು ಬಿಡಲಿಲ್ಲ. ಇನ್ನು ಅವರನ್ನು ಎದುರಿಸುವ ಧೈರ್ಯ ನನಗಿಲ್ಲ. ಆದರೆ, ನನ್ನ ಕುಟುಂಬಕ್ಕೆ ತೊಂದರೆಯಾಗಬಾರದು. ಸರ್ (ಅಧಿಕಾರಿಗಳು), ದಯವಿಟ್ಟು ಈಗಲಾದ್ರೂ ಕೇಳುತ್ತೀರಾ? ನನ್ನ ಸಾವಿನ ನಂತರ ಪುರುಷರನ್ನು ಶಿಕ್ಷಿಸಿ...ಇದರಿಂದ ಬಡ ಹೆಣ್ಣುಮಕ್ಕಳು ಬದುಕಬಹುದು ಮತ್ತು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಬಹುದು” ಎಂದೂ 12ನೇ ತರಗತಿ ವಿದ್ಯಾರ್ಥಿನಿ ಸೂಸೈಡ್‌ ನೋಟ್‌ನಲ್ಲಿ ಬರೆದಿದ್ದಾಳೆ.

ಇದನ್ನೂ ಓದಿ: Lalbaug murder case: ಕ್ರೈಮ್ ಶೋ ನೋಡಿ ತಾಯಿಯ ಮೃತದೇಹ ತುಂಡು ತುಂಡಾಗಿ ಕತ್ತರಿಸಿದ ಮಗಳು..!

ಅಲ್ಲದೆ, ಬಾಲಕಿ ತಾನು ಅನುಭವಿಸಬೇಕಾಗಿದ್ದ ಸಂಕಟ ಮತ್ತು ಒತ್ತಡದ ಕ್ಷಣಗಳನ್ನು ವಿವರಿಸಿದ್ದು ಹೀಗೆ.. ‘’ಅವರು ನನಗೆ ಬೆದರಿಕೆ ಹಾಕುತ್ತಿದ್ದರು ಮತ್ತು ನನ್ನ ಹೆತ್ತವರನ್ನು ಕೊಲ್ಲುವುದಾಗಿ ಹೇಳುತ್ತಿದ್ದರು. ಅವರು ಟೆರೇಸ್ ಮೇಲೆ ಹತ್ತಿ ನನ್ನನ್ನು ಚಾಕುವಿನಿಂದ ಹೆದರಿಸುತ್ತಿದ್ದರು. ನನ್ನ ಹೆತ್ತವರಿಗೆ ಗೊತ್ತಾದಾಗ, ಅವರು ಪೊಲೀಸರಿಗೆ ದೂರು ನೀಡಿದರು. ಆದರೆ ಯಾರೂ ಏನೂ ಮಾಡಲಿಲ್ಲ’’ ಎಂದು ಪತ್ರದಲ್ಲಿ ಬರೆಯಲಾಗಿದೆ. ಭಾನುವಾರ ಮಧ್ಯಾಹ್ನ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ವಿಷ ಸೇವಿಸಿದ್ದು, ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಇದನ್ನೂ ಓದಿ:  ರಸ್ತೆ ಮಧ್ಯದಲ್ಲೇ ಮಹಿಳೆಗೆ ಥಳಿತ; ಬಲವಂತವಾಗಿ ಕ್ಯಾಬ್‌ನೊಳಗೆ ತಳ್ಳಿದ ಕಿರಾತಕ..! ವಿಡಿಯೋದಲ್ಲಿ ಸೆರೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?