ಲೋಕಾಯುಕ್ತ ದಾಳಿ: 40 ಸಾವಿರ ಲಂಚ ಪಡೆವಾಗ ಸಿಕ್ಕಿಬಿದ್ದ ರಾಣೆಬೆನ್ನೂರು ಪಿಎಸ್‌ಐ

By Sathish Kumar KH  |  First Published Mar 21, 2023, 6:28 PM IST

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರ ಪೊಲೀಸ್ ಠಾಣೆ ಪಿಎಸ್ಐ ಸುನೀಲ ತೇಲಿ ಹಾಗೂ ಅವರ ಕಾರು ಚಾಲಕ ಸಚಿನ್‌ ಅವರು 40 ಸಾವಿರ ರೂ. ಹಣವನ್ನು ಪಡೆಯುವಾಗ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


ಹಾವೇರಿ (ಮಾ.21): ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರ ಪೊಲೀಸ್ ಠಾಣೆ ಪಿಎಸ್ಐ ಸುನೀಲ ತೇಲಿ ಹಾಗೂ ಅವರ ಕಾರು ಚಾಲಕ ಸಚಿನ್‌ ಅವರು 40 ಸಾವಿರ ರೂ. ಹಣವನ್ನು ಪಡೆಯುವಾಗ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ರಾಜ್ಯದೆಲ್ಲೆಡೆ ಲಂಚಾವತಾರ ತಡೆಗೆ ಕಾರ್ಯಾಚರಣೆ ಮಾಡುತ್ತಿರುವ ಲೋಕಾಯುಕ್ತ ಪೊಲೀಸರ ಪಡೆ, ಇಂದು ಬೆಳಗ್ಗೆ ರಾಣೆಬೆನ್ನೂರು ನಗರ ಪೊಲೀಸ್‌ ಠಾಣೆಯ ಪೊಲಿಸ್‌ ಸಬ್‌ ಇನ್ಸ್‌ಪೆಕ್ಟರ್‌ 40 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಮಯದಲ್ಲಿ ರೆಡ್‌ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ರಾಣೆಬೆನ್ನೂರು ಶಹರ ಠಾಣೆ ಪಿಎಸ್ಐ ಸುನೀಲ ತೇಲಿ ಮತ್ತು ಇವರ ವಾಹನದ ಚಾಲಕ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿಗಳು ಆಗಿದ್ದಾರೆ. ಹಾವೇರಿ ಲೋಕಾಯುಕ್ತ ಅಧಿಕಾರಿಗಳಿಂದ ಪೊಲೀಸರು ಲಂಚ ಪಡೆಯುತ್ತಿದ್ದ ಮಾಹಿತಿ ಮೇರೆಗೆ ದಾಳಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

Tap to resize

Latest Videos

undefined

ನಟ ಚೇತನ್ 14 ದಿನ ನ್ಯಾಯಾಂಗ ಬಂಧನ: ಹಿಂದುತ್ವ ವಿರೋಧಿ ಪೋಸ್ಟ್‌ಗೆ ಜೈಲೂಟ ಫಿಕ್ಸ್‌

ಲಂಚ ಪಡೆಯಲು ಕಾರಣವೇನು.?: ಇನ್ನು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್ ಸುನೀಲ್ ತೇಲಿ ಅವರು, ರಾಣೆಬೆನ್ನೂರು ನಗರದ ಫಿರೋಜ್ ಎಂಬುವವರಿಗೆ ಮನೆ ಬಾಡಿಗೆ ವಸೂಲಿ‌ ಮಾಡಿಸಿಕೊಡುವ ವಿಚಾರಕ್ಕೆ 50ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಆದರೆ, ಇಷ್ಟು ದುಡ್ಡು ಕೊಡಲು ಆಗುವುದಿಲ್ಲ, ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದರು. ಆಗ ಲಂಚದ ಹಣವನ್ನು ಕಡಿಮೆ ಮಾಡಲಾಗಿತ್ತು. ನಂತರ ಒಪ್ಪಂದದಂತೆ ಪಿಎಸ್‌ಐ ಹಾಗೂ ಅವರ ಕಾರಿನ ಚಾಲಕ 40 ಸಾವಿರ ರೂ.‌ ಪಡೆಯುತ್ತಿದ್ದ ಸಮಯದಲ್ಲಿ ಆರೋಪಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತಕ್ಕೆ ಪರಮಾಧಿಕಾರ ಇದೆ: ಮೈಸೂರು :  ಲೋಕಾಯುಕ್ತಕ್ಕೆ ಈಗಲೂ ಪರಮಾಧಿಕಾರ ಇದೆ. ಅದರ ಜವಾಬ್ದಾರಿ ವಹಿಸಿಕೊಳ್ಳುವವರು ತಮ್ಮ ಅಧಿಕಾರವನ್ನು ಚಲಾಯಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಲೋಕಾಯಕ್ತಕ್ಕೆ ಅಧಿಕಾರ ಈಗಲೂ ಇದೆ. ಆದರೆ, ಸರ್ಕಾರ ಅವರಿಗೆ ಬೇಕಾದವರನ್ನು ಲೋಕಾಯುಕ್ತಕ್ಕೆ ಕಳುಹಿಸಲಾಗುತ್ತಿದೆ. ಅಧಿಕಾರದಲ್ಲಿ ಇದ್ದವರಿಗೆ ಬಲಿಷ್ಠ ಲೋಕಾಯುಕ್ತ ಬರುವುದು ಬೇಕಿಲ್ಲ. ಕರ್ನಾಟಕದ ಲೋಕಾಯುಕ್ತಕ್ಕೆ ಹೋಲಿಸಿದರೆ ದೇಶದಲ್ಲಿ ಬೇರೆ ಬಲಿಷ್ಠ ಸಂಸ್ಥೆಯೇ ಇಲ್ಲ ಎಂದರು.

ಅನೈತಿಕ ಸಂಬಂಧಕ್ಕಾಗಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದ ಮಹಿಳೆ: ಪತಿಯಿಂದ ಚಾಕು ಇರಿದು ಕೊಲೆ

ಸಮಾಜದಲ್ಲಿ ಇವತ್ತು ಪ್ರಮಾಣಿಕತೆಗೆ ಬೆಲೆ ಇಲ್ಲ: ಕರ್ನಾಟಕದ ಲೋಕಾಯುಕ್ತಕ್ಕೆ ಬರುವ ಮೊದಲು ನಾನು ಕೂಪ ಮಂಡೂಕನಂತಿಂದ್ದೆ. ಅಲ್ಲಿಗೆ ಬಂದ ಮೇಲೆ ಸಮಾಜದಲ್ಲಿ ಎಂತಹ ಕಠಿಣ ಸಮಸ್ಯೆ ಇವೆ ಎನ್ನೋದು ಗೊತ್ತಾಯ್ತು. ಸಮಾಜದಲ್ಲಿ ಶ್ರೀಮಂತನಾಗಿದ್ದರೆ ಸಾಕು ಅವನಿಗೆ ಸಮಾಜ ಸಲಾಂ ಹೊಡೆಯುತ್ತದೆ. ಜೈಲಿಗೆ ಹೋಗಿ ಬರುವವರಿಗೆ ಇವತ್ತು ಅದ್ದೂರಿ ಸ್ವಾಗತ ಸಿಗುತ್ತದೆ. ಸಮಾಜದಲ್ಲಿ ಇವತ್ತು ಪ್ರಮಾಣಿಕತೆಗೆ ಬೆಲೆ ಇಲ್ಲ. ಒಂದು ದುರಾಸೆಯ ರೋಗ, ಮತ್ತಷ್ಟುಬೇಕು ಎನ್ನುವ ಆಸೆ. ಇಂದು ಮನುಷ್ಯನಿಗೆ ದುರಾಸೆ ಹೆಚ್ಚಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ಅಸಮಾಧಾಮ ವ್ಯಕ್ತಪಡಿಸಿದರು.

click me!