ಡ್ರಗ್ಸ್‌ ನಶೆಯಲ್ಲಿ 27 ದಿನದ ಮಗುವಿನ ತಲೆಯನ್ನು ಮರಳಿನಲ್ಲಿ ಹೂತು ಸಾಯಿಸಿದ ತಾಯಿ!

Published : Apr 17, 2023, 06:35 PM IST
ಡ್ರಗ್ಸ್‌ ನಶೆಯಲ್ಲಿ 27 ದಿನದ ಮಗುವಿನ ತಲೆಯನ್ನು ಮರಳಿನಲ್ಲಿ ಹೂತು ಸಾಯಿಸಿದ ತಾಯಿ!

ಸಾರಾಂಶ

ಡ್ರಗ್ಸ್‌ ನಶೆಯಲ್ಲಿ ತಾಯಿಯೊಬ್ಬಳು 27 ದಿನದ ಹೆಣ್ಣು ಮಗುವಿನ ತಲೆಯನ್ನು ಮರಳಿನಲ್ಲಿ ಹೂತು ಸಾಯಿಸಿದ ದಾರುಣ ಘಟನೆ ಪಾಂಡಿಚೇರಿಯಲ್ಲಿ ನಡೆದಿದೆ. ಇದರ ಬೆನ್ನಲ್ಲಿಯೇ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ (ಏ.17): ಡ್ರಗ್ಸ್‌ ಹಾಗೂ ಮದ್ಯದ ನಶೆಯಲ್ಲಿ ತಾಯಿಯೊಬ್ಬಳು ತನ್ನ 27 ದಿನದ ಹೆಣ್ಣು ಶಿಶುವಿನ ತಲೆಯನ್ನು ಮರಳಿನಲ್ಲಿ ಹೂತು ಸಾಯಿಸಿದ ದಾರುಣ ಘಟನೆ ಪಾಂಡಿಚೇರಿಯಲ್ಲಿ ನಡೆದಿದೆ. ಈ ಕೊಲೆ ಪ್ರಕರಣ ಪಾಂಡಿಚೇರಿಯಲ್ಲಿ ಅಚ್ಚರಿ ಮೂಡಿಸಿದೆ. ಮಗು ಜೀವಂತವಾಗಿರುವಾಗಲೇ ಶಿಶುವಿನ ತಲೆಯನ್ನು ಆಕೆ ಮರಳಿನಲ್ಲಿ ಹೂತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಏಪ್ರಿಲ್‌ 15ರ ಶನಿವಾರದಂದು ನಡೆದಿದ್ದಾದರೂ, ಭಾನುವಾರ ಇದು ಬೆಳಕಿಗೆ ಬಂದಿದೆ. ಶಿಶುವನ್ನು ಹತ್ಯೆ ಮಾಡಿದ ಬಳಿಕ ಶವದ ಮೇಲೆ ಮರಳಿನ ದಿಬ್ಬ ಮಾಡಿ ಆಕೆ ಹೊರಟಿದ್ದಳು. ಆದರೆ, ಮೂರ್ತಿಕುಪ್ಪಂ ಸ್ಮಶಾನದ ಬಳಿ 27 ದಿನದ ಹೆಣ್ಣು ಮಗುವಿನ ಕಾಲು ಮರಳಿನ ದಿಬ್ಬದಿಂದ ಹೊರಕ್ಕೆ ಕಾಣುತ್ತಿದ್ದ ಕಾರಣ, ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ತಾಯಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪುದುಚೇರಿ ಬಾಗೂರ್ ಕಿರುಮಂಪಕ್ಕಂ ಪಕ್ಕದಲ್ಲಿರುವ ಮೂರ್ತಿಕುಪ್ಪಂ ಪುದುಕುಪ್ಪಂ ಬೀಚ್‌ನಲ್ಲಿ ನಿನ್ನೆ ಬೆಳಗ್ಗೆ ಮರಳಿನಲ್ಲಿ ಹುದುಗಿದ್ದ ಮಗುವಿನ ಕಾಲು ಪತ್ತೆಯಾಗಿದೆ. ದಾರಿಹೋಕರು ಗಾಬರಿಗೊಂಡು ಕಿರುಮಂಪಕ್ಕಂ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದಾದ ನಂತರ ಕಿರುಮಂಪಕ್ಕಂ ಪೊಲೀಸರು ಸ್ಥಳಕ್ಕೆ ಧಾವಿಸಿ ಮಗುವಿನ ಶವವನ್ನು ಹೊರತೆಗೆದು ತನಿಖೆ ನಡೆಸಿದರು. ಇದೇ ವೇಳೆ, ಪಟ್ಟಣದಿಂದ ಪಟ್ಟಣಕ್ಕೆ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿರುವ ಪುದುಕುಪ್ಪಂ ಕೊಳದ ಬಳಿ ಕುಟುಂಬದೊಂದಿಗೆ ವಾಸವಾಗಿರುವ ಅಲೆಮಾರಿ ಬುಡಕಟ್ಟು ವರ್ಗಕ್ಕೆ ಸೇರಿದ ಚೆನ್ನೈನ ಕೊರಟೂರ್ ಪ್ರದೇಶದ ಕುಮಾರೇಶನ್ (32) ಮತ್ತು ಅವರ 2ನೇ ಪತ್ನಿ ಸಂಗೀತಾ (24) ಕಾಣೆಯಾದ ತಮ್ಮ ಮಗುವನ್ನು ಹುಡುಕುತ್ತಿದ್ದರು. ಪೊಲೀಸರು ಇವರಿಗೆ ಮಗುವಿನ ಮಾಹಿತಿ ನೀಡಿ ತೋರಿಸಿದಾಗ ಇಬ್ಬರೂ ಮಗುವಿನ ಗುರುತು ಪತ್ತೆ ಮಾಡಿ, ಕಣ್ಣೀರಿಡಲು ಆರಂಭ ಮಾಡಿದರು. ಅದಾದ ಬಳಿಕ ಪೊಲೀಸರು ಇವರಿಬ್ಬರ ವಿಚಾರಣೆ ಮಾಡಿದ್ದಾರೆ.

ವಿಚಾರಣೆ ವೇಳೆ ಕುಮಾರೇಶನ್‌ಗೆ ಇದು 2ನೇ ಮದುವೆ ಎನ್ನುವುದು ಪೊಲೀಸರಿಗೆ ಗೊತ್ತಾಗಿದೆ. ಇದಕ್ಕೂ ಮುನ್ನ ರಾಜೇಶ್ವರಿ ಎನ್ನುವ ಮಹಿಳೆಯನ್ನು ವಿವಾಹವಾಗಿದ್ದ ಕುಮಾರೇಶನ್‌ 4 ಮಕ್ಕಳನ್ನು ಹೊಂದಿದ್ದಾರೆ. ಆ ಬಳಿಕ ಈತ ಸಂಗೀತಾಳನ್ನು ವಿವಾಹವಾಗಿದ್ದಾನೆ. ಸಂಗೀತಾಗೂ ಇದು 2ನೇ ಮದುವೆ. ಗರ್ಭಿಣಿಯಾಗಿದ್ದ ಸಂಗೀತಾ ತನ್ನ ಪತಿ ಕುಮಾರೇಶನ್‌ರೊಂದಿಗೆ ಕ್ರಿಮಾಂಬಾಕ್ಕಂಗೆ ಬಂದಿದ್ದರು. ಸಂಗೀತಾಳ ಜೊತೆ ಆಕೆಯ ತಮ್ಮನ ಕುಟುಂಬ ಕೂಡ ಈ ಪ್ರದೇಶಕ್ಕೆ ವಲಸೆ ಬಂದಿತ್ತು. ಕೆಲ ಕಾಲ ಸಮುದಾಯ ಕಲ್ಯಾಣ ಕೇಂದ್ರದ ಬಳಿ ವಾಸವಾಗಿದ್ದ ಕುಟುಂಬ, ನಂತರ ಅವರು ಅಲ್ಲಿಯೇ ಇದ್ದ ಕೆರೆಯ ಬಳಿ ವಾಸ್ತವ್ಯ ಹೂಡಿದ್ದರು ಎನ್ನುವುದು ಬೆಳಕಿಗೆ ಬಂದಿದೆ.

27 ದಿನದ ಹಿಂದೆ ಸಂಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 'ಶನಿವಾರ ಮಗು ಅಳುತ್ತಿದ್ದ ಸಮಯದಲ್ಲಿ ಕುಮಾರೇಶನ್‌ ಕೂಡ ಅದರ ಆರೈಕೆ ಮಾಡಿದ್ದಾನೆ. ಮಗುವಿನ ಜೊತೆಯಲ್ಲೇ ಆತ ನಿದ್ರೆ ಮಾಡಿದ್ದ. ಈ ವೇಳೆ ಪ್ರದೇಶಕ್ಕೆ ಬಂದ ಅಪರಿಚಿತನೊಬ್ಬ ಮಗುವನ್ನು ಕಿಡ್ನಾಪ್‌ ಮಾಡಿದ್ದು, ಆತನೇ ಸಾಯಿಸಿರಬಹುದು' ಎಂದು ಸಂಗೀತಾ ಪೊಲೀಸರಿಗೆ ಹೇಳಿದ್ದಳು.

Atiq Ahmad Murder: 90ರ ದಶಕದ ಡಾನ್‌ನ ಫ್ಯಾನ್‌, ಎರಡೂ ಕೈಗಳಿಂದ ಶೂಟ್‌ ಮಾಡಲು ಪಂಟರ್‌ ಆಗಿದ್ದ ಮೋಹಿತ್‌!

ಸಂಗೀತಾ ಹಾಗೂ ಕುಮಾರೇಶನ್‌ರಿಂದ ಹೇಳಿಕೆ ಪಡೆದ ಬಳಿಕ, ಪೊಲೀಸರು ಇಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ಕಾರಣ ಅವರು ಉಳಿದುಕೊಂಡಿದ್ದಂತ ಪ್ರದೇಶದಲ್ಲಿ ಯಾರೊಬ್ಬರೂ ಬರಲು ಸಾಧ್ಯವಿರಲಿಲ್ಲ. ಪೊಲೀಸ್‌ ಸ್ಟೇಷನ್‌ಗೆ ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. 'ಮಗು ಸತ್ತ ದಿನ ಬೆಳಗ್ಗೆ ನೀನು ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ' ಎಂದು ಪೊಲೀಸರು ಸಂಗೀತಾ ಎದುರು ಸುಳ್ಳು ಹೇಳಿದ್ದರು. ಇದರ ಬೆನ್ನಲ್ಲಿಯೇ ಭಯಬಿದ್ದ ಆಕೆ, ನಿಜಾಂಶ ಹೊರಹಾಕಿದ್ದಾಳೆ. ಪತಿ ಕುಮಾರೇಶನ್‌ ಜೊತೆಗೆ ಆದ ಗಲಾಟೆಯಿಂದ ಸಿಟ್ಟಿಗೆದ್ದು ಈ ಕೃತ್ಯ ಮಾಡಿದ್ದಾಗಿ ತಿಳಿಸಿದ್ದಾಳೆ.

ರಬ್ಬರ್‌ ಮ್ಯಾಟ್‌ಗೆ ಬಡಿದ ತಲೆ, ಕಬಡ್ಡಿ ಆಡುವಾಗಲೇ 16 ವರ್ಷದ ಹುಡುಗನ ಸಾವು!

ಶನಿವಾರ ರಾತ್ರಿ ನಾವಿಬ್ಬರೂ ಕುಡಿದಿದ್ದೆವು. ಈ ವೇಳೆ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಕುಮಾರೇಶನ್‌, ಹುಟ್ಟಿರುವ ಮಗು ನನ್ನದಲ್ಲ. ಬೇರೊಬ್ಬರಿಗೆ ಹುಟ್ಟಿದ ಮಗು ಎಂದು ಬೈದಿದ್ದ. ಮದ್ಯ ಸೇವಿಸಿ ಪತಿ ಮಲಗಿದ್ದ ವೇಳೆ ಮಗುವನ್ನು ಎತ್ತಿಕೊಂಡು ಬಂದ ನಾನು ಬೆಳಗ್ಗೆ 3.30ರ ವೇಳೆಗೆ ಆಕೆಯನ್ನು ಸಾಯಿಸಿದ್ದೆ' ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಇದರ ಬೆನ್ನಲ್ಲುಯೇ ಬೆನ್ನಲ್ಲಿಯೇ ಪೊಲೀಸರು ಕೇಸ್‌ ದಾಖಲು ಮಾಡಿ ಆಕೆಯನ್ನು ಜೈಲಿಗೆ ಅಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Energy Drink: ಯಾದಗಿರಿಯಲ್ಲಿ ಆಘಾತಕಾರಿ ಘಟನೆ: ಎನರ್ಜಿ ಡ್ರಿಂಕ್ ಚಟಕ್ಕೆ 18 ವರ್ಷದ ಯುವಕ ಬಲಿ?