ಕಲಬುರಗಿ (ಆ.6) : 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕ ಅಕ್ರಮ ಕುರಿತು ತನಿಖೆ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ ಒಂದೇ ದಿನ ಭರ್ಜರಿ ಭೇಟೆಯಾಡಿದೆ. ಕಲಬುರಗಿಯ 5 ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಸಿ ಪರೀಕ್ಷೆ ಬರೆದಿರುವ ಆರೋಪದ ಹಿನ್ನೆಲೆಯಲ್ಲಿ ನಗರದ 2 ಪೊಲೀಸ್ ಠಾಣೆಗಳಲ್ಲಿ 5 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿರುವ ಸಿಐಡಿ ಅಧಿಕಾರಿಗಳು ಸರ್ಕಾರಿ ನೌಕರರಾಗಿರುವ ಪೊಲೀಸ್ ಕಾನ್‌ಸ್ಟೇಬಲ್, ಎಫ್‌ಡಿಎ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಬಂಧಿತರಾದವರ ಸಂಖ್ಯೆ 51ಕ್ಕೇರಿದೆ. ಬೆಂಗಳೂರಿನಲ್ಲಿ ಬಂಧಿತರಾದ 36 ಮಂದಿ ಸೇರಿದರೆ ಒಟ್ಟು ಬಂಧಿತರ ಸಂಖ್ಯೆ 87ಕ್ಕೇರಿದೆ.
ಎಸ್‌ಐ ಹಗರಣ ಕೊಲೆಗಿಂತಲೂ ಗಂಭೀರ ಅಪರಾಧ: ಹೈಕೋರ್ಟ್
ಸಿಐಡಿ(CID) ಮೂಲಗಳ ಪ್ರಕಾರ ಬಂಧಿತರೆಲ್ಲರೂ ಕಲಬುರಗಿ(Kalaburagi) ಜಿಲ್ಲೆಯ ಅಫಜಲ್ಪುರ((Afzalpur) ಹಾಗೂ ಜೇವರ್ಗಿ(Jevargi) ತಾಲೂಕಿನವರಾಗಿದ್ದಾರೆ. ಎಲ್ಲರೂ ಹಗರಣದ ಕಿಂಗ್‌ಪಿನ್ ರುದ್ರಗೌಡ((Rudra Gowda Patil) ಪಾಟೀಲ್‌ನ ಜೊತೆ ಡೀಲ್ ಮಾಡಿ ಕಳೆದ ವರ್ಷ ಅ.3ರಂದು ನಡೆದ ಪರೀಕ್ಷೆಯಲ್ಲಿ ಬ್ಲೂ ಟೂಥ್(Bluetooth() ಬಳಸಿ ಹೈದ್ರಾಬಾದ್(Hyderbad) ಕರ್ನಾಟಕ((Karnataka) ಕೋಟಾದ()Kolar( ಪ್ರಾವಿಜನಲ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಹೈ.ಕ. ಕೋಟಾದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದ ಜೇವರ್ಗಿಯ ಭಗವಂತರಾಯ(Bhagavanth raya) ಜೋಗೂರ್, 4ನೇ ರಾರಯಂಕ್ ಪಡೆದಿದ್ದ ಪ್ರಸ್ತುತ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿರುವ ಕಲ್ಲಪ್ಪ ಸಿದ್ದಪ್ಪ ಅಲ್ಲಾಪುರ, 22ನೇ ರಾರಯಂಕ್ ಪಡೆದಿದ್ದ ಅಫಜಲ್ಪುರ ತಾಲೂಕಿನ ಸಿದ್ದುಗೌಡ ಶರಣಪ್ಪ ಪಾಟೀಲ್, ರವಿರಾಜ ಕುರಳಗೇರಾ ಮಲ್ಲಾಬಾದ್, ಬೀರಪ್ಪ ಸಿದ್ನಾಳ್, ಶ್ರೀಶೈಲ ಹಚ್ಚಡ, ಕೋಣಸಿರಸಗಿ, ಸೋಮನಾಥ ಬದನಿಹಾಳ ಹಾಗೂ ವಿಜಯಕುಮಾರ್ ಗುಡೂರ್ ಬಂಧಿತರು. ಬಂಧಿತರಲ್ಲೊಬ್ಬನಾಗಿರುವ ಸಿದ್ದುಗೌಡ ಶರಣಪ್ಪ ಪಾಟೀಲ್ ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲನ ಹೆಂಡತಿಯ ತಮ್ಮನಾಗಿದ್ದು, ಯಾದಗಿರಿ ಜಿಲ್ಲೆಯ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದಾನೆ.
ಎಸ್‌ಐ ಹಗರಣ 15 ದಿನದಲ್ಲಿ ಮುಚ್ಚಿಹಾಕ್ತಾರೆ ಎಂದ ಎಚ್‌ಡಿಕೆ
ಈ 8 ಮಂದಿಯ ಬಂಧನದೊಂದಿಗೆ ಕಲಬುರಗಿಯಲ್ಲಿ ಸಿಐಡಿ ಬಂಧನಕ್ಕೊಳಗಾದವರ ಒಟ್ಟು ಸಂಖ್ಯೆ 51ಕ್ಕೆ ತಲುಪಿದೆ. ಬಂಧಿತರಲ್ಲಿ ಡಿವೈಎಸ್ಪಿಗಳು, ಸಿಪಿಐ, ಪಿಎಸ್‌ಐಗಳು, ಅಭ್ಯರ್ಥಿಗಳು ಸೇರಿದ್ದಾರೆ. ಈ ಪೈಕಿ ಉದ್ಯಮಿ ಸುರೇಶ ಕಾಟೆಗಾಂವ್, ಆತನ ಸಹಾಯಕ ಕಾಳಿದಾಸ್, ಚಾಲಕ ಸದ್ದಾಮ್, ಮಲ್ಲುಗೌಡ ಬಿದನೂರ್ ಈ ನಾಲ್ವರು ಮಾತ್ರ ಷರತ್ತು ಬದ್ಧ ಜಾಮೀನು ಪಡೆದಿದ್ದಾರೆ. ಉಳಿದಂತೆ ಎಲ್ಲ ಆರೋಪಿಗಳೂ ಕಲಬುರಗಿ ಕಾರಾಗೃಹದಲ್ಲಿದ್ದಾರೆ.
ಸಿಐಡಿ ಡಿವೈಎಸ್ಪಿಗಳಾದ ಶಂಕರಗೌಡ ಪಾಟೀಲ್, ಪ್ರಕಾಶ ರಾಠೋಡ, ವೀರೇಂದ್ರ ಕುಮಾರ್ ಹಾಗೂ ಡಿಟೆಕ್ಟಿವ್ ವಿಭಾಗದ ಪಿಎಸ್‌ಐಗಳಾದ ಆನಂದ, ಶಿವಪ್ರಸಾದ್ ನೆಲ್ಲೂರ್ ಅವರ ತಂಡ ಆರೋಪಿಗಳನ್ನು ಬಂಧಿಸಿ ಕಲಬುರಗಿ ಸಿಐಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದೆ. ಹಗರಣದ ರೂವಾರಿ ರುದ್ರಗೌಡ ಪಾಟೀಲ್ ಬ್ಲೂಟೂತ್ ಬಳಸಿ ಇವರನ್ನು ಪಾಸ್ ಮಾಡಿಸಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಈಗಾಗಲೇ ಬಂಧನದಲ್ಲಿರುವ ಆರೋಪಿಗಳಲ್ಲಿ ಹಲವರು ನೀಡಿರುವ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳ ತಂಡ ಕೆಲ ತಿಂಗಳಿಂದ ಇವರೆಲ್ಲರ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ನಿಖರ ಮಾಹಿತಿ ಸಿಗುತ್ತಿದ್ದಂತೆಯೇ ಬಂಧಿಸಲಾಗಿದೆ. ಈ ಅಭ್ಯರ್ಥಿಗಳಿಂದ ರುದ್ರಗೌಡ ಪಾಟೀಲ್ ಮತ್ತವನ ಸಹವರ್ತಿಗಳು ಎಷ್ಟುಹಣಕ್ಕಾಗಿ ಡೀಲ್ ಮಾಡಿಕೊಂಡಿದ್ದರು, ಎಷ್ಟುಹಣ ಪಡೆದಿದ್ದಾರೆಂಬ ಮಾಹಿತಿ ವಿಚಾರಣೆಯಿಂದಷ್ಟೆಹೊರಬರಬೇಕಿದೆ.