Bengaluru Crime: ಕೆಂಗೇರಿ ಡೆಂಟಲ್‌ ಕಾಲೇಜು ಬಳಿ ಬಾಂಗ್ಲಾದೇಶಿಗರಿಂದ ವೇಶ್ಯಾವಾಟಿಕೆ

By Sathish Kumar KHFirst Published Dec 17, 2022, 3:11 PM IST
Highlights

ಬಾಂಗ್ಲಾದಿಂದ ಬಂದು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರಿಂದ ಕೆಂಗೇರಿ, ಬ್ಯಾಡರಹಳ್ಳಿ ಎರಡು ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿದ್ದಾರೆ. ಬಂಗ್ಲಾದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದು ಹುಡುಗಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಎಂಟು ಮಂದಿ ಪಿಂಪ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಡಿ.17):  ಬಾಂಗ್ಲಾದಿಂದ ಬಂದು ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರಿಂದ ಕೆಂಗೇರಿ, ಬ್ಯಾಡರಹಳ್ಳಿ ಎರಡು ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿದ್ದಾರೆ. ಬಂಗ್ಲಾದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದು ಹುಡುಗಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಎಂಟು ಮಂದಿ ಪಿಂಪ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಬಾಂಗ್ಲಾ ದೇಶದಿಂದ ಅಕ್ರಮವಾಗಿ ಬಂದಿರುವ ಆರೋಪಿಗಳು ಬೆಂಗಳೂರು ನಗರದ ಕೆಂಗೇರಿ ಡೆಂಟಲ್ ಕಾಲೇಜು ಬಳಿ ಬಾಡಿಗೆ ಮನೆಯೊಂದನ್ನು ಪಡೆದುಕೊಂಡು ವೇಶ್ಯಾವಾಟಿಕೆ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯನ್ನು ಆಧರಿಸಿ ಬೆಳಗ್ಗೆ 4 ರಿಂದ 5.30ರ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಕೆಂಗೇರಿಯ ವಿನಾಯಕನಗರ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ಬಾಡಿಗೆ ಮನೆಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದವರನ್ನು ಬಂಧಿಸಿದ್ದಾರೆ. ಬಾಂಗ್ಲಾದಿಂದ ಅತಿಕ್ರಮವಾಗಿ ಬಂದು ನೆಲೆಸಿದ್ದ ಆರೋಪಿಗಳಾದ ತನ್ವೀರ್ ಮಂಡಲ್, ಅಖ್ತರ್ ಮಂಡಲ್, ಇಲಾಹಿ,ಬಿಸ್ತ್ವಿ ಸೇರಿದಂತೆ ಎಂಟು ಪಿಂಪ್ ಗಳನ್ನು ಪೊಲೀಸರ ಅತಿಥಿಯಾಗಿದ್ದಾರೆ. 

ನಟಿ ಅಭಿನಯ ಮನೆಯಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರು: ಲಕ್ಷ್ಮಿದೇವಿ ಆರೋಪ

ಕೆಲಸಕ್ಕೆಂದು ಬಂದು ಸಮಾಜಬಾಹಿರ ಕಾರ್ಯ: ಬೆಂಗಳೂರಿಗೆ ಕೆಲಸಕ್ಕೆಂದು ಅಕ್ರಮವಾಗಿ ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ನೆಲಸುವ ಅಕ್ರಮ ವಾಸಿಗಳು ಇಲ್ಲಿ ಬಂದು ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇವರು ತಮ್ಮದೇ ಬಾಂಗ್ಲಾದೇಶದಿಂದಲೇ ಯುವತಿಯರನ್ನ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಅಲ್ಲಿ ಕೆಲಸ ಕೊಡಿಸುವುದಾಗಿ ಯುವತಿಯರನ್ನು ಕರೆತಂದು ಇಲ್ಲಿ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ದೇಶವನ್ನು ಬಿಟ್ಟುಬಂದ ನಂತರ ಹೊಟ್ಟೆ ಬಟ್ಟೆ ಹಾಗೂ ಹಣದ ಆಸೆಯಿಂದ ಯುವತಿಯರು ಅನಿವಾರ್ಯವಾಗಿ ದಂಧೆಗೆ ಇಳಿಯುತ್ತಿದ್ದರು. 

2 ಸಾವಿರಕ್ಕೆ ವೇಶ್ಯಾವಾಟಿಕೆ: ಪೊಲೀಸರ ಕೈಗೆ ಸಿಕ್ಕಿಕೊಂಡಿರುವ ಆರೋಪಿಗಳು ಕೇವಲ 2 ರಿಂದ 3 ಸಾವಿರ ರೂ.ಗಳಿಗೆ ಗ್ರಾಹಕರನ್ನು ಸಂಪರ್ಕಿಸಿ ವೇಶ್ಯವಾಟಿಕೆ ನಡೆಸುತ್ತಿದ್ದರು. ದಾಳಿಯ ವೇಳೆ ಆರೋಪಿಗಳು ತಂಗಿದ್ದ ಸ್ಥಳದಲ್ಲಿ ನಾಲ್ಕು ಮೊಬೈಲ್‌ಗಳು, ಬಾಂಗ್ಲಾದ ಕರೆನ್ಸಿ ನೋಟುಗಳು, ಭಾರತೀಯ ನಗದು ಹಣ ಲಭ್ಯವಾಗಿದ್ದ, ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಘಟನೆ ಕುರಿತು ಕೆಂಗೇರಿ ಮತ್ತು ಬ್ಯಾಡರಹಳ್ಳಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು‌ ಎಂಟು ಆರೋಪಿಗಳ ಪೂರ್ವಾಪರವನ್ನು ಕಲೆಹಾಕುತ್ತಿದ್ದಾರೆ.

ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳಿಗೆ ಜನರೇ ಹೀರೋಗಳು 
ಬೆಂಗಳೂರು (ಡಿ.17):  ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾರ ಕ್ಯೂ ಆರ್ ಕೋಡ್ ಪರಿಕಲ್ಪನೆ ಸೂಪರ್ ಡೂಪರ್ ಹಿಟ್ ಆಗಿದೆ. ಠಾಣೆಗೆ ಪ್ರವೇಶ ಮಾಡುವ ಪ್ರತಿಯೊಬ್ಬ ವ್ಯಕ್ತಿ ಕ್ಯೂ ಆರ್ ಕೋಡ್ ನ ಮೂಲಕವೇ ಉತ್ತರಿಸುತ್ತಿದ್ದಾರೆ. 

ವೇಶ್ಯಾವಾಟಿಕೆ ದಂಧೆ : ಖ್ಯಾತ ಹೊಟೇಲ್‌ನ ಮ್ಯಾನೇಜರ್ ಸೇರಿ 18 ಜನರ ಬಂಧನ

 

ಇತ್ತೀಚೆಗೆ ಪೊಲೀಸರ ಮೇಲೆ ಸಾರ್ವಜನಿಕರ ಅಭಿಪ್ರಾಯವನ್ನು ಧನಾತಮಕವಾಗಿ ಬದಲಾಗುವಂತೆ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನು ಆಗ್ನೇಯ ವಿಭಾಗದ ೧೪ ಪೊಲೀಸ್‌ ಠಾಣೆಗಳಲ್ಲಿ ಜಾರಿಗೊಳಿಸಲಾಗಿತ್ತು. ಇದರಿಂದ ಪೊಲೀಸರು ಸೊಂಟದ ಕೆಳಗಿನ ಶಬ್ದಗಳನ್ನು ಬಳಸಿ ಮಾತನಾಡುವುದಕ್ಕೆ ಬ್ರೇಕ್‌ ಬೀಳುವಂತಾಗಿತ್ತು. ತನಿಖೆ ನಿಧಾನಗತಿಯಲ್ಲಿ ಸಾಗಿದರೂ ನೊಂದವರ ಕಣ್ಣೀರು ಒರಿಸಲು ಕ್ಯೂ ಆರ್ ಕೋಡ್ ರೆಡಿಯಾಗಿದೆ. ಎಫ್ ಐ ಆರ್ ಮಾಡದೇ ವಿಳಂಬ ಮಾಡಿದರೂ ಕ್ಯೂಆರ್ ಕೋಡ್‌ ಮೂಲಕವೇ ಪೊಲೀಸರಿಗೆ ಚಾಟಿ ಬೀಸಬಹುದು. ಕ್ಯೂ ಆರ್ ಕೋಡ್ ವ್ಯವಸ್ಥೆ ಶುರುವಾದಾಗಿಂದ ಎಲ್ಲಾ ಠಾಣೆಯಲ್ಲೂ ಪೊಲೀಸರು ಎಚ್ಚರವಾಗೇ ಪ್ರಕರಣಗಳಳನ್ನು ಹ್ಯಾಂಡಲ್ ಮಾಡ್ತಿದ್ದಾರೆ. ನೊಂದ ದೂರುದಾರರು ಇದೀಗ ಆಗ್ನೇಯ ವಿಭಾಗದ ಪೊಲೀಸರ ಕ್ಯೂ ಆರ್ ಕೋಡ್ ಕಾನ್ಸೆಪ್ಟ್ ಗೆ ಫಿದಾ ಆಗಿದ್ದಾರೆ. 

ಪೊಲೀಸರ ಕೆಲಸಕ್ಕೆ ಜನರ ಮೆಚ್ಚುಗೆ:
ಈಗಾಗ್ಲೇ ಕ್ಯೂಆರ್ ಕೋಡ್ ಮೂಲಕ 1,573 ಮಂದಿ ಪೊಲೀಸರ ಕೆಲಸಕ್ಕೆ ಶಬಾಷ್ ಅಂದಿದ್ದಾರೆ. 173 ದೂರುದಾರರು 4 ಸ್ಟಾರ್ ರೇಟಿಂಗ್ ನೀಡಿದ್ದಾರೆ. 15 ಮಂದಿ ಮಾತ್ರ ಠಾಣೆ ವಾತಾವರಣಕ್ಕೆ ರೆಡ್ ಸಿಗ್ನಲ್ ಕೊಟ್ಟಿದ್ದಾರೆ.  ಆಗ್ನೇಯ ವಿಭಾಗದ 14 ಠಾಣೆಗಳಿಗೆ ಜನರೇ ರೇಟಿಂಗ್ಸ್ ನೀಡೋಕೆ ಶುರುಮಾಡಿದ್ದಾರೆ. ಡಿಸಿಪಿ ಸಿಕೆ ಬಾಬಾ ಅವರು ಜನಪರ ಪೊಲೀಸ್ ಠಾಣೆಗಳಾಗಿ ಬದಲಿಸೋಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

click me!