
ಬೆಂಗಳೂರು (ಅ.22) : ವಿದ್ಯಾರ್ಥಿಗಳಿಗೆ ಇನ್‌ಸ್ಟಾಗ್ರಾಂ ಮೂಲಕ ಆಶ್ಲೀಲ ವಿಡಿಯೋ ಕಳಿಸಿದ್ದ ಪ್ರೊಫೆಸರ್‌ರನ್ನ ಅಮಾನತ್ತುಗೊಳಿಸಿ ನಿಟ್ಟೆ ಮೀನಾಕ್ಷಿ ಶಿಕ್ಷಣ ಸಂಸ್ಥೆ ಆದೇಶ ಹೊರಡಿಸಿದೆ.ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ಕಳಿಸಿರುವ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಆಡಳಿತ ಮಂಡಳಿ. ಇಂಥವರು ಶಿಕ್ಷಕ ವೃತ್ತಿಗೆ ಕಳಂಕ. ತನ್ನ ವಿದ್ಯಾರ್ಥಿಗಳಿಗೆ ಶಿಕ್ಷಕ ಅಶ್ಲೀಲ ವಿಡಿಯೋ ಕಳಿಸಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ. ಇಂಥ ವಿಕೃತರು ನಮ್ಮ ಕಾಲೇಜು ಆಡಳಿತ ಮಂಡಳಿಯಲ್ಲಿ ಒಂದು ಕ್ಷಣವೂ ಇರಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಹಾಸ್ಟೆಲ್ ಹುಡುಗೀರ ಅಶ್ಲೀಲ ವಿಡಿಯೋ ಮಾಡಿ ಲವರ್‌ಗೆ ಕಳಿಸುತ್ತಿದ್ದವಳ ಬಂಧನ!
ಮಧುಸೂದನ್ ಆಚಾರ್ಯ ಎಂಬ ಪ್ರೊಫೆಸರ್ ತಾನು ಹುದ್ದೆಯಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ಕಳಿಸಿದ್ದ. ಅಷ್ಟೇ ಅಲ್ಲದೆ ವಿಡಿಯೋಗಳನ್ನು ನೋಡುವಂತೆ ಶೇರ್ ಮಾಡುವಂತೆ, ಸ್ಟೋರ್ ಮಾಡುವಂತೆ ಫೊರ್ಸ್ ಮಾಡುತ್ತಿದ್ದನಂತೆ. ಗೌರವಯುತ ಸ್ಥಾನದಲ್ಲಿದ್ದ ಪ್ರೊಫೆಸರ್ ಹೀಗೆ ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋ ಕಳಿಸಿರುವುದು ನಾಚಿಕೆಗೇಡು. ಈ ಕೃತ್ಯ ಶಿಕ್ಷಾರ್ಹ ಅಪರಾಧ.
ಪತ್ತೆ ಹಚ್ಚಿದ್ದು ಹೇಗೆ?
ಈ ಬಗ್ಗೆ ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಪ್ಐಆರ್ ಕೂಡ ದಾಖಲಾಗಿತ್ತು. ಸೈಬರ್ ಟಿಪ್ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ವಿಡಿಯೋ ಕಳಿಸಿದ್ದನ್ನು ಮಾನಿಟರ್ ಮಾಡಿದ NCFMEC portal. ಬಳಿಕ ಇದನ್ನು NCRBಗೆ ನೀಡಿತ್ತು. ಸೈಬರ್ ಕ್ರೈಂ ಟಿಪ್ ಅಡಿ ಪ್ರೊಫೆಸರ್ ವಿದ್ಯಾರ್ಥಿಗಳಿಗೆ ವಿಡಿಯೋ ಕಳಿಸಿರುವ ಬಗ್ಗೆ ಮಾಹಿತಿ ನೀಡಿತ್ತು. ಅದರ ಜಾಡು ಹಿಡಿದ ಪೊಲೀಸರಿಗೆ ಮಧುಸೂದನ್ ಮತ್ತು ಕೆಲಸ ಮಾಡುತ್ತಿದ್ದ ದೇವನಹಳ್ಳಿ ಕಾಲೇಜಿನ ಬಗ್ಗೆ ಮಾಹಿತಿ ದೊರಕಿದೆ ಬಳಿಕ ಪೊಲೀಸರು ಮಧುಸೂದನ್ ವಶಕ್ಕೆ ಪಡೆದು ವಿಚಾರ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಪ್ರಕರಣ ಬಯುಲಿಗೆ ಬರುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಪ್ರೊಫೆಸರ್ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.BREAKING: ಕಾಂಗ್ರೆಸ್ ಯುವ ಕಾರ್ಯಕರ್ತೆ ನವ್ಯಶ್ರೀ ಪೊಲೀಸರ ವಶಕ್ಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ