Mangaluru Crime: ಜೈಲಿನ ಮಹಾದ್ವಾರದ ಬಳಿಯೇ ತಪ್ಪಿಸಿಕೊಂಡ ಕಳ್ಳತನ ಆರೋಪಿ!

By Kannadaprabha News  |  First Published Oct 22, 2022, 1:50 PM IST

 ನ್ಯಾಯಾಲಯದಿಂದ ಜೈಲಿಗೆ ಕರೆದೊಯ್ಯಲಾಗುತ್ತಿದ್ದ ಮೊಬೈಲ್‌ ಕಳ್ಳತನದ ಆರೋಪಿ ಪೊಲೀಸರನ್ನು ಯಾಮಾರಿಸಿ ತಪ್ಪಿಸಿಕೊಂಡ ಘಟನೆ ಗುರುವಾರ ಸಂಜೆ ಇಲ್ಲಿನ ಬೀಜಾಡಿ ಎಂಬಲ್ಲಿ ನಡೆದಿದೆ.


ಉಡುಪಿ (ಅ.22) : ನ್ಯಾಯಾಲಯದಿಂದ ಜೈಲಿಗೆ ಕರೆದೊಯ್ಯಲಾಗುತ್ತಿದ್ದ ಮೊಬೈಲ್‌ ಕಳ್ಳತನದ ಆರೋಪಿ ಪೊಲೀಸರನ್ನು ಯಾಮಾರಿಸಿ ತಪ್ಪಿಸಿಕೊಂಡ ಘಟನೆ ಗುರುವಾರ ಸಂಜೆ ಇಲ್ಲಿನ ಬೀಜಾಡಿ ಎಂಬಲ್ಲಿ ನಡೆದಿದೆ. ಪರಾರಿಯಾದ ಆರೋಪಿ ಭಟ್ಕಳ ಮೂಲದ ಮೊಹಮ್ಮದ್‌ ರಾಹಿಕ್‌ (22) ಎಂದು ಗುರುತಿಸಲಾಗಿದೆ. ಕೆಲ ತಿಂಗಳ ಹಿಂದೆ ಬೀಜಾಡಿ ಸಮೀಪದಲ್ಲಿ ಮೊಬೈಲ್‌ ಅಂಗಡಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿತ್ತು.

ಪಾನ್ ಶಾಪ್ ಮುಂದಿದ್ದ ಬಲ್ಬ್‌ ನಾಪತ್ತೆ : ಸಿಸಿಟಿವಿ ಪರಿಶೀಲಿಸಿದ ಮಾಲೀಕನಿಗೆ ಶಾಕ್

Tap to resize

Latest Videos

ವಿಚಾರಣೆಗೆ ಸಂಬಂಧಿಸಿ ಆತನನ್ನು ಕುಂದಾಪುರ ಎ.ಸಿ.ಜೆ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನದ ಬಿನ್ನೆಲೆಯಲ್ಲಿ ಹಿರಿಯಡ್ಕದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ಜೈಲಿನ ಮುಖ್ಯದ್ವಾರದ ಬಳಿ ವಾಹನ ನಿಲ್ಲಿಸಿ ಆರೋಪಿಯನ್ನು ಇಳಿಸುತ್ತಿದ್ದಂತೆ, ಆತ ಭದ್ರತೆಯ ಪೊಲೀಸ್‌ ಸಿಬ್ಬಂದಿಯ ಹೊಟ್ಟೆಗೆ ಹೊಡೆದು, ಕೆಳಕ್ಕೆ ತಳ್ಳಿ ಹಾಕಿ, ಹೊರಗೆ ಓಡಿ, ಸಮೀಪದ ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾನೆ.

ವಿಡಿಯೋ ಕಾಲ್‌ ವೇಳೆ ನಡೆದದ್ದು ಆತ್ಮಹತ್ಯೆ ಅಲ್ಲ, ಕೊಲೆ: ಆರೋಪಿ ಅಂದರ್‌

ಮೊಬೈಲ್‌ನಲ್ಲಿ ಲೈವ್‌ ವಿಡಿಯೋ ಕಾಲ್‌ ಮಾಡುತ್ತಾ, ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದ್ದ ಇಲ್ಲಿನ ಕುಕ್ಕೆಹಳ್ಳಿಯ ನಿವಾಸಿ ಕೃತಿಕ್‌ ಸಾಲ್ಯಾನ್‌ ಇದೀಗ ಕೊಲೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಸೆ.14ರಂದು ಕೃತಿಕ್‌ ತನ್ನ ಮನೆಯ ಸಮೀಪ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಹಿಳೆಯೊಬ್ಬರಿಗೆ ವಿಡಿಯೋ ಕಾಲ್‌ ಮಾಡಿದ್ದ, ನಂತರ ಆತನ ಶವ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ಆತನ ಅತ್ತೆ ಶೈಲಜಾ ಅವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದ ಪೊಲೀಸರು ವಿಡಿಯೋವನ್ನು ಆಧರಿಸಿ, ಅದು ಆತ್ಮಹತ್ಯೆ ಅಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಇದೀಗ ಕೊಲೆ ಮಾಡಿದ ದೂರದ ಸಂಬಂಧಿ ಬ್ರಹ್ಮಾವರದ ಹೊಟೇಲ್‌ ಉದ್ಯಮಿ ದಿನೇಶ್‌ ಸಫಲಿಗ ಎಂಬಾತನನ್ನು ಬಂಧಿಸಿದ್ದಾರೆ.

ಡ್ರಗ್ಸ್, ಐಷಾರಾಮಿ ಜೀವನಕ್ಕೆ ಕಳ್ಳತನ: ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳೇ ಟಾರ್ಗೆಟ್‌

ಮೃತ ಕೃತಿಕ್‌ನಿಂದ ದಿನೇಶ್‌ 9 ಲಕ್ಷ ರು. ಸಾಲ ಪಡೆದಿದ್ದ. ಈ ಹಣವನ್ನು ಹಿಂದಕ್ಕೆ ನೀಡದೆ ವಂಚಿಸುವ ಉದ್ದೇಶದಿಂದ, ಕೃತಿಕ್‌ಗೆ ಮಹಿಳೆಯೊಬ್ಬರ ಪರಿಚಯ ಮಾಡಿಕೊಡುವುದಾಗಿ ಹೇಳಿ ಕಾಡಿಗೆ ಕರೆದುಕೊಂಡು ಹೋಗಿದ್ದ, ನಂತರ ಮೊಬೈಲ್‌ನಲ್ಲಿ ಮಹಿಳೆಗೆ ವಿಡಿಯೋ ಕಾಲ್‌ ಮಾಡಿ, ಮರಕ್ಕೆ ಹಗ್ಗ ಕಟ್ಟಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡುವ ನಾಟಕವಾಡುವಂತೆ ಹೇಳಿದ್ದ, ಕೃತಿಕ್‌ ಆತ್ಮಹತ್ಯೆಯ ನಾಟಕ ಮಾಡುವಾಗ ದಿನೇಶ್‌ ಆತನನ್ನು ಕೊಲೆ ಮಾಡಿ, ಶವವನ್ನು ಮರಕ್ಕೆ ನೇತು ಹಾಕಿದ್ದ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.

click me!