ಶಿವಮೊಗ್ಗ: ಖಾಸಗಿ ಶಾಲಾ ಬಸ್ ಪಲ್ಟಿಯಾಗಿ ವಿದ್ಯಾರ್ಥಿಗಳು ಗಂಭೀರ ಗಾಯ!

By Ravi Janekal  |  First Published Feb 17, 2024, 6:39 PM IST

ಓವರ್ ಟೇಕ್ ಮಾಡುವ ವೇಳೆ ಕಾರು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಖಾಸಗಿ ಶಾಲೆ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.


ಶಿವಮೊಗ್ಗ (ಫೆ.17): ಓವರ್ ಟೇಕ್ ಮಾಡುವ ವೇಳೆ ಕಾರು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಖಾಸಗಿ ಶಾಲೆ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಶಾಲಾ ಮಕ್ಕಳನ್ನು ಹೊತ್ತುಬರುತ್ತಿದ್ದ ಖಾಸಗಿ ಶಾಲೆ ಬಸ್. ಈ ವೇಳೆ ಕಾರಿನ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಅಡ್ಡಾದಿಡ್ಡಿ ಚಲಿಸಿದ್ದಾನೆ. ಇದರಿಂದ ಗೊಂದಲಕ್ಕೀಡಾಗಿ ಖಾಸಗಿ ಶಾಲಾ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಮುಗ್ಗರಿಸಿ ಬಿದ್ದ ಬಸ್‌ನೊಳಗೆ ಚಿಕ್ಕಮಕ್ಕಳು ತಲೆ ಕಾಲುಗಳಿಗೆ ಪೆಟ್ಟುಬಿದ್ದಿದೆ. 

Tap to resize

Latest Videos

undefined

ಘಟನೆ ಬಳಿಕ ತಕ್ಷಣವೇ ಮಕ್ಕಳನ್ನು ಸಮೀಪದ ದುರ್ಗ ಕ್ಲಿನಿಕ್‌ಗೆ ದಾಖಲಿಸಿ ರಕ್ಷಣೆ ಮಾಡಿದ ಸ್ಥಳೀಯರು. ಅಪಘಾತ ಸುದ್ದಿ ತಿಳಿದು ಆಸ್ಪತ್ರೆಗೆ ದೌಡಾಯಿಸಿ ಮಕ್ಕಳ ಪೋಷಕರು ಮಕ್ಕಳ ಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. ಸದ್ಯ ಭದ್ರಾವತಿ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾವಿನ ಹೆದ್ದಾರಿಯಾಗ್ತಿದೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ! ಭೀಕರ ಅಪಘಾತ ಸ್ಥಳದಲ್ಲೇ ಮೂವರ ದುರ್ಮರಣ!

click me!