ಬೆಂಗಳೂರಿಗರಿಗೆ ತಲೆನೋವಾಗಿದ್ದ ಇರಾನಿ ಗ್ಯಾಂಗ್; ಕದ್ದ ಚಿನ್ನಾಭರಣ ಮಾರಲು ಯತ್ನಿಸಿ ಸಿಕ್ಕಿಬಿದ್ದ ಖದೀಮರು!

By Kannadaprabha News  |  First Published Feb 17, 2024, 4:00 PM IST

: ನಗರದಲ್ಲಿ ಮನೆಗಳವು ಹಾಗೂ ಸರಗಳ್ಳತನ ಕೃತ್ಯದಲ್ಲಿ ದೋಚಿದ ಆಭರಣಗಳನ್ನು ಮಾರಾಟಕ್ಕೆ ಯತ್ನಿಸಿದ್ದಾಗ ಮೂವರು ಕಿಡಿಗೇಡಿಗಳು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಗೆ ಸೆರೆಯಾಗಿದ್ದಾರೆ.


ಬೆಂಗಳೂರು (ಫೆ.17): ನಗರದಲ್ಲಿ ಮನೆಗಳವು ಹಾಗೂ ಸರಗಳ್ಳತನ ಕೃತ್ಯದಲ್ಲಿ ದೋಚಿದ ಆಭರಣಗಳನ್ನು ಮಾರಾಟಕ್ಕೆ ಯತ್ನಿಸಿದ್ದಾಗ ಮೂವರು ಕಿಡಿಗೇಡಿಗಳು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಗೆ ಸೆರೆಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ನಾಸಿರ್ ಇರಾನಿ, ಅಮಿರ್‌ ಜಾಧ ಇರಾನಿ ಹಾಗೂ ಜಾಹೀರ್ ಅಬ್ಬಾಸ್ ಬಂಧಿತರಾಗಿದ್ದು, ಆರೋಪಿಗಳಿಂದ ₹7.62 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. 

ಇತ್ತೀಚೆಗೆ ಕುರುಬರಹಳ್ಳಿ 60 ಅಡಿ ರಸ್ತೆ ಸಮೀಪದ ಚಿನ್ನಾಭರಣ ಅಂಗಡಿಗೆ ಆಭರಣ ಮಾರಾಟಕ್ಕೆ ಅಪರಿಚಿತರು ಬಂದಿರುವ ಬಗ್ಗೆ ಬಾತ್ಮೀದಾರರ ಮೂಲಕ ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ಮಾಹಿತಿ ಸಿಕ್ಕಿತು.  ತಕ್ಷಣವೇ ಅಂಗಡಿಗೆ ತೆರಳಿ ಶಂಕೆ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

 

ನಿರ್ಮಾಪಕಿಯಿಂದ ಹಣ ಸುಲಿಯಲು ಕಿಡ್ನಾಪ್‌ ಕಥೆ ಕಟ್ಟಿದ ಕಾರು ಚಾಲಕ; ಮುಂದೆ ನಡೆದಿದ್ದೇನು?

ತಮ್ಮೂರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿಗಳು, ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ದಾರಿ ತುಳಿದಿದ್ದರು. ಅಂತೆಯೇ ಬೆಂಗಳೂರಿಗೆ ಬೆಳಗಾವಿಯಿಂದ ಬಂದು ಮನೆಗಳ್ಳತನ, ಸರಗಳ್ಳತನ ಹಾಗೂ ಗಮನ ಬೇರೆಡೆ ಸೆಳೆದು ಹಣ ದೋಚುವ ಕೃತ್ಯದಲ್ಲಿ ಈ ಮೂವರು ತೊಡಗಿದ್ದರು.  ಹಲವು ದಿನಗಳಿಂದ ಅಪರಾಧ ಚಟುವಟಿಕೆಯಲ್ಲಿ ನಿರತರಾಗಿದ್ದ ಈ ತಂಡವು ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ 

ಕದ್ದ ಬೈಕ್‌ನಲ್ಲೇ ಫೀಲ್ಡ್‌ಗಿಳಿಯುತ್ತಿದ್ದ ಆಸಾಮಿ; ಮೊಬೈಲ್‌ ಹೇಗೆ ದೋಚುತ್ತಿದ್ದ ಗೊತ್ತಾ?

click me!