* ರಾಜು ಲಮಾಣಿ ಆತ್ಮಹತ್ಯೆ ಮಾಡಿಕೊಂಡ ವಿಚಾರಣಾಧೀನ ಕೈದಿ
* 20-25 ದಿನಗಳ ಹಿಂದೆಯಷ್ಟೇ ಜೈಲು ಪಾಲಾಗಿದ್ದ ರಾಜು
* ಏಪ್ರಿಲ್ 7 ಕ್ಕೆ ಮಂಜೂರಾಗಿತ್ತು ಜಾಮೀನು
ಗದಗ(ಏ.08): ಜಾಮೀನು(Bail) ಸಿಕ್ಕ ಮಾಹಿತಿ ಸರಿಯಾದ ಸಮಯಕ್ಕೆ ಸಿಗದೆ ಗದಗ ಜಿಲ್ಲಾ ಕಾರಾಗೃಹದಲ್ಲಿ(Jail) ವಿಚಾರಣಾಧೀನ ಕೈದಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಪೋಕ್ಸೋ ಕಾಯ್ದೆಯಡಿ ವಿಚಾರಣಾಧೀನ ಕೈದಿಯಾಗಿದ್ದ ರಾಜು ಲಮಾಣಿ (19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ಗದಗ(Gadag) ತಾಲೂಕಿನ ಅಡವಿ ಸೋಮಾಪುರ ತಾಂಡಾದ ನಿವಾಸಿಯಾಗಿರುವ ರಾಜು ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಕಾರಾಗೃಹದಲ್ಲಿನ ಬ್ಯಾರೆಕ್ ಕಿಟಕಿ ಸರಳಿಗೆ ಟಾವಲ್ ಸಹಾಯದಿಂದ ನೇಣು ಬಿಗಿದುಕೊಂಡಿದ್ದಾನೆ.
ಮಾ.7 ರಂದು ಶನಿವಾರ ಜಾಮೀನು ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ರಾಜು ಇದ್ದ. ಸಹ ಕೈದಿಗಳೊಂದಿಗೆ ಜಾಮೀನು ಸಿಗುತ್ತೆ, ಪಿಯುಸಿ ಪರೀಕ್ಷೆ ಬರೆಯಲು ರಿಲೀಸ್ ಆಗ್ತೀನಿ ಅಂತಾ ಹೇಳಿಕೊಂಡಿದ್ದನಂತೆ. ಜಾಮೀನು ನಿರೀಕ್ಷೆಯಲ್ಲೇ ಖಿನ್ನತೆಗೊಳಗಾಗಿದ್ದನಂತೆ. ಇದೇ ಚಿಂತೆಯಲ್ಲಿ ಸಹ ಕೈದಿಗಳ ಟವೆಲ್ ತೆಗೆದುಕೊಂಡು ಹಗ್ಗದ ಮಾದರಿಯಲ್ಲಿ ಜೋಡಿಸಿ ನೇಣು ಕುಣಿಕೆ ರೆಡಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದನು.
ಮೆಟ್ರೋ ನಿಲ್ದಾಣದಿಂದ ಜಿಗಿದು ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ
ಅಡವಿ ಸೋಮಾಪುರ ಗ್ರಾಮದ ರಾಜು ಪಾಂಡಪ್ಪ ಲಮಾಣಿ ಅಪ್ರಾಪ್ತೆಯನ್ನ ಪ್ರೀತಿಸಿದ್ದ(Love), ಹುಡುಗಿ ಕಾಣೆಯಾಗಿದ್ದಾಳೆಂದು ಗ್ರಾಮೀಣ ಪೊಲೀಸ್(Police) ಠಾಣೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ 8 ದಿನಗಳ ಬಳಿಕ ಸಿಕ್ಕ ಹುಡುಗಿಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೇಳಿಕೆಯನ್ನು ದಾಖಲಿಸಿದ್ದರು.
ಈ ಹೇಳಿಕೆಯಲ್ಲಿ 'ರಾಜು ನಾನು ಬೆಂಗಳೂರು, ಗೋವಾ ಹೋಗಿದ್ವಿ. ಹೋದಲ್ಲೆಲ್ಲಾ ಜೊತೆಗಿದ್ವಿ' ಎಂದು ಹೇಳಿದ್ಲಂತೆ. ನ್ಯಾಯಾಧೀಶರ ಎದುರು 'ನಾನು ಗೆಳತಿಯರೊಂದಿಗೆ ಹೋಗಿದ್ದೆ ಅಂತ ಮಾತು ಬದಲಿಸಿದ್ದಳು. ಆದ್ರೂ ರಾಜು ಮೇಲೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ರಾಜು ಲಮಾಣಿ ಪಿಯುಸಿ ವಿದ್ಯಾರ್ಥಿಯಾಗಿದ್ದು(PUC Student) ಪರೀಕ್ಷೆ ಬರೆಯಬೇಕುದೆ, ಆರೋಪಿಯ ವಿರುದ್ಧ ಅಂತಹ ಯಾವುದೇ ಗಂಭೀರ ಆರೋಪವಿಲ್ಲ. ಇದೊಂದು ಸುಳ್ಳು ಪ್ರಕರಣವಾಗಿದೆ ಎಂಬ ವಾದ ಮಂಡಿಸಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು.
ಏಪ್ರಿಲ್ 7 ಕ್ಕೆ ಮಂಜೂರಾಗಿತ್ತು ಜಾಮೀನು..!
ಗುರುವಾರ(ಏ.07)ದಂದು 5.25ಕ್ಕೆ ಜಾಮೀನು ಆದೇಶವಾಗಿತ್ತು. ಆದರೆ, ನಿನ್ನೆ ನ್ಯಾಯಾಲಯದ ಸಮಯ ಮುಗಿದಿದ್ದರಿಂದ ಕಾರಾಗೃಹಕ್ಕೆ ಮಾಹಿತಿ ಬಂದಿರಲಿಲ್ಲ. ಆದ್ರೆ ಆರೋಪಿಪರ ವಕೀಲ ಎಂಎ ಮೌಲ್ವಿ ಕಾರಾಗೃಹದ ಲ್ಯಾಂಡ್ ಲೈನ್(08372246341) ಗೆ ಕರೆ ಮಾಡಿ ಮಾಹಿತಿ ನೀಡಲು ಪ್ರಯತ್ನಿಸಿದ್ರಂತೆ. ಆದ್ರೆ ರಿಂಗ್ ಆಗೋ ಫೋನ್ ಕರೆ ಯಾರೂ ಸ್ವಕರಿಸಿರಲಿಲ್ಲ. ಸಿಬ್ಬಂದಿಯೊಬ್ಬರಿಗೂ ಕಾಂಟ್ಯಾಕ್ಟ್ ಮಾಡಿ ಮಾಹಿತಿ ನೀಡುವ ಪ್ರಯತ್ನವನ್ನ ವಕೀಲ ಮೌಲ್ವಿ ಮಾಡಿದಾರೆ. ಆದ್ರೆ, ಸಿಬ್ಬಂದಿ ಟ್ರೇನಿಂಗ್‌ನಲ್ಲಿದ್ರಂತೆ. ಹೀಗಾಗಿ ಜಾಮೀನು ವಿಷಯ ರಾಜೂವರೆಗೆ ಮುಟ್ಟಿರಲಿಲ್ಲ..
Dharwad ಅಂತರ್ಜಾತಿ ಪ್ರೀತಿಗೆ ಮನೆಯವರು ಒಪ್ಪಲಿಲ್ಲವೆಂದು ಪ್ರೇಮಿಗಳ ಆತ್ಮಹತ್ಯೆ
ರಾಜು ಕೇಸ್ ಹಿನ್ನೆಲೆ
ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದ ರಾಜು ಪಾಂಡಪ್ಪ ಲಮಾಣಿ ಗದಗನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಅಲ್ಲದೆ, ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಪ್ರಾಪ್ತೆಯನ್ನ (16 ವರ್ಷ 7 ತಿಂಗಳು) ಪ್ರೀತಿಸುತ್ತಿದ್ದ. ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಗೋವಾಗೆ ಕರೆದುಕೊಂಡು ಹೋಗಿದ್ದನಂತೆ. ಈ ಬಗ್ಗೆ ಹುಡುಗಿಯ ಮನೆಯವರು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಿದ್ದರಂತೆ. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಕಳೆದ 20-25 ದಿನಗಳ ಹಿಂದೆಯಷ್ಟೇ ರಾಜು ಲಮಾಣಿ ಜೈಲು ಪಾಲಾಗಿದ್ದ.
ಜಾಮೀನು ಸಿಕ್ಕ ವಿಚಾರ ಸಮಯಕ್ಕೆ ಸರಿಯಾಗಿ ಸಿಕ್ಕಿದ್ದರೆ ರಾಜೂ ಆತ್ಮಹತ್ಯೆಯ ನಿರ್ಧಾರ ಮಾಡ್ತಿರಲಿಲ್ಲ ಅನ್ಸುತ್ತೆ.. ಕೇಸ್‌ನಿಂದ ಜೀವನ ಹಾಳಾಯ್ತು ಅನ್ನೋ ಖಿನ್ನತೆಯಲ್ಲಿ ರಾಜೂ ತಪ್ಪಿ ನಿರ್ಧಾರ ಮಾಡಿದ್ದಾನೆ.