ಪ್ರಿಂಟಿಂಗ್‌ ಪ್ರೆಸ್‌ ಮಾಲಿಕ ಲಿಯಾಕತ್‌ ಹತ್ಯೆಗೆ ಕಾರಣವಾಗಿದ್ದು ಸಲಿಂಗಕಾಮ!

By Kannadaprabha News  |  First Published Mar 7, 2023, 7:51 AM IST

ಇತ್ತೀಚೆಗೆ ನಾಯಂಡಹಳ್ಳಿ ನಡೆದಿದ್ದ ಜಾಹೀರಾತು ಕಂಪನಿ ಮಾಲಿಕ ಲಿಯಾಕತ್‌ ಅಲಿ ಖಾನ್‌ ಕೊಲೆಗೆ ‘ಸಲಿಂಗ ಕಾಮ’ ಸಂಬಂಧ ಕಾರಣವಾಗಿದೆ ಎಂಬ ವಿಷಯ ಚಂದ್ರಾಲೇಔಟ್‌ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.


ಬೆಂಗಳೂರು (ಮಾ.7) : ಇತ್ತೀಚೆಗೆ ನಾಯಂಡಹಳ್ಳಿ ನಡೆದಿದ್ದ ಜಾಹೀರಾತು ಕಂಪನಿ ಮಾಲಿಕ ಲಿಯಾಕತ್‌ ಅಲಿ ಖಾನ್‌ ಕೊಲೆಗೆ ‘ಸಲಿಂಗ ಕಾಮ’ ಸಂಬಂಧ ಕಾರಣವಾಗಿದೆ ಎಂಬ ವಿಷಯ ಚಂದ್ರಾಲೇಔಟ್‌ ಠಾಣೆ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಚಂದ್ರಾಲೇಔಟ್‌(Chandraa layout) 1ನೇ ಹಂತದ ನಿವಾಸಿ ಲಿಯಾಕತ್‌ ಅಲಿ ಖಾನ್‌( Liaquat ali khan) (46) ಹತ್ಯೆ ಬಳಿಕ ಆತ್ಮಹತ್ಯೆ ಯತ್ನಿಸಿ ವಿಕ್ಟೋರಿಯಾ ಆಸ್ಪತ್ರೆ(Victoria Hospital) ಸೇರಿದ್ದ ಮೃತನ ಸಂಗಾತಿ ಗೋರಿಪಾಳ್ಯದ ಇಲಿಯಾಜ್‌(Goripalya Iliaz) (26) ಎಂಬಾತನನ್ನು ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ‘ಸಲಿಂಗ ಕಾಮ’ ವಿಚಾರ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

'ಲಾಯರ್‌ ಕರೀತಿದ್ದಾರೆ 1 ಅವರ್‌ ಕೆಲಸ..' ಎಂದ್ಹೇಳಿ ಹೊರಟವನು ಸಲಿಂಗಕಾಮಕ್ಕೆ ಬಲಿಯಾದ!

ಲಾಕ್‌ಡೌನ್‌ ವೇಳೆ ಲಿಯಾಕತ್‌ಗೆ ಇಲಿಯಾಜ್‌ ಸ್ನೇಹವಾಗಿದೆ. ಬಳಿಕ ಎರಡು ವರ್ಷಗಳಿಂದ ಇಬ್ಬರು ಅಸ್ವಾಭಾವಿಕ ಲೈಂಗಿಕ ಸಂಬಂಧ(Unnatural sex) ಹೊಂದಿದ್ದರು. ಆದರೆ ಇತ್ತೀಚೆಗೆ ಇಲಿಯಾಜ್‌ಗೆ ಮದುವೆಗೆ ಆತನ ಪೋಷಕರು ಮುಂದಾಗಿದ್ದರು. ಈ ಹಿಂದೆ ಯುವತಿ ಜತೆ ನಿಶ್ಚಿಯವಾಗಿದ್ದ ಆತನ ಮದುವೆ ಕೊನೆಗೆ ರದ್ದಾಗಿತ್ತು. ಹೀಗಾಗಿ ತನ್ನ ಸಲಿಂಗ ಕಾಮ ಸಂಬಂಧ ಹೆತ್ತವರಿಗೆ ತಿಳಿದರೆ ಮರ್ಯಾದೆ ಹೋಗುತ್ತದೆ ಎಂದು ಹೆದರಿ ಲಿಯಾಕತ್‌ನನ್ನು ಇಲಿಯಾಜ್‌ ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕತ್ತರಿಯಲ್ಲೇ ಕುತ್ತಿಗೆ ಕೊಯ್ದ:

ಗಂಗೊಂಡನಹಳ್ಳಿ(Gangondanahalli)ಯಲ್ಲಿ ‘ರಾಯಲ್‌ ಕಮ್ಯುನಿಕೇಷನ್‌’ ಜಾಹೀರಾತು(Royal Communication' advertisement printing press) ಪ್ರಚಾರದ ಪ್ರಿಟಿಂಗ್‌ ಪ್ರೆಸ್‌ ನಡೆಸುತ್ತಿದ್ದ ಲಿಯಾಕತ್‌, ಎರಡು ಮದುವೆ ಆಗಿದ್ದ. ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. 2022ರ ಫೆಬ್ರವರಿಯಲ್ಲಿ ಆತ ಮತ್ತೊಂದು ವಿವಾಹವಾಗಿದ್ದ. ಹೀಗಿದ್ದರೂ ತನಗಿಂತ ಕಿರಿಯ ವಯಸ್ಸಿನ 26 ವರ್ಷದ ಇಲಿಯಾಜ್‌ ಜತೆ ಸಲಿಂಗ ಸಂಬಂಧ ಹೊಂದಿದ್ದ. ಎರಡು ವರ್ಷಗಳಿಂದ ಈ ಸಂಬಂಧ ನಡೆದಿತ್ತು. ನಾಯಂಡಹಳ್ಳಿಯ ಮೆಟ್ರೋ ಲೇಔಟ್‌ನಲ್ಲಿ ಲಿಯಾಕತ್‌ ಹಳೆಯ ಮನೆಯಲ್ಲೇ ಅವರ ಮಿಲನ ನಡೆಯುತ್ತಿತ್ತು.

 

ಸಲಿಂಗಕಾಮ: ಸದ್ಗುರುಗೆ ಉರ್ಫಿ ಜಾವೇದ್ ಹೇಳಿದ್ದೇನು, ಕೇಳಿದ್ದೇನು?

ಫೆ.27ರಂದು ರಾತ್ರಿ ತನ್ನ ಹಳೆಯ ಮನೆಯಲ್ಲಿ ಇಲಿಯಾಜ್‌ನನ್ನು ಲಿಯಾಕತ್‌ ಭೇಟಿಯಾಗಿದ್ದಾನೆ. ಆಗ ತನ್ನ ಭವಿಷ್ಯದ ಬದುಕಿನ ಬಗ್ಗೆ ಪ್ರಸ್ತಾಪಿಸಿದ ಇಲಿಯಾಜ್‌, ಈ ಸಲಿಂಗ ಸಂಬಂಧವನ್ನು ಮುರಿದುಕೊಳ್ಳುವಂತೆ ಲಿಯಾಕತ್‌ಗೆ ಹೇಳಿ, ಸಲಿಂಗ ವಿಚಾರ ಬಹಿರಂಗ ಪಡಿಸದಂತೆ ಕೋರಿದ್ದಾನೆ. ಆದರೆ ಈ ಮಾತಿಗೆ ಲಿಯಾಕತ್‌ ತಿರಸ್ಕರಿಸಿದಾಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಈ ಹಂತದಲ್ಲಿ ಕೆರಳಿದ ಆತ, ಲಿಯಾಕತ್‌ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ಬಳಿಕ ಲಿಯಾಕತ್‌ ಎರಡನೇ ಪತ್ನಿಗೆ ಕೊಡಲು ತಂದಿದ್ದ ಕತ್ತರಿಯಿಂದಲೇ ಆತನ ಕುತ್ತಿಗೆ ಇರಿದು ಇಲಿಯಾಜ್‌ ಪರಾರಿಯಾಗಿದ್ದ. ಈ ಹತ್ಯೆ ಬಳಿಕ ಮನೆಗೆ ತೆರಳಿದ ಇಲಿಯಾಸ್‌, ಪೊಲೀಸರ ಬಂಧನ ಭೀತಿಯಿಂದ ಥೈರಾಯ್ಡ್‌ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಆತನನ್ನು ಕುಟುಂಬ ಸದಸ್ಯರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದರು.

click me!