ಮನೆಯಲ್ಲಿನ ಎಸಿ ಸ್ಫೋಟಗೊಂಡು ಮೂವರು ಸಜೀವ ದಹನ ಆಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ.
ರಾಯಚೂರು (ಮಾ.6): ಮನೆಯಲ್ಲಿನ ಎಸಿ ಸ್ಫೋಟಗೊಂಡು ಮೂವರು ಸಜೀವ ದಹನ ಆಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಕ್ತಿನಗರದ ಆರ್ ಟಿಪಿಎಸ್ ಕಾಲೋನಿಯಲ್ಲಿ ಈ ಹೃದಯ ವಿದ್ರಾವಕ ಘಟನೆ ಜರುಗಿದೆ. ಘಟನೆಯಲ್ಲಿ ಮಂಡ್ಯ ಮೂಲದ ಗೃಹಿಣಿ ರಂಜಿತಾ(31), ಮಕ್ಕಳಾದ ತಾರುಣ್ಯ (6) ಮತ್ತು ಮೃದಲಾ (13) ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಮೃತ ರಂಜಿತಾ ಪತಿ ಸಿದ್ದಲಿಂಗಯ್ಯ ಸ್ವಾಮಿ ಆರ್ ಟಿಪಿಎಸ್ ನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಸಂಜೆ ವೇಳೆ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದು ಮನೆಯ ಬೆಡ್ ರೂಮ್ ನ ಬಾಗಿಲು ಹಾಕಿಕೊಂಡು ನಿದ್ರೆಗೆ ಜಾರಿದ್ರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಎಸಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.
ಮನೆಯಲ್ಲಿ ಬೆಂಕಿಯ ಹೊಗೆಯ ಆವರಿಸಿದ್ದು ನೋಡಿದ ಸ್ಥಳೀಯರು ಶಕ್ತಿನಗರದ ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮನೆಯಲ್ಲಿ ಉರಿಯುತ್ತಿದ್ದ ಬೆಂಕಿ ನಂದಿಸಿದ್ರು. ಅಷ್ಟರಲ್ಲಿ ಮನೆಯಲ್ಲಿ ಇದ್ದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಎಂ.ಜಿ.ಸತ್ಯನಾರಾಯಣ, ಸಿಪಿಐ ಪ್ರದೀಪ್ ತಳಕೇರಿ ಮತ್ತು ಪಿಎಸ್ಐ ಬಸವರಾಜ್ ಭೇಟಿ ನೀಡಿ ಪರಿಶೀಲಿಸಿ ಮೃತದೇಹಗಳನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ನಾಳೆ ಮಂಡ್ಯದಿಂದ ಪೋಷಕರು ಬಂದ ಬಳಿಕ ದೂರು ದಾಖಲಿಸಲಿದ್ದಾರೆ.
ಎನ್‌ಐಎ ತಂಡದ ವಾಹನ-ಬೈಕ್ ಡಿಕ್ಕಿ: ಸವಾರ ಸಾವು
ಪುತ್ತೂರು: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಸಂಚರಿಸುತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಘಟನೆ ಭಾನುವಾರ ರಾತ್ರಿ ಪುತ್ತೂರಿನಲ್ಲಿ ನಡೆದಿದೆ. ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ ಬಿ. (50) ಮೃತರು.
Vijayapura: ನಂದಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ ಪ್ರಕರಣ, ಓರ್ವ ಬಲಿ, ಐವರ ಸ್ಥಿತಿ
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಆರ್ಯಾಪು ಗ್ರಾಮದ ಸಂಪ್ಯ ಎಂಬಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರಾತ್ರಿ ವಿಶೇಷ ತನಿಖೆಯ ದೃಷ್ಟಿಯಿಂದ ಸಂಚರಿಸುತ್ತಿದ್ದ ಎನ್‌ಐಎ ತಂಡದ ಪೊಲೀಸ್ ವಾಹನ ಮತ್ತು ಬೈಕ್ ಪರಸ್ಪರ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಭಸಕ್ಕೆ ರಸ್ತೆಗೆಯಲ್ಪಟ್ಟ ಲಕ್ಷ್ಮಣ ನಾಯ್ಕ ತೀವ್ರ ಗಾಯಗೊಂಡು ಮೃತಪಟ್ಟರು.
Mysuru: ದಶಕದ ದಾಂಪತ್ಯಕ್ಕೆ ಅಡ್ಡ ಬಂದವನ ರುಂಡ ತುಂಡರಿಸಿದ ಗಂಡ!
ಪೊಲೀಸ್ ವಾಹನ ಜಿಲ್ಲೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ್ದಾಗಿದ್ದು, ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸಂದರ್ಭ ಪುತ್ತೂರಿನಿಂದ ಆರ್ಲಪದವು ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿತ್ತು. ನಾಯ್ಕ ಅವರು ಪತ್ನಿ ಹಾಗೂ ಇಬ್ನರು ಪುತ್ರಿಯರನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.