ಬಾಗಲಕೋಟೆ: ರಥಕ್ಕೆ ಹೊದಿಕೆ ಹಾಕುತ್ತಿದ್ದಾಗ ಮೇಲಿಂದ ಬಿದ್ದು ಪೂಜಾರಿ ಸಾವು!

By Kannadaprabha News  |  First Published Sep 19, 2024, 8:32 AM IST

ಶ್ರಾವಣದಲ್ಲಿ ರಥೋತ್ಸವ ಮುಗಿದು ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುತ್ತಿದ್ದ ವೇಳೆ ಕಾಲು ಜಾರಿ ರಥದ ಮೇಲಿಂದ ಬಿದ್ದು ಬಾಗಲಕೋಟೆ ಜಿಲ್ಲೆಯ ರಬಕವಿ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಪೂಜಾರಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ


ರಬಕವಿ-ಬನಹಟ್ಟಿ (ಸೆ.19): ಶ್ರಾವಣದಲ್ಲಿ ರಥೋತ್ಸವ ಮುಗಿದು ನಿಂತಿದ್ದ ರಥಕ್ಕೆ ಮೇಲು ವಸ್ತ್ರ ಹೊದಿಸುತ್ತಿದ್ದ ವೇಳೆ ಕಾಲು ಜಾರಿ ರಥದ ಮೇಲಿಂದ ಬಿದ್ದು ಬಾಗಲಕೋಟೆ ಜಿಲ್ಲೆಯ ರಬಕವಿ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಪೂಜಾರಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ರಬಕವಿಯ ತಿಪ್ಪಯ್ಯ ಗಿರಿಮಲ್ಲಯ್ಯ ಪೂಜಾರಿ (53) ಮೃತಪಟ್ಟವರು. ಶ್ರೀಮಲ್ಲಿಕಾರ್ಜುನ ದೇವಸ್ಥಾನದ ರಥೋತ್ಸವ ಶ್ರಾವಣ ಮಾಸದಲ್ಲಿ ಪೂರ್ಣಗೊಂಡಿತ್ತು. ಹೀಗಾಗಿ ರಥ ಪ್ರತಿವರ್ಷ ನಿಲ್ಲುವ ಸ್ಥಳದಲ್ಲೇ ನಿಂತಿತ್ತು. ಹೀಗಾಗಿ ರಥ ಧೂಳು ಹಿಡಿಯಬಾರದು ಎಂಬ ಕಾರಣಕ್ಕೆ ರಥಕ್ಕೆ ಮೇಲು ವಸ್ತ್ರ ಹೊದಿಕೆ ಹೊದಿಸಲಾಗುತ್ತದೆ. ಅದೇ ರೀತಿ ಈ ಸಾರಿ ಪೂಜಾರಿಗಳು ರಥದ ಮೇಲೆ ಹತ್ತಿ ಹೊದಿಕೆ ಹಾಕುತ್ತಿದ್ದ ವೇಳೆ ಏಕಾಏಕಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಇದೆ. ಈ ಕುರಿತು ತೇರದಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

undefined

ಮನೆ ಮುಂದಿನ ಕಸ ತೆಗೆಯದ್ದಕ್ಕೆ ಪೌರಕಾರ್ಮಿಕ ಮಹಿಳೆ ಮೇಲೆ ತಾಯಿ-ಮಗನಿಂದ ಹಲ್ಲೆ!

ಹುಬ್ಬಳ್ಳಿ: ಇಬ್ಬರು ಅಪರಿಚಿತರು ಸಾವು:

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಅಸ್ವಸ್ಥನಾದ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೇ ಕೆಎಂಸಿಆರ್‌ಐನಲ್ಲಿ ಮೃತಪಟ್ಟಿದ್ದಾನೆ. ಈತನಿಗೆ 60ರಿಂದ 65 ವರ್ಷ ಆಗಿರಬಹುದು ಎಂದು ಶಂಕಿಸಲಾಗಿದೆ. ಅದೇ ರೀತಿ ಹಾವೇರಿ ಜಿಲ್ಲೆಯ ಕಳಸೂರ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ. ಮೃತನು 45ರಿಂದ 50 ವಯಸ್ಸಿನವನಿರಬಹುದು ಎಂದು ಶಂಕಿಸಲಾಗಿದೆ. ಈ ಇಬ್ಬರ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ವಾರಸುದಾರರು ಇದ್ದಲ್ಲಿ 0836-2364751, 9480802126 ಸಂಪರ್ಕಿಸಬೇಕೆಂದು ಕೋರಲಾಗಿದೆ.

ಬೈಕ್ -ಟಿಪ್ಪರ್ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಮೂವರು ದುರ್ಮರಣ!

ಆತ್ಮಹತ್ಯೆ:

ರಾಣಿಬೆನ್ನೂರು-ದೇವರಗುಡ್ಡ ರೈಲ್ವೆ ನಿಲ್ದಾಣಗಳ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನು 55ರಿಂದ 60 ವರ್ಷದವನಿರಬಹುದು ಎಂದು ಶಂಕಿಸಲಾಗಿದೆ. ಬಿಳಿ ಬಣ್ಣದ ನೆಹರು ಅಂಗಿ, ನೀಲಿ ಬಣ್ಣದ ಚೆಕ್ಸ್‌ ಲುಂಗಿ, ಹಸಿರು ಬಣ್ಣದ ಗೇರೆಯುಳ್ಳ ಟಾವೆಲ್ ಧರಿಸಿದ್ದಾನೆ. ಈತನ ವಾರಸುದಾರರು ಇದ್ದಲ್ಲಿ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ 0836- 2364751 ಅಥವಾ 9380802126 ಸಂಪರ್ಕಿಸಲು ಕೋರಿದೆ.

click me!