ಬೆಂಗಳೂರು: ಟೊಮೆಟೋ ಬೆಳೆ ನಷ್ಟವಾಗಿದ್ದಕ್ಕೆ 55 ಲ್ಯಾಪ್‌ಟಾಪ್‌ ಕದ್ದ ಸಿಸ್ಟಂ ಅಡ್ಮಿನ್‌..!

Published : Sep 18, 2024, 09:38 AM IST
ಬೆಂಗಳೂರು: ಟೊಮೆಟೋ ಬೆಳೆ ನಷ್ಟವಾಗಿದ್ದಕ್ಕೆ 55 ಲ್ಯಾಪ್‌ಟಾಪ್‌ ಕದ್ದ ಸಿಸ್ಟಂ ಅಡ್ಮಿನ್‌..!

ಸಾರಾಂಶ

ವೈಟ್‌ಫೀಲ್ಡ್‌ನ ಐಟಿಪಿಎಲ್‌ನ ಟೆಲಿಕಾಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಒಂದೊಂದೇ ಲ್ಯಾಪ್‌ಟಾಪ್‌ಗಳು ಕಳುವಾಗುತ್ತಿದ್ದವು. ಈ ಸಂಬಂಧ ಕಂಪನಿ ಮಾಲೀಕ ಅತುಲ್ ಹ್ಯಾಲೆವ್ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. 

ಬೆಂಗಳೂರು(ಸೆ.18): ಮಾಡಿದ್ದ ಸಾಲ ತೀರಿಸಲು ತಾನು ಕೆಲಸಕ್ಕಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡುತ್ತಿದ್ದ ನೌಕರರನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಹೊಸೂರು ತಾಲೂಕಿನ ತೋರಪಲ್ಲಿ ನಿವಾಸಿ ಮುರುಗೇಶ್ (29) ಬಂಧಿತ, ಆರೋಪಿಯಿಂದ 22 ಲಕ್ಷ ಮೌಲ್ಯದ 55 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. 

ವೈಟ್‌ಫೀಲ್ಡ್‌ನ ಐಟಿಪಿಎಲ್‌ನ ಟೆಲಿಕಾಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಒಂದೊಂದೇ ಲ್ಯಾಪ್‌ಟಾಪ್‌ಗಳು ಕಳುವಾಗುತ್ತಿದ್ದವು. ಈ ಸಂಬಂಧ ಕಂಪನಿ ಮಾಲೀಕ ಅತುಲ್ ಹ್ಯಾಲೆವ್ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. 

ಮೈಸೂರು: ಕೈಕೊಟ್ಟ ಅತ್ತೆ ಮಗಳು, ಡೆತ್ ನೋಟ್ ಬರೆದು ಭಗ್ನಪ್ರೇಮಿ ನಾಪತ್ತೆ..!

ಬೆಳೆ ನಷ್ಟದಿಂದ ಸಾಲ ಹೆಚ್ಚಳ: 

ಆರೋಪಿ ಮುರುಗೇಶ್ ಬಿಸಿಎ ಪದವಿಧರನಾಗಿದ್ದು, ಕಳೆದ ಫೆಬ್ರವರಿಯಲ್ಲಿ ಐಟಿಪಿ ಎಲ್‌ನ ಟೆಲಿಕಾಲರ್‌ಕಂಪನಿಗೆ ಕೆಲಸಕ್ಕೆ ಸೇರಿದ್ದ. ಸ್ವಂತ ಊರಿನಲ್ಲಿ ಟೊಮೆಟೋ ಬೆಳೆದು ₹25 ಲಕ್ಷ ನಷ್ಟ ಅನುಭ ವಿಸಿದ್ದ. ಪರಿಚಿತರು, ಸ್ನೇಹಿತರ ಬಳಿ ಕೈಸಾಲ ಮಾಡಿ ಕೊಂಡು ಬಡ್ಡಿ ಪಾವತಿಸಲಾಗದೆ ಕಷ್ಟಪಡುತ್ತಿದ್ದ. ಹೀಗಾಗಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ದಿನಕ್ಕೊಂದು ಲ್ಯಾಪ್ ಟಾಪ್ ಕಳವು ಮಾಡುತ್ತಿದ್ದ. 

ಲ್ಯಾಪ್‌ಟಾಪ್ ಮಾರಿ ಬಡ್ಡಿ ತೀರಿಸಿದ ಕಳ್ಳ: 

ಕದ್ದ ಲ್ಯಾಪ್ ಟಾಪನ್ನು ಹೊಸೂರಿನ ಹಳೆಯ ಲ್ಯಾಪ್‌ಟಾಪ್ ರಿಪೇರಿ ಮತ್ತು ಮಾರಾಟ ಮಳಿಗೆಗೆ ಮಾರಾಟ ಮಾಡುತ್ತಿದ್ದ. ಅಂಗಡಿ ಮಾಲೀಕ ಬಿಲ್ ಕೇಳಿದಾಗ ತಂದು ಕೊಡು ವುದಾಗಿ ಹೇಳಿ ಪ್ರತಿ ಲ್ಯಾಪ್‌ಟಾಪ್‌ಗೆ 15-18 ಸಾವಿರ ಪಡೆಯುತ್ತಿದ್ದ. ಕಂಪನಿಯಲ್ಲಿ ಕಳವು ಮಾಡಿದ್ದ 45 ಲ್ಯಾಪ್ಟಾಪ್ ಮಾರಾಟ ಮಾಡಿ ಬಂದ ಹಣದಿಂದ ಸಾಲದ ಬಡ್ಡಿ ಪಾವತಿ ಮಾಡಿರುವುದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ