ಆ್ಯಕ್ಸಿಡೆಂಟ್ ಆದ ರೀತಿಯಲ್ಲಿ ಶವ ಪತ್ತೆ : ವ್ಯಕ್ತಿ ಸಾವಿನ ಹಿಂದೆ ಅನುಮಾನದ ಮೂಟೆ..!

By Suvarna News  |  First Published Aug 25, 2022, 10:23 PM IST

ಆ್ಯಕ್ಸಿಡೆಂಟ್ ಆದ ರೀತಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಇದರ ಹಿಂದೆ ಅನುಮಾನಗಳು ವ್ಯಕ್ತವಾಗಿವೆ. ಕೊಲೆ ಮಾಡಿ ಆ್ಯಕ್ಸಿಡೆಂಟ್ ಆಗಿದೆ ಎಂದು ಬಿಂಬಿಸಲು ಪಯತ್ನಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ವರದಿ; ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣನ್ಯೂಸ್
 

ಗದಗ, (ಆಗಸ್ಟ್.25): ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ‌-ಶಿರೂರು ಹಾಗೂ ಪೇಠಾಲೂರು ಗ್ರಾಮದಗಳ ಮಧ್ಯದ ರಸ್ತೆ ಮೇಲೆ ವ್ಯಕ್ತಿಯೋಬ್ಬನ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಶವ ಬಿಡಾಡಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ.. 

Tap to resize

Latest Videos

ಗದಗ ನಗರದ ಗಂಗಿಮಡಿ ಬಡಾವಣೆ ನಿವಾಸಿ ಮಾರುತಿ ಅಂಕಲಗಿ (26) ಎಂದು ಗುರುತಿಸಲಾಗಿದೆ.. RTO ಕಚೇರಿಯಲ್ಲಿ ಏಜೆಂಟ್ ಆಗಿದ್ದ ವ್ಯಕ್ತಿ ನಿನ್ನೆ(ಬುಧವಾರ) ರಾತ್ರಿ ಜಂತ್ಲಿ‌ ಶಿರೂರುಗೆ ಹೋಗಿದ್ದ.. ಅಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಅಪಘಾತ  ಆದ ರೀತಿಯಲ್ಲಿ ಮಾರುತಿ ಹೆಣ ಪತ್ತೆಯಾಗಿದೆ.

ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಸ್ಥಳ ಬಂದು ಪರಿಶೀಲನೆ ನಡೆಸಿದ್ದ ಸಿಪಿಐ  ವಿರೇಶ್ ಹಳ್ಳಿ ಆ್ಯಂಡ್ ಟೀಮ್ ಗೆ ಅದಾಗಲೇ ಇಲ್ಲಿ ಮರ್ಡರ್ ನಡೆದಿರೋ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮರಣೋತ್ತ ಪರೀಕ್ಷೆ ನಡೆಸಿ ಕೇಸ್ ದಾಖಲಿಸಿ ತನಿಖೆ ನಡೆಸೋದಕ್ಕೆ ಪೊಲೀಸರು ಮುಂದಾಗಿದಾರೆ..

ಕೊಲೆಯಾದ ಬಗ್ಗೆ ಕುಟುಂಬಸ್ಥರ ಅನುಮಾನ..
ರಸ್ತೆ ಪಕ್ಕದಲ್ಲಿ ಶವ ಪತ್ತೆಯಾಗಿದ್ದು, ಆ್ಯಕ್ಸಿಡೆಂಟ್ ಅಂತಾ ಹೇಳಲಾಗ್ತಿತ್ತು.. ಆದ್ರೆ ದೇಹ ಬಿದ್ದಿರುವ ಸ್ಥಿತಿ, ಚಪ್ಪಲಿಗೆ  ಮೆತ್ತಿಕೊಂಡಿದ್ದ ರಾಡಿಯಿಂದ, ಯಾರೋ ಅಟ್ಟಿಸಿಕೊಂಡು ಬಂದು ಹತ್ಯೆ ಮಾಡಿದ್ದಾರೆ ಅನ್ನೋದು ಕುಟುಂಬಸ್ಥರ ಅನುಮಾನವಾಗಿದೆ.. ಹೀಗಾಗಿ ರಾಮಣ್ಣ ಅಂಕಲಗಿ ಅವರು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಮಗ ಮಾರುತಿಯನ್ನು ಹತ್ಯೆ ಮಾಡಲಾಗಿದೆ ಅಂತಾ ಅನುಮಾನ ವ್ಯಕ್ತ ಪಡಿಸಿ ದೂರು ನೀಡಿದಾರೆ.. 

ನರಸಾಪುರದಲ್ಲಿರೋ ಅಕ್ಕ ರೇಣುಕಾ ಅವರ ಮನೆಗೆ ಸೋಮವಾರ ಹೋಗಿದ್ದ ಮಾರುತಿ ನಂತ್ರ ಕಂಡಿದ್ದು ಶವವಾಗಿ, ಅಲ್ಲಿಂದ ಕೆಲಸದ ಮೇಲೆ ಊರಿಗೆ ಹೋಗ್ತೇನೆ ಅಂತಾ ಕುಟುಂಬಸ್ಥರಿಗೆ ಹೇಳಿದ್ದ. ಹಬ್ಬಕ್ಕೆ ತವರು ಮನೆಗೆ ಹೋಗಿದ್ದ ಹೆಂಡತಿಗೆ ದಿನ ನಿತ್ಯ ಸಂಜೆ ಮಾರುತಿ ಫೋನ್ ಮಾಡ್ತಿದ್ದ.. ಆದ್ರೆ ನಿನ್ನೆ (ಬುಧವಾರ) ಫೋನ್ ಬಂದಿರಲಿಲ್ಲ.. ವಾಪಾಸ್ ಫೋನ್ ಮಾಡಿದ್ರೆ ನಾಟ್ ರೀಚೆಬಲ್ ಇತ್ತಂತೆ.. ರಾತ್ರಿ ವೇಳೆಗೆ ಮಾರುತಿ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬಂದಿದೆ.. 

ಆರ್ ಟಿಒ ಏಜೆಂಟ್ ಆಗಿದ್ದ ಮಾರುತಿ ಲೈಸನ್ಸ್ ಮಾಡಿಸಿ ಕೊಡೋದಕ್ಕೆ ಅಂತಾ ಊರು ಊರು ಅಡ್ಡಾಡ್ತಿದ್ದ.. ಕುಡಿತವೂ ಮಾರುತಿಯ ವೀಕ್ ನೆಸ್ ಆಗಿತ್ತು.. ಆಗಾಗ ಸ್ನೇಹಿತರೊಂದಿಗೆ ಪಾರ್ಟಿ ಅಂತೆಲ್ಲ ಹೋಗ್ತಿದ್ದ ಮಾರುತಿ ನಿನ್ನೆಯೂ ಹಾಗೇ ಹೋಗಿರ್ಬಹುದು ಅಂತಾ ಕುಟುಂಬಸ್ಥರು ಅನ್ಕೊಂಡಿದ್ರು.. ಆದ್ರೆ ಅನುಮಾನಾಸ್ಪದ ರೀತಿಯಲ್ಲಿ ಮೃತ ಪಟ್ಟಿದ್ದನ್ನ ನೋಡಿದ್ರೆ, ಕೊಲೆ ಮಾಡಿದ್ದು ಪಕ್ಕಾ, ಗೊಂದಲ ಮೂಡಿಸಿದ ಕೇಸ್ ಗೆ ಪೊಲೀಸರು ಸ್ಪಷ್ಟತೆ ಕೊಡ್ಬೇಕು ಅಂತಾ ಮಾರುತಿ ಕುಟುಂಬಸ್ಥರು ಆಗ್ರಹಿಸ್ತಿದ್ದಾರೆ..

ಎಸ್ ಪಿ ಶಿವಪ್ರಕಾಶ್ ದೇವರಾಜು ಮಾರ್ಗದರ್ಶನದಲ್ಲಿ ಈಗಾಗ್ಲೆ ತನಿಖೆ ನಡೀತಿದೆ.. ನರಗುಂದ ಡಿವೈಎಸ್ ಪಿ ಯಲ್ಲಪ್ಪಗೌಡ ಎಗನಗೌಡರ್ ನೇತೃತ್ವದಲ್ಲಿ ಟೀಮ್ ರೆಡಿ ಮಾಡ್ಲಾಗಿದೆ.. ಆದಷ್ಟು ಬೇಗ ಘಟನೆ ಬಗ್ಗೆ ವಿವರಣೆ ನೀಡ್ತೀವಿ.. ಕೊಲೆಯಾಗಿದ್ದಲ್ಲಿ ಅಪರಾಧಿಯನ್ನ ಬಂಧಿಸ್ತೀವಿ ಅಂತಾ ಎಸ್ ಪಿ‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ..

click me!