* ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದವರ ಮೇಲೆ ಪೊಲೀಸರ ದಾಳಿ
* ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ
* ಈ ಸಂಬಂಧ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಹೂವಿನಹಡಗಲಿ(ಮಾ.11): ತಾಲೂಕಿನ ಬ್ಯಾಲಹುಣ್ಸಿ ಗ್ರಾಮದ ತುಂಗಭದ್ರಾ ನದಿ(Tungabhadra River) ತೀರದಲ್ಲಿ ಕಬ್ಬಿಣದ ತೆಪ್ಪಗಳ ಮೂಲಕ, ಅಕ್ರಮವಾಗಿ ಮರಳು(Sand) ಸಾಗಣೆ ಮಾಡುತ್ತಿದ್ದವರ ಮೇಲೆ ಪೊಲೀಸರು(Police) ದಾಳಿ ಮಾಡಿದ್ದಾರೆ.
ಬೇಸಿಗೆ ಬಂದ ಕಾರಣ ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಗದಗ(Gadag) ಜಿಲ್ಲೆಯ ಅಕ್ರಮ ಮರಳು ದಂಧೆಕೋರರು, ಕಬ್ಬಿಣದ ತೆಪ್ಪಗಳನ್ನು ಬಳಸಿಕೊಂಡು ಮರಳು ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್ ಹಾಗೂ ಹೂವಿನಹಡಗಲಿ(Huvinahadagali) ಸಿಪಿಐ ರಮೇಶ ಕುಲಕರ್ಣಿ ಇವರ ಮಾರ್ಗದರ್ಶನದಲ್ಲಿ ಹಿರೇಹಡಗಲಿ ಠಾಣೆಯ ಪಿಎಸ್‌ಐ ದಾದವಲಿ ಹಾಗೂ ಇವರ ಸಿಬ್ಬಂದಿ ದಾಳಿ(Raid) ಮಾಡಿದ್ದಾರೆ.
undefined
Vijayanagara| ಎತ್ತಿನ ಬಂಡಿಯಲ್ಲಿ ಅಕ್ರಮ ಮರಳು ಸಾಗಾಟ..!
ದಾಳಿ ವೇಳೆ ತಲಾ 10 ಸಾವಿರ ಮೌಲ್ಯದ 8 ಕಬ್ಬಿಣದ ತೆಪ್ಪಗಳನ್ನು ವಶಕ್ಕೆ ಪಡೆಯಲಾಗಿದೆ. ಕಬ್ಬಿಣದ ತೆಪ್ಪಗಳ ಮೂಲಕ ಮರಳು ಸಂಗ್ರಹಿಸುತ್ತಿದ್ದ ಕಾರ್ಮಿಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗದಗ ಜಿಲ್ಲೆಯ ಭಾಗದಲ್ಲಿ ನದಿ ತೀರದಲ್ಲಿ ಮರಳಿನ ಲಭ್ಯತೆ ಇಲ್ಲದ ಕಾರಣ ಹೂವಿನಹಡಗಲಿ ಗಡಿ ಭಾಗದಲ್ಲಿ ಅತಿ ಹೆಚ್ಚು ಮರಳು ಸಂಗ್ರಹವಾಗಿದ್ದು ಆ ಮರಳಿನ ಲೂಟಿಗೆ ಮುಂದಾಗಿದ್ದಾರೆ.
ನದಿಯಲ್ಲಿ ಗದಗ ಜಿಲ್ಲೆಯ ಜೀತು ಪಾಟೀಲ್ ಎಂಬುವರು ಮರಳನ್ನು ಕಬ್ಬಿಣದ ತೆಪ್ಪಗಳ ಮೂಲಕ ಸಾಗಾಣಿಕೆ ಮಾಡಲು ಕೆಲ ಕೂಲಿ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಮಾಹಿತಿ ಇದ್ದು, ಮರಳು ಅಕ್ರಮ ದಂಧೆಯ ಮೇಲೆ ದಾಳಿಗೆ ಪೊಲೀಸರು ಮುಂದಾಗುತ್ತಿದಂತೆಯೇ ಕಬ್ಬಿಣದ ತೆಪ್ಪದಲ್ಲಿದ್ದ ಆರೋಪಿಗಳು ತೆಪ್ಪಗಳನ್ನು ನೀರಿನಲ್ಲಿ ಬಿಟ್ಟು ನದಿಯಲ್ಲಿ ಈಜಿಕೊಂಡು ಪರಾರಿಯಾಗಿದ್ದಾರೆ. ಜೀತು ಪಾಟೀಲ್ ಎಂಬುವ ವ್ಯಕ್ತಿ ಮೇಲೆ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತರ ಜಮೀನಲ್ಲೇ ಅಕ್ರಮ ಮರಳುಗಾರಿಕೆ: ಗ್ರಾಮಸ್ಥರ ಆಕ್ರೋಶ
ಲಕ್ಷ್ಮೇಶ್ವರ: ನದಿ, ಹಳ್ಳಗಳಲ್ಲಿ ‘ಅಕ್ರಮ ಮರಳುಗಾರಿಕೆ’(Illegal Sand Mining) ನಡೆಸುತ್ತಿದ್ದ ದಂಧೆಕೋರರ ಕಣ್ಣೀಗ ರೈತರ(Farmers) ಜಮೀನಿನ ಮೇಲೆ ಬಿದ್ದಿದೆ!. ಸಮೀಪದ ಬಟ್ಟೂರ ಗ್ರಾಮದ ಪಕ್ಕದಲ್ಲಿ ಹರಿಯುತ್ತಿರುವ ಹಳ್ಳದ ಅಕ್ಕಪಕ್ಕದ ಜಮೀನಿನಲ್ಲಿಯೇ(Land) ‘ಅಕ್ರಮ ಮರಳು ಗಣಿಗಾರಿಕೆ’ ಅವ್ಯಾಹತವಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆಯ(Revenue Department) ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಬಟ್ಟೂರ ಗ್ರಾಮದ ಪಕ್ಕದಲ್ಲಿ ಹರಿಯುತ್ತಿರುವ ಹಳ್ಳ ಹಾಗೂ ಪಕ್ಕದಲ್ಲಿನ ಪಟ್ಟಾ ಜಮೀನಿನಲ್ಲಿ ಹುದುಗಿರುವ ಮರಳನ್ನು ಅಕ್ರಮವಾಗಿ ಎತ್ತಿ ಟ್ರ್ಯಾಕ್ಟರ್ ಮತ್ತು ಟ್ರಕ್‌ಗಳ ಮೂಲಕ ಸಾಗಾಟದ ದಂಧೆ ಜೋರಾಗಿದೆ. ಕಳೆದ ಹಲವು ವರ್ಷಗಳಲ್ಲಿ ಹಳ್ಳದಲ್ಲಿ ಸಂಗ್ರಹವಾಗುತ್ತಿದ್ದ ಮರಳನ್ನು ಮಾತ್ರ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದ ಅಕ್ರಮ ಮರಳುಗಳ್ಳರು, ಈಗ ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಜೆಸಿಬಿ(JCB) ಮೂಲಕ ಕಂದಕ ತೋಡಿ ಅದರಲ್ಲಿ ಅಡಗಿರುವ ಮರಳನ್ನು ಎತ್ತಿ ರಾಜಾರೋಷವಾಗಿ ಸಾಗಿಸುತ್ತಿದ್ದರು.
ಕೊಪ್ಪಳ: ಗಣಿ ಸಚಿವ ಆಚಾರ್ ಸ್ವಕ್ಷೇತ್ರದಲ್ಲೇ ಎಗ್ಗಿಲ್ಲದೆ ನಡೀತಿದೆ ಅಕ್ರಮ ಮರಳುಗಾರಿಕೆ
ಮರಳು ದಂಧೆಕೋರರು ಜಮೀನಿನ ಮಾಲೀಕರಿಗೆ ಹಣದ(Money) ಆಸೆ ತೋರಿಸುತ್ತಾರೆ. ಬಳಿಕ ಮನಸೋ ಇಚ್ಛೆಯಾಗಿ ಮರಳು ತೆಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಈ ರೀತಿಯ ಮರಳುಗಾರಿಕೆಯಿಂದ ಜಮೀನಿನಲ್ಲಿನ ಬೆಳೆಯೂ(Crop Damage) ಹಾಳಾಗುತ್ತಿದೆ. ಅಲ್ಲದೆ ಕೃಷಿ ಯೋಗ್ಯ ಭೂಮಿ ಮೇಲ್ಪದರದ ಫಲವತ್ತಾದ ಮಣ್ಣಲ್ಲಿ ಹಳ್ಳ ತೋಡುವುದರಿಂದ ಜಮೀನು ನಾಶವಾಗುತ್ತಿದೆ. ಜೆಸಿಬಿ ಮೂಲಕ ಹೊಲದಲ್ಲಿ ಹಳ್ಳ ತೋಡಿ ಹಾಗೆ ಬಿಡುವುದರಿಂದ ನೀರು ತುಂಬಿಕೊಂಡಿರುವ ಗುಂಡಿಯ ಆಳ ಗೊತ್ತಾಗದೆ ಮಕ್ಕಳು ಈಜಲು ಹೋಗಿ ಗುಂಡಿಯಲ್ಲಿ ಬಿದ್ದು ಪ್ರಾಣ ಬಿಟ್ಟ ಉದಾಹರಣೆಗಳು ಸಾಕಷ್ಟಿದ್ದರೂ ಅಕ್ರಮ ಮರಳು ಗಣಿಗಾರಿಕೆ ಮಾಡುವವರಿಗೆ ಇದ್ಯಾವುದು ಕಣ್ಣಿಗೆ ಕಾಣಿಸುತ್ತಿಲ್ಲ.
ಬಟ್ಟೂರ ಗ್ರಾಮದ ಪಟ್ಟಾ ಜಮೀನಿನಲ್ಲಿ ಬಿತ್ತನೆ ಮಾಡಿದ್ದರೂ ಅದನ್ನೂ ಲೆಕ್ಕಿಸದೆ ಜೋಳ, ಶೇಂಗಾ, ಮೆಣಸಿನಕಾಯಿ, ಈರುಳ್ಳಿ ಮತ್ತು ಬಿಟಿ ಹತ್ತಿ ಬೆಳೆಯ ಹೊಲಗಳಲ್ಲಿ ಟ್ರ್ಯಾಕ್ಟರ್‌ಗಳನ್ನು ಹಾಯಿಸಿಕೊಂಡು ಹೋಗುವ ಮೂಲಕ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಅಹೋರಾತ್ರಿ ಅಕ್ರಮವಾಗಿ ಮರಳು ಎತ್ತಿ ಹೊಲಗಳಲ್ಲಿ ಹಾದು ಹೋಗುತ್ತಿರುವ ಮರಳು ಕಳ್ಳರನ್ನು ಪ್ರಶ್ನಿಸಿದರೆ ಅವರಿಗೆ ಬೆದರಿಕೆ ಹಾಕುವ ಮೂಲಕ ದರ್ಪ ತೋರಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ರೈತರು ಅಳಲು ತೋಡಿಕೊಂಡಿದ್ದರು.