Bengaluru Crime: ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ದಂಧೆ: ಮಹಿಳೆಯರಿಂದಲೇ ಹೇಯ ಕೃತ್ಯ..!

By Girish Goudar  |  First Published Mar 11, 2022, 4:27 AM IST

*  ಟೈಲರಿಂಗ್‌ ಕಲಿಯಲು ಬರ್ತಿದ್ದ ಬಾಲಕಿಗೆ ಜ್ಯೂಸ್‌ನಲ್ಲಿ ಪ್ರಜ್ಞೆ ತಪ್ಪಿಸುವ ಔಷಧಿ ಕುಡಿಸಿ ಅತ್ಯಾಚಾರ
*  ಬ್ಲ್ಯಾಕ್‌ಮೇಲ್‌ ಮಾಡಿ ವೇಶ್ಯಾವಾಟಿಕೆಗೆ ಬಳಕೆ
*  ದೂರು ದಾಖಲಾದ 36 ತಾಸಿನೊಳಗೆ ತಪ್ಪಿತಸ್ಥರೆಲ್ಲರ ಬಂಧನ
 


ಬೆಂಗಳೂರು(ಮಾ.11): ಟೈಲರಿಂಗ್‌ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು(Minor Girl) ವೇಶ್ಯಾವಾಟಿಕೆ(Prostitution) ದಂಧೆಗೆ ತಳ್ಳಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಕಿಡಿಗೇಡಿಗಳು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ.

ಬಂಡೇಪಾಳ್ಯ ಸಮೀಪದ ರಾಜೇಶ್ವರಿ, ಕಲಾವತಿ, ತಮಿಳುನಾಡು(Tamil Nadu) ಹೊಸೂರಿನ ಕೇಶವಮೂರ್ತಿ, ಕೋರಮಂಗಲದ ಸತ್ಯರಾಜ್‌, ಯಲಹಂಕದ ಶರತ್‌ ಹಾಗೂ ಬೇಗೂರಿನ ರಫೀಕ್‌ ಬಂಧಿತರು(Arrest). ತಮ್ಮ ಮನೆಗೆ ಟೈಲರಿಂಗ್‌ ಕಲಿಯಲು ಬರುತ್ತಿದ್ದ 16 ವರ್ಷದ ಅಪ್ರಾಪ್ತ ಬಾಲಕಿಗೆ ಕಲಾವತಿ ಹಾಗೂ ರಾಜೇಶ್ವರಿ ಬೆದರಿಸಿ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದರು. ಈ ಕಾಟ ಸಹಿಸಲಾರದೆ ಸಂತ್ರಸ್ತೆ, ಎಚ್‌ಎಸ್‌ಆರ್‌ ಲೇಔಟ್‌ ಠಾಣೆಗೆ ತನ್ನ ಪೋಷಕರ ಜತೆ ಭಾನುವಾರ ತೆರಳಿ ದೂರು(Complaint) ಸಲ್ಲಿಸಿದ್ದಳು. ದೂರಿನ ಅನ್ವಯ ಪೊಲೀಸರು, ಕೃತ್ಯ ಬೆಳಕಿಗೆ ಬಂದ 36 ತಾಸಿನೊಳಗೆ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

Bengaluru Crime: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ದಾಳಿ

ಟೈಲರಿಂಗ್‌ ನೆಪದಲ್ಲಿ ವೇಶ್ಯಾವಾಟಿಕೆ

ಬಂಡೇಪಾಳ್ಯ ಸಮೀಪ ನೆಲೆಸಿದ್ದ ರಾಜೇಶ್ವರಿ ಹಾಗೂ ಕಲಾವತಿ, ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು. ಆದರೆ ತಮ್ಮ ವ್ಯವಹಾರ ಜನರಿಗೆ ಗೊತ್ತಾದಂತೆ ಮನೆಯಲ್ಲಿ ಟೈಲರಿಂಗ್‌ ಕೆಲಸ ಮಾಡುತ್ತಿದ್ದರು. ಕೊರೋನಾ ಸೋಂಕಿನ ಕಾಲದಲ್ಲಿ ಜನರಿಗೆ ಪಿಪಿಇ ಕಿಟ್‌ಗಳು ಹಾಗೂ ಮಾಸ್ಕ್‌ಗಳನ್ನು ಕೂಡಾ ಹೊಲಿದು ಕೊಟ್ಟು ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿದ್ದರು. ಇದರಿಂದ ನೆರೆಹೊರೆಯ ಮಹಿಳೆಯರೊಂದಿಗೆ(Women) ಉತ್ತಮ ಸ್ನೇಹ ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಮನೆಗೆ ಕೆಲ ದಿನಗಳ ಹಿಂದೆ ಟೈಲರಿಂಗ್‌ ಕಲಿಯಲು ತಮ್ಮ ಮಗಳನ್ನು ಆಕೆಯ ಪೋಷಕರು ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Bengaluru: ವೇಶ್ಯಾವಾಟಿಕೆಗೆ ದೆಹಲಿಗೆ ಸಾಗಿಸುತ್ತಿದ್ದ. ಯುವತಿಯನ್ನು ರಕ್ಷಿಸಿದ CISF ಅಧಿಕಾರಿಗಳು

ಆಗ ಮನೆಯಲ್ಲಿ ಬಾಲಕಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಮದ್ದು ಬೆರೆಸಿದ ರಾಜೇಶ್ವರಿ ಹಾಗೂ ಕಲಾವತಿ, ಬಳಿಕ ಆಕೆಯ ಮೇಲೆ ತಮ್ಮ ಪರಿಚಿತ ಕೇಶವ ಮೂರ್ತಿಯಿಂದ ಅತ್ಯಾಚಾರ(Rape) ಮಾಡಿಸಿದ್ದಾರೆ. ಇದಾದ ನಂತರ ಸಂತ್ರಸ್ತೆಗೆ(Victim) ‘ನಿನ್ನ ಪೋಷಕರಿಗೆ ನಡೆದ ಘಟನೆ ಹೇಳುತ್ತೇವೆ’ ಎಂದು ಬ್ಲ್ಯಾಕ್‌ಮೇಲ್‌ ಮೂಲಕ ವೇಶ್ಯಾವಾಟಿಕೆ ಕೂಪಕ್ಕೆ ಆಕೆಯನ್ನು ತಳ್ಳಿದ್ದರು. ಈ ಮಹಿಳೆಯರ ಸಂಪರ್ಕದಲ್ಲಿದ್ದ ರಫೀಕ್‌, ಸತ್ಯ ಹಾಗೂ ಶರತ್‌ ಸಹ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ್ದರು(Sexual Harrassment). ತನ್ನ ಪೋಷಕರಿಗೆ ಹೆದರಿ ಆರೋಪಿಗಳ ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಂಡ ಬಾಲಕಿ, ಕೊನೆಗೆ ಹಿಂಸೆ ಸಹಿಸಲಾರದೆ ತನ್ನ ಪೋಷಕರಿಗೆ ಭಾನುವಾರ ನಡೆದ ಸಂಗತಿ ಹೇಳಿ ಕಣ್ಣೀರಿಟ್ಟಿದ್ದಾಳೆ. ಕೂಡಲೇ ಪೋಷಕರು ಎಚ್‌ಎಸ್‌ಆರ್‌ ಲೇಔಟ್‌ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು ಎಂದು ಮೂಲಗಳು ಹೇಳಿವೆ.

4 ತಂಡಗಳ ಮಿಂಚಿನ ಕಾರ್ಯಾಚರಣೆ

ಈ ಕೃತ್ಯದ ವಿಚಾರ ತಿಳಿದ ಕೂಡಲೇ ಎಚ್‌ಎಸ್‌ಆರ್‌ ಲೇಔಟ್‌ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ಅಧಿಕಾರಿಗಳು ನಾಲ್ಕು ವಿಶೇಷ ತಂಡಗಳನ್ನು ರಚಿಸಿದರು. ಸಂತ್ರಸ್ತೆಗೆ ತನ್ನ ಮೇಲೆ ಅತ್ಯಾಚಾರ ಎಸಗಿದವರ ಪರಿಚಿಯವಿರಲಿಲ್ಲ. ಹೀಗಾಗಿ ಮೊದಲು ರಾಜೇಶ್ವರಿ ಹಾಗೂ ಕಲಾವತಿಯನ್ನು ಬಂಧಿಸಲಾಯಿತು. ಬಳಿಕ ಅವರು ನೀಡಿದ ಮಾಹಿತಿ ಮೇರೆಗೆ ಹೊಸೂರು, ಬೇಗೂರು, ಯಲಹಂಕ ಹಾಗೂ ಕೋರಮಂಗಲದಲ್ಲಿ ಇನ್ನುಳಿದ ನಾಲ್ವರು ಸೆರೆ ಸಿಕ್ಕರು. ಈ ಆರೋಪಿಗಳ ಪೈಕಿ ಕೇಶವಮೂರ್ತಿ ತಮಿಳುನಾಡಿನ ಹೊಸೂರಿನಲ್ಲಿ ಖಾಸಗಿ ಕಂಪನಿಯ ಪ್ರಧಾನ ವ್ಯವಸ್ಥಾಪಕನಾಗಿದ್ದು, ಹಲವು ವರ್ಷಗಳಿಂದ ಕಲಾವತಿ ಜತೆ ಆತನಿಗೆ ‘ಆತ್ಮೀಯ ಸ್ನೇಹ’ ಇತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!