Bengaluru Drug Bust: ಕುರ್ಕುರೆ, ಚಕ್ಕುಲಿ ಪ್ಯಾಕೆಟಲ್ಲಿ ಡ್ರಗ್ಸ್‌ ತುಂಬಿಸಿ ಮಾರಾಟ..!

By Girish GoudarFirst Published Mar 11, 2022, 5:26 AM IST
Highlights

*   ಒಡಿಶಾದಿಂದ ಬೆಂಗಳೂರಿಗೆ ತಂದು ಮಾರಾಟ
*   ಚಾಲಾಕಿ ಪೆಡ್ಲರ್‌ವೊಬ್ಬನ ಬಂಧನ
*   ಖಚಿತ ಮಾಹಿತಿ ಪಡೆದು ಸಿಸಿಬಿ ಪೊಲೀಸರ ಕಾರ್ಯಾಚರಣೆ 
 

ಬೆಂಗಳೂರು(ಮಾ.11):  ಖಾದ್ಯ ತಿನಿಸು ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಗ್ರಾಹಕರಿಗೆ(Customers) ಮಾರಾಟ ಮಾಡುತ್ತಿದ್ದ ಚಾಲಾಕಿ ಪೆಡ್ಲರ್‌ವೊಬ್ಬ ಸಿಸಿಬಿ ಪೊಲೀಸರ(CCB Police) ಬಲೆಗೆ ಬಿದ್ದಿದ್ದಾನೆ. ಮೈಕೋ ಲೇಔಟ್‌ ಸಮೀಪದ ನಿವಾಸಿ ಗೋಳಕ್‌ ಬೆಹೇರಾ ಬಂಧಿತ(Arrest). ಆರೋಪಿಯಿಂದ(Accused) 8 ಲಕ್ಷ ಮೌಲ್ಯದ ಗಾಂಜಾ(Marijuana) ಹಾಗೂ .60 ಸಾವಿರ ನಗದು ಜಪ್ತಿ ಮಾಡಲಾಗಿದೆ. ಒಡಿಶಾ ಮೂಲದ ಗೋಳಕ್‌, ಕಳೆದ ಎಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ತನ್ನೂರಿನಿಂದ ಗಾಂಜಾ ತಂದು ನಗರದಲ್ಲಿ ಆರೋಪಿ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ತನ್ನೂರಿನಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದ್ದ ಗಾಂಜಾವನ್ನು ಆರೋಪಿ, ಚಕ್ಕುಲಿ, ಕುರ್ಕುರೆ ಹೀಗೆ ತಿನಿಸುಗಳ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಗ್ರಾಹಕರಿಗೆ ಪೂರೈಸುತ್ತಿದ್ದ. ನಗರದಲ್ಲಿ(Bengaluru) ನೆಲೆಸಿರುವ ಒಡಿಶಾ ಮೂಲದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಆತ ದಂದೆ ನಡೆಸುತ್ತಿದ್ದ. ತಲಾ 5 ಗ್ರಾಂಗೆ ಕಾರ್ಮಿಕರಿಗೆ .500ಗೆ ಮಾರುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Drugs Racket in Bengaluru: ಮೂವರು ಪೆಡ್ಲರ್‌ಗಳ ಸೆರೆ: 80 ಕೆಜಿ ಗಾಂಜಾ ಜಪ್ತಿ

ಈ ದಂಧೆಗೆ ವಿವಿಧ ಕಂಪನಿಗಳ ಖಾದ್ಯ ತಿನಿಸುಗಳ ಕವರ್‌ಗಳನ್ನು ಆತ ಸಂಗ್ರಹಿಸುತ್ತಿದ್ದ. ಬಳಿಕ ಅವುಗಳಲ್ಲಿ ಗಾಂಜಾ ತುಂಬಿ ಸೆಲ್ಲೊ ಟೆಪ್‌ ಹಾಕಿ ಪ್ಯಾಕ್‌ ಮಾಡಿದ ನಂತರ ಆತ, ಒಡಿಶಾದಿಂದ ನಗರಕ್ಕೆ ರೈಲಿನಲ್ಲಿ ಸಾಗಿಸುತ್ತಿದ್ದ. ಮೇಲ್ನೋಟಕ್ಕೆ ಖಾದ್ಯ ತಿನಿಸು ಪೊಟ್ಟಣಗಳಂತೆ ಕಾಣುತ್ತಿದ್ದರಿಂದ ಸಲುಭವಾಗಿ ರೈಲಿನ ಪಯಣದ ವೇಳೆ ಪೊಲೀಸರನ್ನು ಸಹ ಆರೋಪಿ ಸುಲಭವಾಗಿ ಕಣ್ತಪ್ಪಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಂಜಾ ಚಾಕ್ಲೆಟ್‌ ಮಾರುತ್ತಿದ್ದ ಒಡಿಶಾ ಮೂಲದ ಇಬ್ಬರು ಅರೆಸ್ಟ್‌

ಬೆಂಗಳೂರು: ಗಾಂಜಾ(Marijuana) ಚಾಕ್ಲೆಟ್‌ ಮಾರಾಟ ಮಾಡುತ್ತಿದ್ದ ಒಡಿಸ್ಸಾ ಮೂಲದ ಇಬ್ಬರು ಡ್ರಗ್ಸ್‌ ಪೆಡ್ಲರ್‌ಗಳನ್ನು ಮಹದೇವಪುರ ಠಾಣೆ ಪೊಲೀಸರು(Police) ಬಂಧಿಸಿದ ಘಟನೆ ಮಾ.04 ರಂದು ನಡೆದಿತ್ತು.   

ಒಡಿಸ್ಸಾದ ಬಿನಕಾಪುರ ಗ್ರಾಮದ ಪ್ರದೀಪ್‌ ಕುಮಾರ್‌ ರಾವುತ್‌(33) ಮತ್ತು ಬಾಸುದೇವ್‌ ಗ್ರಾಮದ ಎಸ್‌.ಕೆ.ಸಜಾನ್‌ ಆಲಿ (27) ಬಂಧಿತರು. ಆರೋಪಿಗಳಿಂದ(Accused) 2 ಲಕ್ಷ ಮೌಲ್ಯದ ಒಂದು ಕೆ.ಜಿ.ಗಾಂಜಾ, 18 ಕೆ.ಜಿ. ತೂಕದ 3200 ಗಾಂಜಾ ಚಾಕ್ಲೆಟ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎ.ನಾರಾಯಣಪುರದ ಮಹದೇವಪುರ ರಿಂಗ್‌ ರಸ್ತೆಯ ಮೇಲ್ಸೇತುವೆ ಕೆಳಗೆ ಇಬ್ಬರು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

Bengaluru Crime: ಒಡಿಶಾದಿಂದ ಗಾಂಜಾ ತಂದು ಮಾರುತ್ತಿದ್ದ ಪೆಡ್ಲರ್‌ಗಳ ಸೆರೆ

ಆರೋಪಿಗಳು ಒಡಿಸ್ಸಾದ ಬೆಟ್ಟಗುಡ್ಡಗಳಲ್ಲಿ ತಾವೇ ಗಾಂಜಾ ಬೆಳೆದು ಬಳಿಕ ಅದನ್ನು ಕತ್ತರಿಸಿ ಎಲೆ, ಹೂವು, ಕಾಂಡಾ ಬೇರ್ಪಡಿಸಿ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ದುಬಾರಿ ದರಕ್ಕೆ ಗಾಂಜಾ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ರೈಲಿನಲ್ಲಿ(Railway) ಲಗೇಜ್‌ ಬ್ಯಾಗ್‌ನಲ್ಲಿ ಗಾಂಜಾ ಹಾಗೂ ಗಾಂಜಾ ಚಾಕ್ಲೆಟ್‌ ಬಚ್ಚಿಟ್ಟುಕೊಂಡು ನಗರಕ್ಕೆ ತರುತ್ತಿದ್ದರು. ಬಳಿಕ ಜಿಗಣಿ, ಎಲೆಕ್ಟ್ರಾನಿಕ್‌ ಸಿಟಿ ಸುತ್ತಮುತ್ತಲಿನ ಪಾನ್‌ಶಾಪ್‌ಗಳು ಹಾಗೂ ಗಿರಾಕಿಗಳನ್ನು(Customers) ಹುಡುಕಿ ಗಾಂಜಾ ಚಾಕ್ಲೆಟ್‌ ಮಾರಾಟ ಮಾಡುತ್ತಿದ್ದರೆಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಚಕ್ಕುಲಿ-ನಿಪ್ಪಟ್ಟು ಮಾರೋದು ಬಿಟ್ಟು ಗಾಂಜಾ ದಂಧೆಗೆ ಇಳಿದ ಇಬ್ಬರ ಸೆರೆ!

ಬೆಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್‌ ರಾಜ್ಯ ಡ್ರಗ್ಸ್‌ ಪೆಡ್ಲರ್‌ಗಳನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಫೆ. 28 ರಂದು ನಡೆದಿತ್ತು. ತಮಿಳುನಾಡಿನ ಹೊಸೂರು ಮೂಲದ ಪ್ರಕಾಶ್‌(30) ಮತ್ತು ಸುಂದರ್‌ ಪಾಂಡೆ(32) ಬಂಧಿತರು. ಆರೋಪಿಗಳಿಂದ ಬರೋಬ್ಬರಿ 21 ಕೆ.ಜಿ. ತೂಕದ ಗಾಂಜಾ, .440 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
 

click me!