
ಮೈಸೂರು (ಫೆ. 09) ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಕೊಳ್ಳಲು ಯತ್ನಿಸಿದ ಹಲ್ಲೆಕೋರರ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗುಂಡಿನ ದಾಳಿ ನಡೆಸಿದ್ದಾರೆ.
ಹುಣಸೂರು ತಾಲೂಕಿನ ಹಂದನಹಳ್ಳಿ ಗೇಟ್ ಬಳಿಯ ಗುಡ್ಡೇ ಬಸವೇಶ್ವರ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
ಪೊಲೀಸ್ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಜಯಂತ್ ಎಂಬಾತನ ಕಾಲಿಗೆ ಗುಂಡೇಟು ತಗಲಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ಇಬ್ಬರು ಪೊಲೀಸರನ್ನು ಹುಣಸೂರು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೈಲ್ಡ್ ಪೋರ್ನ್‌ಗೆ ದಾಸನಾಗಿದ್ದವ ಮಾಡಿದ ನೀಚ ಕೆಲಸ.. ಛೀ
ಬಿಳಿಕೆರೆ ಪೊಲೀಸ್ ಠಾಣೆಯ ಎಸ್‌ಐ ಜಯ ಪ್ರಕಾಶ್ ಅವರು, ಹಲ್ಲೆಕೋರ ಜಯಂತ್‌ನ ಕಾಲಿಗೆ ರಿವಾಲ್ವಾರ್‌ನಿಂದ ಗುಂಡು ಹಾರಿಸಿದ್ದಾರೆ. ಜಯಂತ್ ಎಂಬಾತ ಪೊಲೀಸ್ ಪೇದೆಗಳಾದ ಮುಖ್ಯ ಪೇದೆ ರವಿ ಮತ್ತು ಪೇದೆ ರವಿ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸುತ್ತಿದ್ದಾಗ, ಎಸ್‌ಐ ಜಯಪ್ರಕಾಶ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಜ. 22 ರಂದು ಕೆ.ಆರ್. ನಗರದಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬಿಳಿಕೆರೆ ಬಳಿಯ ಹೊಸ ರಾಮನಹಳ್ಳಿಯ ರಸ್ತೆಯಲ್ಲಿ ಬೈಕ್ ಸಂಚಾರಕ್ಕೆ ಜಾಗ ಮಾಡ ಬಿಡಲಿಲ್ಲ ಎಂದು ಆಕ್ರೊಶಗೊಂಡ ಮೂವರು, ಬಸ್ ಅನ್ನು ಅಡ್ಡ ಗಟ್ಟಿ ಚಾಲಕ ವೆಂಕಟೇಶ್ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದರು. ಈ ಸಂಬಧ ಪ್ರಕರಣ ದಾಖಲಿಸಿಕೊಂಡ ಬಿಳಿಕೆರೆ ಪೊಲೀಸರು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು.
ಮೂವರು ಆರೋಪಿಗಳು ಮೊಳಕಾಲ್ಮೂರಿನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿಹಲ್ಲೆ ನಡೆಸಿದ ಜಯಂತ್, ವಿಘ್ನೆಶ್ ಮತ್ತು ದೀಪಕ್‌ನನ್ನು ವಶಕ್ಕೆ ಪಡೆದು, ಬಿಳಿಕೆರೆ ಪೊಲಿಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರವಿ ಕುಮಾರ್ ಮತ್ತುಎಸ್‌ಐ ಜಯ ಪ್ರಕಾಶ್ ಮೈಸೂರಿಗೆ ಕರೆದುಕೊಂಡು ಬರುವಾಗ, ಮಾರ್ಗ ಮದ್ಯೆ ಮೂತ್ರ ವಿಸರ್ಜನೆ ಮಾಡಬೇಕೆಂದು ಜಯಂತ್ ವಾಹನ ನಿಲ್ಲಿಸುವಂತೆ ಹೇಳಿದ್ದಾನೆ.
ಈ ವೇಳೆ ಕಾರನ್ನು ನಿಲ್ಲಿಸಿ, ಇಬ್ಬರು ಪೇದೆಗಳು ಆತನೊಂದಿಗೆ ತೆರಳಿದ್ದಾರೆ. ಈ ವೇಳೆ ಪೊಲಿಸ್ ಸಿಬ್ಬಂದಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ಜಯಂತ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಎಸ್‌ಯ ಜಯ ಪ್ರಕಾಶ್, ತಪ್ಪಿಸಿಕೊಂಡು ಹೋಗುತ್ತಿದ್ದ ಜಯಂತ್‌ನ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ. ಗಾಯಗೊಂಡ ಪೇದೆಗಳನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುಂಡೇಟಿನಿಂದ ಗಾಯಗೊಂಡ ಜಯಂತ್‌ನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ