ಬಾರ್ ನಲ್ಲಿ ಗಲಾಟೆ, ಮರ್ಮಾಂಗ ಕಳೆದುಕೊಂಡ ಮಧ್ಯವಯಸ್ಕ!

Published : Feb 09, 2021, 05:54 PM ISTUpdated : Feb 09, 2021, 06:02 PM IST
ಬಾರ್ ನಲ್ಲಿ ಗಲಾಟೆ, ಮರ್ಮಾಂಗ ಕಳೆದುಕೊಂಡ ಮಧ್ಯವಯಸ್ಕ!

ಸಾರಾಂಶ

ಕ್ಷುಲ್ಲಕ ಗಲಾಟಗಳು ಒಮ್ಮೊಮ್ಮೆ ವಿಕೋಪಕ್ಕೆ ಹೋಗಿ ಬಿಡುತ್ತವೆ/  ಗಾಡಿ ಟಚ್ ಮಾಡಿಕೊಂಡಿದ್ದಕ್ಕೆ ಇಬ್ಬರ ನಡುವೆ ಕಿರಿಕ್/ ಸಿಟ್ಟಿನಿಂದ ಮರ್ಮಾಂಗವನ್ನೇ ಕಚ್ಚಿ ತುಂಡರಿಸಿದ

ತಿರುವನಂತಪುರ/ ತ್ರಿಶೂರ್ (ಫೆ. 09)   ಒಮ್ಮೊಮ್ಮೆ ಕೆಲವು ಗಲಾಟೆ ಎಂಥ ವಿಕೋಪಕ್ಕೆ ತಿರುಗುತ್ತದೆ ಎಂಬುದನ್ನು ಹೇಳಲು ಅಸಾಧ್ಯ.  ಬಾರ್ ನಲ್ಲಿ ಕ್ಷುಲ್ಲಕ ಕಾಣಕ್ಕೆ ನಡೆದ ಘಟನೆ ವಿಕೋಪಕ್ಕೆ ಹೋಗಿದೆ. ಸಿಟ್ಟಿನಲ್ಲಿ ಒಬ್ಬ ಯುವಕ ಇನ್ನೊಬ್ಬ ವ್ಯಕ್ತಿಯ ಮರ್ಮಾಂಗವನ್ನೇ ಕಚ್ಚಿ  ತುಂಡರಿಸಿದ್ದಾನೆ!

ಕೇರಳದ ಕುನ್ನಾಥುರ್ ನಲ್ಲಿ ಈ ಘಟನೆ ನಡೆದಿದೆ.  28 ವರ್ಷದ ಶರೀಫ್, 55 ವರ್ಷದ ಸುಲೇಮಾನ್ ಎಂಬಾತನ ಮರ್ಮಾಂಗ ಕತ್ತರಿಸಿ ತುಂಡು ಮಾಡಿದ್ದಾನೆ.   ಗಾಯಾಳು ಸುಲೇಮಾನ್ ನನ್ನು ತ್ರಿಶೂರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.  ಶಸ್ತ್ರಚಿಕಿತ್ಸೆ ನಡೆಸಿ ತುಂಡಾದ ಮರ್ಮಾಂಗವನ್ನು ಮರು ಜೋಡಣೆ ಮಾಡಲಾಗಿದೆ.

ಮದುವೆಗೆ ಮೂರು ದಿನ ಇದ್ದಾಗ ಸ್ನೇಹಿತರಿಂದ ಹುಡುಗನ ಪುರುಷತ್ವಕ್ಕೆ ಕತ್ತರಿ

ಶರೀಫ್ ಪೆರುಂಬಾದಪ್ಪು ನಿವಾಸಿಯಾಗಿದ್ದು, ಸುಲೇಮಾನ್ ರಿಹಾಇಶ್ ಪುನ್ನುಕಾವುನಲ್ಲಿ ವಾಸವಾಗಿದ್ದರು. ಬಾರ್ ಆಗಮಿಸುವ ವೇಳೆ ಶರೀಫ್ ಆಟೋ ರಸ್ತೆಯಲ್ಲಿ ಕಾರ್ ಗೆ ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲೇ ಒಮ್ಮೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದಾದ ಮೇಲೆ ಬಾರ್ ಗೆ  ಬಂದಾಗ ಮತ್ತೆ ಮುಖಾ ಮುಖಿಯಾಗಿದ್ದರು.

ಬಾರ್ ನಲ್ಲಿ ಘಟನೆ ನಡೆದಿದ್ದು ತಕ್ಷಣವೇ ಅಲ್ಲಿದ್ದ ಗ್ರಾಹಕರು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ದಾರೆ. ಆರೋಪಿ ಶರೀಫ್ ಮೇಲೆ ಹಿಂದೆಯೂ  ಹಲ್ಲೆ ಪ್ರಕರಣಗಳು ದಾಖಲಾಗಿದ್ದವು. ಒಂದು ಸಾರಿ ಜೈಲು ಸೇರಿ  ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು