ಕೋಲ್ಕತ್ತಾ(ಫೆ.  09)  ಮಕ್ಕಳ  ಪೋರ್ನ್ ನೋಡುತ್ತ ಅದಕ್ಕೆ ದಾಸನಾಗಿದ್ದ ವ್ಯಕ್ತಿ ಕೊನೆಗೆ ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಬಿರಿಯಾನಿ ಮತ್ತು ಚಿಪ್ಸ್ ಆಸೆ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆ. 9 ವರ್ಷದ ಬಾಲಕಿ ದಾರುಣ ಅಂತ್ಯ ಕಂಡಿದ್ದಾಳೆ.

ಆರೋಪಿಯನ್ನು ರಣವೀರ್ ತಂತಿ ಅಲಿಯಾಸ್ ರಘುವೀರ್ ಎಂದು ಗುರುತಿಸಲಾಗಿದೆ. 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಗೊತ್ತಾಗಿದೆ. ರಾಮ್ ಕುಮಾರ್ ಎಂಬಾತ ಈ ರಣವೀರ್‌ಗೆ ಚಾಕುವೊಂದನ್ನು  ನೀಡಿದ್ದು ಗೊತ್ತಾಗಿದೆ.

ಪೋರ್ನ್ ವಿಡಿಯೋ ಶೂಟ್ ಮಾಡುತ್ತಿದ್ದ ನಟಿ ಬಂಧನ

ಬಾಲಕಿ ಮನೆಗೆ ಕಾಯಂ ಭೇಟಿ  ನೀಡುತ್ತಿದ್ದ. ಬಾಲಕಿ ಆತನನ್ನು ಅಂಕಲ್ ಎಂದು ಕರೆಯುತ್ತಿದ್ದಳು. ಅವಕಾಶ ಬಳಸಿಕೊಂಡು ನೀಚ ಕೆಲಸ ಮಾಡಿದ್ದಾನೆ.  ನೀಚ ಬಾಲಕಿಯನ್ನು ಲಾಲ್‌ಬಜಾರ್‌ಗೆ ಕರೆದುಕೊಂಡು ಹೋಗಿದ್ದಾನೆ. ಕೊನೆಗೆ  ಈತನ ಗೆಳೆಯ ಸಹ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು ಆತನನ್ನು ಬಂಧಿಸಲಾಗಿದೆ.

ಆರೋಪಿಯ ಮೊಬೈಲ್ ಪರಿಶೀಲನೆ ಮಾಡಿದಾಗ ಮಕ್ಕಳನ್ನು ಬಳಸಿಕೊಂಡು ತೆಗೆದ ಅಶ್ಲೀಲ ಚಿತ್ರಗಳು ಪತ್ತೆಯಾಗಿವೆ.  ಮಕ್ಕಳ ಪೋರ್ನ್‌ ಗೆ ಈತ ಅಡಿಕ್ಟ್ ಆಗಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.