ತುಮಕೂರಿನಲ್ಲಿ ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆ: ಆರೋಪಿ ಅಂದರ್

By Govindaraj S  |  First Published Feb 25, 2023, 9:03 AM IST

ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆಯಾಗಿದ್ದು, ದಂಧೆಯಲ್ಲಿ ತೊಡಗಿದ್ದ ತಿಪಟೂರಿನ ವ್ಯಕ್ತಿ ವಿರುಪಾಕ್ಷಿ ಗೌಡ ಅಲಿಯಾಸ್ ಪಕ್ಷಿಗೌಡನನ್ನು ಮಾಲು ಸಮೇತ ಕೇರಳ ಪೊಲೀಸರು ಬಂಧಿಸಿದ್ದಾರೆ. 


ತುಮಕೂರು (ಫೆ.25): ಜಿಲ್ಲೆಯ ತಿಪಟೂರು ಪಟ್ಟಣದಲ್ಲಿ ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆಯಾಗಿದ್ದು, ದಂಧೆಯಲ್ಲಿ ತೊಡಗಿದ್ದ ತಿಪಟೂರಿನ ವ್ಯಕ್ತಿ ವಿರುಪಾಕ್ಷಿ ಗೌಡ ಅಲಿಯಾಸ್ ಪಕ್ಷಿಗೌಡನನ್ನು ಮಾಲು ಸಮೇತ ಕೇರಳ ಪೊಲೀಸರು ಬಂಧಿಸಿದ್ದಾರೆ. ತಿಪಟೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಫ್ತಿಯಲ್ಲಿದ್ದ ಪೊಲೀಸರಿಗೇ 15 ಲಕ್ಷದಷ್ಟು ಬೆಲೆಬಾಳುವ ತಿಮಿಂಗಿಲ ವಾಂತಿ ಮಾಲು ಮಾರಾಟ ಮಾಡಲು ಯತ್ನಿಸುತ್ತಿದ್ದ ವಿರುಪಾಕ್ಷಿಗೌಡ ಕೇರಳ ಪೊಲೀಸರಿಗೆ ಮಾಲು ಸಮೇತ ತಗ್ಲಾಕ್ಕೊಂಡಿದ್ದು, ಇದೀಗ ಅಂದರ್ ಆಗಿದ್ದಾನೆ. ಇನ್ನು ಮಾಲು ಕೊಂಡುಕೊಳ್ಳೋ ವೇಷದಲ್ಲಿ ಕೇರಳ ಪೊಲೀಸರು ಬಂದಿದ್ದು, ವಿರುಪಾಕ್ಷಿ ಗೌಡನನ್ನು ಬಂಧಿಸಿದ್ದಾರೆ.

3.2 ಕೋಟಿ ರು. ಮೌಲ್ಯದ ಅಂಬರ್‌ ಗ್ರೀಸ್‌ ವಶ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೆಲೆಬಾಳುವ ಅಂಬರ್‌ ಗ್ರೀಸ್‌ (ತಿಮಿಂಗಿಲ ವಾಂತಿ)ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಅಪರಾಧ ಪತ್ತೆದಳ ವಿಭಾಗದ ಪೊಲೀಸರು ಬಂಧಿಸಿದ್ದು, 3.2 ಕೋಟಿ ರು. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಪಡ್ಯಾರು ಮನೆ ನಿಮಿತ್‌ (26), ಪುಂಜಾಲಕಟ್ಟೆ ಕುಕ್ಕಳ ಮನೆ ಯೋಗೀಶ್‌ (41) ಬಂಧಿತರು.

Latest Videos

undefined

ತುಮಕೂರಿನಲ್ಲಿ ಸದ್ದು ಮಾಡಿದ ಪೇ ಎಂಎಲ್ಎ ಪೋಸ್ಟರ್: ಶಾಸಕ ಜ್ಯೋತಿಗಣೇಶ್ ವಿರುದ್ಧ ಅಭಿಯಾನ

ನಗರದ ಲಾಲ್‌ಭಾಗ್‌ನ ಕರಾವಳಿ ಮೈದಾನ ಪರಿಸರದಲ್ಲಿ ಅಂಬರ್‌ ಗ್ರೀಸ್‌ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್‌ ಶ್ಯಾಮ್‌ ಸುಂದರ್‌ ಎಚ್‌.ಎಂ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಹಿಡಿದಿದ್ದಾರೆ. ಆರೋಪಿಗಳ ಬಳಿಯಿಂದ 3.2 ಕೆಜಿ ತೂಕದ ಅಂಬರ್‌ ಗ್ರೀಸ್‌ ಹಾಗೂ 2 ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3.2 ಕೋಟಿ ರು. ಮೌಲ್ಯವಿದೆ. ಈ ಬಗ್ಗೆ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಪಿಎಸ್‌ಐಗಳಾದ ರಾಜೇಂದ್ರ ಬಿ., ಸುದೀಪ್‌ ಎಂ.ವಿ. ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಚುನಾವಣಾ ರಾಜಕೀಯಕ್ಕಷ್ಟೆ ವಿದಾಯ: ಬಿ.ಎಸ್‌.ಯಡಿಯೂರಪ್ಪ

ರಾಣೆಬೆನ್ನೂರಲ್ಲಿ 1 ಕೋಟಿ ತಿಮಿಂಗಿಲ ವಾಂತಿ ಜಪ್ತಿ: ಸುಮಾರು .1 ಕೋಟಿ ಮೌಲ್ಯದ ಅಂಬರ ಗ್ರೀಸ್‌ (ತಿಮಿಂಗಿಲ ವಾಂತಿ) ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಶಹರ ಠಾಣೆಯ ಪೊಲೀಸರು ನಗರದ ಎನ್‌ವಿ ಹೋಟೆಲ್‌ ಬಳಿ ಬಂಧಿಸಿದ್ದಾರೆ. ಬೈಕ್‌ನಲ್ಲಿ ಬಂದ ಆರೋಪಿಗಳು 4.7 ಕೆಜಿ ತೂಕದ ತಿಮಿಂಗಲ ವಾಂತಿಯನ್ನು ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಹಾನಗಲ್ಲ ತಾಲೂಕಿನ ಕೂಡಲದ ಜಗದೀಶ ಪರಶೆಟ್ಟಿ, ಹಾವೇರಿಯ ಶಿವಾಜಿ ನಗರದ ಬಸವರಾಜ ರಿತ್ತಿ ಬಂಧಿತ ಆರೋಪಿಗಳು. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

click me!